ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೈಯ್ಯಗೆ ಪ್ರಶಸ್ತಿ

Lingaraj Badiger
Updated On : 8 Jan 2014, 5:41 am

ಬೈಟು ಕಾಫಿ ಅಂಕಣಕಾರ, ಆಹಾರ ತಜ್ಞ ಡಾ. ಪಿ. ಸದಾನಂದ ಮೈಯ್ಯ ಅವರು ಇಂಡಿಯನ್ ಸೈನ್ಸ್ ಮಾನಿಟರ್ (ಐಎಸ್‌ಎಂ) ನೀಡುವ ಪ್ರತಿಷ್ಠಿತ ಸರ್. ಜಗದೀಶ್ ಚಂದ್ರ ಬೋಸ್ ಸ್ಮಾರಕ ಪ್ರಶಸ್ತಿಗೆ  ಪಾತ್ರರಾಗಿದ್ದಾರೆ.
ಆಹಾರ ತಂತ್ರಜ್ಞಾನದಲ್ಲಿನ ಅವಿಷ್ಕಾರ ಮತ್ತು ವಿಶ್ಲೇಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮೈಯ್ಯ ಅವರಿಗೆ ಈ ಗೌರವ ಸಂದಿದೆ.
ಮೈಯ್ಯ ಅವರ ಜೊತೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಷಾ, ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿಶಂಕರ್, ಚೆನ್ನೈನ ಸಿ.ಪಿ. ರಾಮಸ್ವಾಮಿ ಅಯ್ಯರ್ ಪ್ರತಿಷ್ಠಾನದ ಗೌರವ ನಿರ್ದೇಶಕಿ ಡಾ. ನಂದಿತಾ ಕೃಷ್ಣ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ. ರಾಮ್‌ಧರ್ ಸಿಂಗ್, ಕರ್ನಾಟಕ ಪಶು ಮತ್ತು ಮೀನುಗಾರಿಕೆ ವಿವಿ ಉಪಕುಲಪತಿ ಡಾ. ರೇಣುಕ ಪ್ರಸಾದ್, ಮಧ್ಯಪ್ರದೇಶದ ಯೋಗ ವಿಜ್ಞಾನಿ ಡಾ. ಶರಣ್ಯನ್, ಜೈವಿಕ ವೈದ್ಯಕೀಯ ಮತ್ತು ಕೃಷಿ ಸಂಶೋಧಕಿ ಮಂಗಳಾ ಭಾರತಿ ಅವರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಇಂದು (ಜ.9) ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ಅವರು  ಪುರಸ್ಕೃತರನ್ನು ಗೌರವಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement