ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಲೌಕಿಕ ಸೌಖ್ಯ ಮತ್ತು ಅಧ್ಯಾತ್ಮಿಕ ಕ್ಷೇಮ

Lingaraj Badiger
Updated On : 8 Jan 2014, 5:44 am

ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರನ್ನು ತ್ಯಾಗ, ಸೇವೆಗೆ ಬದ್ಧಗೊಳಿಸಿದ್ದರು. ಇದಕ್ಕೆ ಪಾಶ್ಚಾತ್ಯ ಶಿಷ್ಯೆಯರೂ ಹೊರತಾಗಿರಲಿಲ್ಲ. ಸ್ವಾಮೀಜಿಯ ಆಪ್ತ ಶಿಷ್ಯೆಯರಾದ ಸಾರಾಬುಲ್ ಹಾಗೂ ಮಿಸ್ ಜೋಸೆಫಿನ್ ಮೆಕ್‌ಲಾಡ್‌ರು ಭಾರತದ ಸಂದರ್ಶನಕ್ಕಾಗಿ ಬಂದರು. ಸ್ವಾಮೀಜಿ ಅವರನ್ನು ಬರಮಾಡಿಕೊಂಡು ಕೋಲ್ಕತ್ತಾದ ಹೋಟೆಲೊಂದರಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮಾಡಿಸಿದರು.

ಒಂದು ದಿನ ಸ್ವಾಮೀಜಿ ಅವರನ್ನು ಹೊಸಮಠದ ನಿವೇಶನಕ್ಕೆ ಕರೆದೊಯ್ದರು. ಅಲ್ಲಿ ನದಿ ದಂಡೆಯ ಮೇಲಿದ್ದ ಹಳೆಯದಾದ ಪುಟ್ಟ ಜೋಪಡಿಯೊಂದು ಈ ಮಹಿಳೆಯರ ಕಣ್ಣಿಗೆ ಬಿತ್ತು. ಇದನ್ನೇ ತಮ್ಮ ವಾಸಕ್ಕಾಗಿ ಏಕೆ ಉಪಯೋಗಿಸಬಾರದು ಎಂಬ ಆಲೋ ಚನೆಯೂ ಬಂತು. ತಕ್ಷಣ ಸ್ವಾಮೀಜಿ  ಬಳಿ  ಈ ಬಗ್ಗೆ ಪ್ರಸ್ತಾಪಿಸಿದರು. ಆಗ ಸ್ವಾಮೀಜಿ, 'ಅದು ಸ್ವಲ್ಪವೂ ಚೆನ್ನಾಗಿಲ್ಲವಲ್ಲ' ಎಂದರು. 'ಪರವಾಗಿಲ್ಲ, ನಾವು ಅದನ್ನು ಸರಿಪಡಿಸಿಕೊಳ್ಳುತ್ತೇವೆ' ಎಂದು ಹೇಳಿದರು. ಇದಕ್ಕೆ ಸ್ವಾಮೀಜಿ ಸಮ್ಮತಿಸಿದರೂ, ಇಲ್ಲಿರಲು ಸಾಧ್ಯವೇ? ಎಂಬ ಶಂಕೆಯುಂಟಾಯಿತು. ಸ್ವಾಮೀಜಿ ಒಪ್ಪಿಗೆ ಸಿಕ್ಕ ತಕ್ಷಣ ಅವರಿಬ್ಬರೂ ಆ ಜೋಪಡಿಯನ್ನು ತಮ್ಮ ಖರ್ಚಿನಲ್ಲಿಯೇ ದುರಸ್ತಿ ಮಾಡಿಸಿಕೊಂಡರು. ಸುಣ್ಣ ಬಣ್ಣ ಹಾಕಿಸಿದರು. ಸಲಕರಣೆಗಳನ್ನು ಜೋಡಿಸಿಕೊಂಡರು. ಗೃಹಪ್ರವೇಶವನ್ನೂ ಮಾಡಿಬಿಟ್ಟರು! ನ್ಯೂಯಾರ್ಕ್‌ನ ಭೋಗ ವಿಲಾಸದಲ್ಲಿ ಬದುಕು ನಡೆಸಿದ ಇವರು ಈಗ ಈ ಬಡಜೋಪಡಿಯಲ್ಲೇ ಆರಾಮವಾಗಿ ಇದ್ದುದನ್ನು ಕಂಡು ಸ್ವಾಮೀಜಿಗೆ ಆಶ್ಚರ್ಯವಾಯಿತು! ಎಷ್ಟೇ ರಿಪೇರಿ ಮಾಡಿಸಿದರೂ ಜೋಪಡಿ ಜೋಪಡಿಯೇ ಅಲ್ಲವೆ?

ಇಲ್ಲಿ ಲೌಕಿಕ ಜೀವನ ಸೌಖ್ಯಕ್ಕಿಂತ ಆಧ್ಯಾತ್ಮಿಕ ಸನಿಹ ಕ್ಷೇಮದಾಯಕ ಎಂಬುದನ್ನು ಆ ಶಿಷ್ಯೆಯರ ಆಯ್ಕೆಯಲ್ಲಿ ಮನಗಾಣಬಹುದು.
-ಆನಂದ ಎಸ್.ಎನ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement