ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಗರ ಜೀವನದ ಆಕರ್ಷಣೆ!

ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸುವ ತಂದೆ-ತಾಯಿಯರು ಮಕ್ಕಳಿಂದ ಬಯಸುವುದು ಕೊನೆಗಾಲದ ಆಸರೆಯನ್ನಷ್ಟೇ, ಬೇರೇನು ಅಲ್ಲ. ..

Rashmi Kasaragodu
Updated On : 5 Jan 2014, 2:44 am

ತಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸುವ ತಂದೆ-ತಾಯಿಯರು ಮಕ್ಕಳಿಂದ ಬಯಸುವುದು ಕೊನೆಗಾಲದ ಆಸರೆಯನ್ನಷ್ಟೇ, ಬೇರೇನು ಅಲ್ಲ. ಮಕ್ಕಳು ವಿದ್ಯಾಭ್ಯಾಸದ ನೆಪದಲ್ಲಿ ನಗರ ಸೇರುತ್ತಾರೆ. ಅಲ್ಲಿನ ಜೀವನಕ್ಕೆ ಬೇಗ ಒಗ್ಗಿಕೊಂಡು ಕೊನೆಗೊಂದು ದಿನ ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡು ಅಲ್ಲೇ ನೆಲೆಸುತ್ತಾರೆ. ವಯಸ್ಸಾದ ತಂದೆ-ತಾಯಿ ಹಳ್ಳಿಯಲ್ಲಿಯೇ ಉಳಿಯಬೇಕಾಗುತ್ತದೆ. ತಮ್ಮ ಹೆಂಡತಿ-ಮಕ್ಕಳೊಂದಿಗೆ ಬ್ಯುಸಿಯಾಗುವ ಅವರು ತಂದೆ-ತಾಯಿಯನ್ನು ನೋಡಲು ಮರೆಯುತ್ತಾರೆ. ಮಕ್ಕಳು ಖುಷಿಯಾಗಿರುವುದನ್ನು ದೂರದಿಂದಲೇ ಕಂಡು ಕೊನೆಯ ಕ್ಷಣಗಳನ್ನು ಕಳೆಯುತ್ತಾರೆ. 'ಎಲ್ಲರ ಮನೆಯ ದೋಸೆ ತೂತು' ಎಂಬಂತೆ ಎಲ್ಲರ ಮನೆಯಲ್ಲಿ ನಡೆಯುವುದು ಇಷ್ಟೇ. ಒಮ್ಮೆ ಜನಗಣತಿ ದಾಖಲೆ ಗಮನಿಸಿದರೆ ಸತ್ಯ ಗೊತ್ತಾಗುತ್ತದೆ. ಹೀಗಾಗಿ ಹಳ್ಳಿಗಳು ವೃದ್ಧಾಶ್ರಮಗಳಂತೆಯೇ ಕಾಣುತ್ತಿವೆ. ಇನ್ನು ಮುಂದಾದರೂ ತಂದೆ-ತಾಯಿಯನ್ನು ಒಂಟಿಯಾಗಿ ಬಿಡದೆ ಅವರ ಕೊನೆಗಾಲಕ್ಕೆ ಆಸರೆಯಾಗಲಿ ಎಂದು ಬಯಸುತ್ತೇನೆ.
-ನವೀನ್ ಎನ್., ಗೌರಿಬಿದನೂರು

ಖುಷಿ ಕೊಡದ ಕೃಷಿ!
ಭಾರತ ಮುಖ್ಯವಾಗಿ ಕೃಷಿ ಪ್ರಧಾನ ರಾಷ್ಟ್ರ, ಶೇ.70ರಷ್ಟು ಜನರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಕಳಪೆ ಬೀಜ-ರಸಗೊಬ್ಬರ, ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವುದು, ವಿದ್ಯುತ್ ಸಮಸ್ಯೆಯಿಂದಾಗಿ ರೈತರಿಗೆ ಕಾಲಕಾಲಕ್ಕೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಒಂದೊಮ್ಮೆ ಒಳ್ಳೆಯ ಬೆಳೆ ಬಂದರೂ ಮಾರುಕಟ್ಟೆಗಳಲ್ಲಿ ದಲ್ಲಾಳ್ಳಿಗಳಿಂದಾಗಿ ಬೆಲೆಯೂ ಕೈ ಸೇರುವುದಿಲ್ಲ. ಇಂದು ರೈತರು ಜೀವನಕ್ಕಾಗಿ ಕೃಷಿ ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಮತ್ತೊಂದು ಕಡೆ ರೈತರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕೆಂಬ ದೃಷ್ಟಿಯಿಂದ ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ ಇದರ ಫಲವಾಗಿ ಇಂದು ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹುಟ್ಟಿದ ನೆಲ, ಬೇರುಗಳನ್ನು ಇಂದಿನ ಪೀಳಿಗೆ ಯವರು ನಿರ್ದಾಕ್ಷಿಣ್ಯವಾಗಿ ಮರೆಯುತ್ತಿದ್ದಾರೆ.
-ವಿನಾಯಕ ಜಿ., ಹರಪನಹಳ್ಳಿ

ವೃದ್ಧರ ಆಶ್ರಯವಾಗಿವೆ
ರಾಷ್ಟ್ರಪಿತ ಮಹಾತ್ಮ ಗಾಂದೀಜಿ ಬಯಸಿದಂತೆ ಗ್ರಾಮಗಳು ಉದ್ಧಾರವಾಗದೇ ಕೇವಲ ವೃದ್ಧಾಶ್ರಮಗಳಾಗುತ್ತಿರುವುದು ವಿಷಾದನೀಯ. ಆಧುನಿಕ ಜೀವನ ಶೈಲಿಯ ಪರಿಣಾಮದ ಪ್ರತಿಫಲವಾಗಿ ಪ್ರಸ್ತುತ ಗ್ರಾಮೀಣ ಯುವ ಜನತೆಯನ್ನು ನಗರವು ಅತಿಯಾಗಿ ಆಕರ್ಷಿಸುತ್ತಿದ್ದು ಹಳ್ಳಿಗಳನ್ನು ಮರೆತು ನಗರ ವಾಸಿಗಳಾಗುತ್ತಿದ್ದಾರೆ. ವೃದ್ಧ ತಂದೆ ತಾಯಿಯರು ಹಳ್ಳಿಗಳನ್ನು ಬಿಡರು, ಮಕ್ಕಳು ಹಳ್ಳಿಗೆ ಬರರು. ಇಂತಹ ವಸ್ತುಸ್ಥಿತಿಯಲ್ಲಿ ಬದುಕು ನಡೆಸುತ್ತಿರುವುದು ದುರ್ದೈವದ ಸಂಗತಿ. 'ತಂದೆ ತಾಯಿ ದೇವರ ಸಮಾನ' ಎಂದು ತಿಳಿದಿದ್ದರೂ ಸಹ ತಮ್ಮದೇ ಆದ ಆಧುನಿಕ ಬದುಕನ್ನು ರೂಪಿಸಿಕೊಂಡು ಹೆತ್ತವರನ್ನು ನಿರ್ಲಕ್ಷಿಸಲಾಗುತ್ತಿದೆ. ಮಕ್ಕಳ ಬಗ್ಗೆ ಅಪಾರ ಆಸೆ, ಕನಸುಗಳನ್ನು ಕಟ್ಟಿಕಂಡು ಬೆಳೆಸಿರುತ್ತಾರೆ. ಇದನ್ನು ಇಂದಿನ ಮಕ್ಕಳು ಅರಿಯಬೇಕು. <
-ನಿರ್ಮಲಾ ಮಹಾಂತೇಶ ರಾಜಗೋಳಿ, ಬೈಲಹೊಂಗಲ



'ಜಗುಲಿ'ಯಲ್ಲಿ ಈ ಸಲದ ವಿಷಯ 'ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆಯೇ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments