ಬಾಡಿಗೆ ಕಾರಿನಲ್ಲಿ ಎಚ್ಚರ
ಮಹಿಳೆಯರು ತಮ್ಮ ಕೆಲಸದ ಮೇಲೆ ಬಾಡಿಗೆ ಕಾರಿನಲ್ಲಿ ಬೇರೆ ಊರಿಗೆ ಅಥವಾ ಬೇರೆ ಪ್ರದೇಶಕ್ಕೆ ತೆರಳುವ ಮುನ್ನ ಎಚ್ಚರವಹಿಸಿ.
ಮಹಿಳೆಯರು ತಮ್ಮ ಕೆಲಸದ ಮೇಲೆ ಬಾಡಿಗೆ ಕಾರಿನಲ್ಲಿ ಬೇರೆ ಊರಿಗೆ ಅಥವಾ ಬೇರೆ ಪ್ರದೇಶಕ್ಕೆ ತೆರಳುವ ಮುನ್ನ ಎಚ್ಚರವಹಿಸಿ.
ಏಕೆಂದರೆ ಕಾರಿನ ಗಾಜುಗಳಿಗೆ ಟಿಂಟ್ ಇರುವ ಕಾರಣ ಅದರಲ್ಲಿ ಮಹಿಳೆಯನ್ನು ಅಪಹರಿಸಿ ಅಥವಾ ಮಾರ್ಗಮಧ್ಯದಲ್ಲಿ ದಾರಿ ತಪ್ಪಿಸಿ ಆಕೆ ಮೇಲೆ ಅತ್ಯಾಚಾರವೆಸಗುವುದು, ಬೆದರಿಸಿ ಹಣ ಲೂಟಿ ಮಾಡುವುದು ಸೇರಿದಂತೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆಗಳಿರುತ್ತವೆ.
ಪುರುಷರೂ ಇದಕ್ಕೆ ಹೊರತಲ್ಲ. ಸಾಕಷ್ಟು ಪ್ರಕರಣಗಳಲ್ಲಿ ಬಾಡಿಗೆ ಕಾರು ಚಾಲಕರು ಪ್ರಯಾಣಿಕರನ್ನು ಕರೆದೊಯ್ದು ಅಪರಾಧವೆಸಗಿರುವ ಸಾಕಷ್ಟು ಪ್ರಕರಣಗಳು ನಡೆದಿವೆ. ಹಾಗಾಗಿ ಬಾಡಿಗೆ ಕಾರುಗಳಲ್ಲಿ ಒಬ್ಬೊಬ್ಬರೇ ಸಂಚರಿಸುವಾಗ ಎಚ್ಚರವಹಿಸುವ ಅಗತ್ಯವಿದೆ.
ಬಾಡಿಗೆ ಕಾರು, ಕ್ಯಾಬ್ಗಳು ಸೇರಿದಂತೆ ಸ್ವಂತ ಕಾರುಗಳ ಗಾಜಿನ ಟಿಂಟ್ ಕಡ್ಡಾಯವಾಗಿ ತೆಗೆಯುವಂತೆ ಸುಪ್ರೀಂ ಕೋರ್ಟ್ ಕೂಡ ಆದೇಶಿಸಿದೆ.
ಟಿಂಟ್ ತೆಗೆಯದ ವಾಹನ ಮಾಲೀಕರ ವಿರುದ್ಧ ದಂಡ ವಿಧಿಸುವಂತೆಯೂ ಸಂಚಾರ ಪೊಲೀಸರಿಗೆ ಸೂಚಿಸಿತ್ತು. ಅದೇ ರೀತಿ ಸಂಚಾರ ಪೊಲೀಸರು ದಂಡ ವಿಧಿಸಿದ್ದರೂ ಸಾಕಷ್ಟು ಮಂದಿ ಟಿಂಟ್ ತೆಗೆಸಿಲ್ಲ. ಹಾಗಾಗಿ ಅಂತಹ ವಾಹನಗಳಲ್ಲಿ ಸಂಚರಿಸುವ ಮುನ್ನ ಎಚ್ಚರವಹಿಸುವುದು ಸೂಕ್ತ.
ನ್ಯಾಯಾಲಯ ಆದೇಶ ಹೊರಡಿಸಿದ ಕೆಲ ದಿನಗಳು ಮಾತ್ರ ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು. ಕ್ರಮೇಣವಾಗಿ ಅಂತಹ ವಾಹನ ಮಾಲೀಕರ ವಿರುದ್ಧ ದಂಡ ವಿಧಿಸಿ ಕ್ರಮಕೈಗೊಳ್ಳುವುದನ್ನು ಸದ್ಯ ನಿಲ್ಲಿಸಿದ್ದಾರೆ.
- ಶಾಂತ ತಮ್ಮಯ್ಯ