ಬಾಲ್ಯದಲ್ಲಿ ಕಾಗದದ ಚೂರುಗಳ ಮೇಲೆ ತೋಚಿದ್ದನ್ನು ಗೀಚುತಿದ್ದ. ಈಗ ಹೆಸರಾಂತ ಚಿತ್ರ ಸಾಹಿತಿ.
=
ಗಂಡನಿಗೆ ಹೊಡೆಯುತ್ತಿದ್ದ ಹೆಂಡತಿ, ಗಂಡನ ಮಾನ ಉಳಿಸುವ ಸಲುವಾಗಿ, ಸ್ವತಃ ತಾನೆ ಅಳುತ್ತಿದ್ದಳು.
=
ರವಿಯ ಅಗಲಿಕೆಯ ವಿರಹ ತಾಪದಿಂದ ನರಳುತಿದ್ದ ವಸುಂಧರೆಯ ಕಂಡ ಮಳೆರಾಯ ಕಣ್ಣೀರು ಸುರಿಸಿದ.
=
ಚಿಂದಿ ಉಟ್ಟ ಪ್ರೇಯಸಿಯನ್ನು ದೂರ ತಳ್ಳಿದ ಪ್ರೇಮಿ, ತುಂಡುಡುಗೆ ಹುಡುಗಿಯ ಹಿಂದೆ ನಾಯಿಯಂತೆ ಅಲೆಯುತ್ತಿದ್ದಾನೆ.
=
'ನಿಮ್ಮ ನಟನೆಯ ಹಿಂದಿರುವ ಶಕ್ತಿ ಯಾರು?' ಪ್ರಶ್ನೆಗೆ, 'ಕನ್ನಡಿ' ಎಂದು ಉತ್ತರಿಸಿದ ಪ್ರಸಿದ್ಧ ನಟ.
- ಗಂಗಾಚಾರಿ