ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆ್ಯಂಟಿಬಯೊಟಿಕ್ಸ್!

Lingaraj Badiger
Updated On : 6 Jan 2014, 4:56 am

ನಮ್ಮ ದೇಹದಲ್ಲಿ ರೋಗಗಳನ್ನು ಉಂಟುಮಾಡುವ ಅತಿ ಸೂಕ್ಷ್ಮಜೀವಿಗಳನ್ನು ಕೊಲ್ಲುವಂತಹ ವಿಶೇಷ ಬಗೆಯ ಔಷಧಗಳಿಗೆ ಆ್ಯಂಟಿಬಯೊಟಿಕ್ಸ್ (Antibiotics) ಎನ್ನುತ್ತಾರೆ. ಇಂದು ಅನೇಕ ರೋಗಗಳನ್ನು ಗುಣಪಡಿಸಲು ಇವುಗಳನ್ನು ಬಳಸಲಾಗುತ್ತದೆ. 'ಆ್ಯಂಟಿಬಯೊಟಿಕ್ಸ್‌' ಎನ್ನುವ ಶಬ್ದ ಆ್ಯಂಟಿಬಯಾಸಿಸ್ ಎಂಬುದರಿಂದ ಬಂದಿದೆ. 'ಆ್ಯಂಟಿ' ಎಂದರೆ ವಿರುದ್ಧವಾದದ್ದು ಮತ್ತು 'ಬಯಾಸಿಸ್‌' ಎಂದರೆ ಜೀವ ಎಂದರ್ಥ. ಇದು ಕೆಲವು ಬಗೆಯ ಸೂಕ್ಷ್ಮಜೀವಿಗಳ ವಿರುದ್ಧ ಮಾತ್ರ ಕೆಲಸ ಮಾಡುತ್ತದೆ. ನಿಜವಾಗಿ ಬ್ಯಾಕ್ಟೀರಿಯಾ ಮೋಲ್ಡ್ ಮತ್ತು ಕೆಲವು ಸಸ್ಯಗಳ ಸೂಕ್ಷ್ಮಜೀವಿಗಳ ದೇಹದಿಂದ ತೆಗೆದ ರಾಸಾಯನಿಕ ಪದಾರ್ಥಗಳೇ ಆ್ಯಂಟಿ ಬಯೊಟಿಕ್ಸ್.
ಆ್ಯಂಟಿಬಯಾಟಿಕ್ಸ್ ಪದ ಮೊದಲು ಬಳಕೆಗೆ ಬಂದಿದ್ದು 1942ರಲ್ಲಿ. ಮೊಟ್ಟಮೊದಲ ಆ್ಯಂಟಿಬಯೊಟಿಕ್ಸ್ ಔಷಧದ ಹೆಸರು ಪೆನ್ಸಿಲಿನ್. ಈ ಔಷಧ ನಿಮೋನಿಯಾ, ಕೆಮ್ಮು, ಗಂಟಲು ಊತ ಇತ್ಯಾದಿಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಯಿತು. ಆ್ಯಂಟಿಬಯೊಟಿಕ್ ಔಷಧ ಇಂಜೆಕ್ಷನ್ ಅಥವಾ ಕ್ಯಾಪ್ಸೂಲ್ ಮೂಲಕ ದೇಹಕ್ಕೆ ಸೇರಿದಾಗ ಅದು ರೋಗ ಹರಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement