ಶಿಖರವೇರಿದ ಮೆಟ್ಟಿಲುಗಳನ್ನು ಮರೆಯಬಾರದು!
ಸ್ವಾಮೀಜಿಯು ಅಲ್ವರ್ ರಾಜ್ಯಕ್ಕೆ ಬಂದಾಗ ಅಲ್ಲಿಯ ಜನ ವೈಭವದ ಸ್ವಾಗತ ನೀಡಿ ಬರಮಾಡಿಕೊಂಡರು. ಹಲವಾರು...
ಸ್ವಾಮೀಜಿಯು ಅಲ್ವರ್ ರಾಜ್ಯಕ್ಕೆ ಬಂದಾಗ ಅಲ್ಲಿಯ ಜನ ವೈಭವದ ಸ್ವಾಗತ ನೀಡಿ ಬರಮಾಡಿಕೊಂಡರು. ಹಲವಾರು ಜನ ಸ್ವಾಮೀಜಿಯನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಸತ್ಕರಿಸಿದರು. ಹಿಂದೆ ಸ್ವಾಮೀಜಿ ಪರಿವ್ರಾಜಕರಾಗಿ ಇಲ್ಲಿಗೆ ಬಂದಿದ್ದಾಗ ಒಬ್ಬಳು ಬಡಮುದುಕಿಯ ಮನೆಯಲ್ಲಿ ಊಟ ಮಾಡಿದ್ದರು. ಈ ಸಲವೂ ಸ್ವಾಮೀಜಿಯನ್ನು ಉಪಚರಿಸಬೇಕೆಂಬ ಆಸೆ ಆ ಮುದುಕಿಗೆ. ಆದರೆ ಅವರನ್ನು ನಗರದ ಭಾರೀ ಶ್ರೀಮಂತರೆಲ್ಲ ಆಮಂತ್ರಿಸುತ್ತಿದ್ದಾರೆ. ಹೀಗಿರುವಾಗ ತಾನು ಅವರನ್ನು ಹೇಗೆ ಕರೆಯಬಲ್ಲೆ? ಒಂದು ವೇಳೆ ತಾನು ಕರೆದು ಅವರು ಒಪ್ಪಿ ಬಂದರೂ ತನ್ನ ಬಡ ಅಡುಗೆ ಅವರಿಗೆ ಹಿಡಿಸೀತೆ? ಎಂದೆಲ್ಲ ಮುದುಕಿ ಚಿಂತಿಸಿದಳು.
ಆದರೆ ದೊಡ್ಡವರ ನಡತೆಯೇ ಬೇರೆ! ಆ ಮುದುಕಿ ತಾನಾಗಿಯೇ ಸ್ವಾಮೀಜಿಯನ್ನು ಕರೆಯಬೇಕಾಗಿರಲಿಲ್ಲ. ಸ್ವತಃ ಸ್ವಾಮೀಜಿಯೇ ಅವಳಿಗೆ ಹೇಳಿಕಳುಹಿಸಿದರು. ನಾವು ಅವಳ ಮನೆಗೆ ಬರುತ್ತಿದ್ದೇವೆ, ಹಿಂದಿನಂತೆಯೇ ದಪ್ಪನೆಯ ಚಪಾತಿ ಮಾಡಿ ಹಾಕಬೇಕು ಎಂದು. ಇದನ್ನು ಕೇಳಿ ಮುದುಕಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸ್ವಾಮೀಜಿ ತಮ್ಮ ಸಂಗಡಿಗರೊಂದಿಗೆ ಬಂದರು. ಅವರಿಗೆಲ್ಲ ಚಪಾತಿ ಬಡಿಸುತ್ತಾ ಆ ಮುದುಕಿ, 'ಮಗು, ನಿಮಗೆಲ್ಲ ಒಳ್ಳೆಯ ಅಡುಗೆ ಮಾಡಿ ಬಡಿಸಬೇಕು ಅಂತ ನನ್ನ ಆಸೆ. ಆದರೆ ನಾನು ಬಡವಿ. ಅದೆಲ್ಲ ನನ್ನಿಂದ ಎಲ್ಲಾದೀತಪ್ಪಾ?' ಎಂದಳು. ಆಗ ಸ್ವಾಮೀಜಿ ತಮ್ಮ ಶಿಷ್ಯರಲ್ಲಿ, 'ನೋಡಿ, ಈಕೆಗೆ ಎಷ್ಟು ಭಕ್ತಿ, ಎಷ್ಟು ವಾತ್ಸಲ್ಯ! ಇವಳು ಮಾಡಿರುವ ಚಪಾತಿಗಳು ಎಷ್ಟು ಸಾತ್ವಿಕವಾಗಿವೆ ನೋಡಿ!' ಎಂದು ಕೊಂಡಾಡಿದರು. ಬಳಿಕ ಶಿಷ್ಯರ ಮೂಲಕ ಮುದುಕಿಗೆ ಕಾಣದಂತೆ ಆ ಮನೆಯ ಯಜಮಾನನಿಗೆ ಸ್ವಲ್ಪ ಧನಸಹಾಯ ಒದಗಿಸಿ ನಡೆದರು.
-ಆನಂದ ಎಸ್.ಎನ್.
anandsn193@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.