ಡ್ಯಾನ್ಸಿಂಗ್ ಸ್ಟಾರ್
ಡ್ಯಾನ್ಸ್ ಅಂದ್ರೆ ಬಳ್ಳಿಯಂತ ಬೆಡಗಿಯರಿಗೆ ಮಾತ್ರ ಸೀಮಿತ ಎಂದುಕೊಳ್ಳುವವರಿಗೆ 'ಯಾರ್ ಬೇಕಾದ್ರು ಕುಣೀಬಹುದು' ಎಂದಿದ್ದು ಈಟಿವಿ ವಾಹಿನಿಯ 'ಡ್ಯಾನ್ಸಿಂಗ್ ಸ್ಟಾರ್'. ಕಿರುತೆರೆ ನಿರೂಪಣೆಯಲ್ಲಿ ಹೊಸ ಅಲೆ ಮೂಡಿಸಿದ ಅಕುಲ್ ಬಾಲಾಜಿ ಆ್ಯಂಕರಿಂಗ್ನಲ್ಲಿ ಈ ಕಾರ್ಯಕ್ರಮ ಮೂಡಿ ಬರುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10 ಗಂಟೆಗೆ ಪ್ರಸಾರವಾಗುವ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿ ಮಾತಿನ ಮಲ್ಲ ನಿರ್ದೇಶಕ ಗುರುಪ್ರಸಾದ್, ನಟಿ ರಕ್ಷಿತಾ, ಲೂಸ್ಮಾದ ಯೋಗೀಶ್ ಇದ್ದಾರೆ.
ಈ ಎರಡೂ ಕಾರ್ಯಕ್ರಮಗಳು ಈಟಿವಿ ಮಟ್ಟಿಗೆ ಟಿಆರ್ಪಿಯಲ್ಲೂ ಹೊಸ ದಾಖಲೆ ಮಾಡುತ್ತಿವೆ ಎಂದು ವಾಹಿನಿಯ ನಾನ್ಫಿಕ್ಷನ್ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳುತ್ತಾರೆ.
ಕಾಮಿಡಿ ಸರ್ಕಲ್
ಕಿರುತೆರೆಯ ನಾನ್ ಫಿಕ್ಷನ್ ಕಾರ್ಯಕ್ರಮ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ರಿಯಾಲಿಟಿ ಶೋ ಅಂದರೆ 'ಕಾಮಿಡಿ ಸರ್ಕಲ್'. ಕಳೆದ ಎರಡು ತಿಂಗಳುಗಳಿಂದ ಈಟಿವಿ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 10 ರಿಂದ 11 ಗಂಟೆಗೆ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರಿಗೆ ಅದ್ಭುತ ಕಾಮಿಡಿ ಟಾನಿಕ್ನಂತೆ ಈ ಕಾರ್ಯಕ್ರಮ ಕೆಲಸ ಮಾಡುತ್ತಿದೆ.