ಮಲೆನಾಡು ಉತ್ಸವ
ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ...
ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶೃಂಗೇರಿಯಲ್ಲಿ ಜ.11ರಿಂದ ಮಲೆನಾಡು ಉತ್ಸವ ನಡೆಯು ತ್ತಿದೆ.
ಜ.13ರಂದು ದಿ.ಕಲ್ಕುಳಿ ದೇವೇಂದ್ರ ಹೆಗ್ಡೆ ನೆನಪಿಗಾಗಿ ಜಾನಪದ ಹಬ್ಬ ನಡೆಯಲಿದ್ದು, ಜಾನಪದ ನೃತ್ಯ ಮತ್ತು ಗೀತೆಗಳ ವಿಶಿಷ್ಟ ಪ್ರಸ್ತುತಿ ಇರುತ್ತದೆ. ನಿರ್ವಹಣೆ- ಜಗದೀಶ್ ಕಣದಮನೆ.
ಕೆ.ಆರ್. ಉದಯಕುಮಾರ್ ನೆನಪಿನಲ್ಲಿ 'ನಗೆ ಸುನಾಮಿ'ಯ ಮೂರು ಮುತ್ತು ತಂಡದವರಿಂದ ಕುಳ್ಳಪ್ಪ ಸತೀಶ್ ಪೈ ನೇತೃತ್ವದಲ್ಲಿ ನಗೆ ನಾಟಕ 'ಸೂಸೈಡ್ ಸುಂದರ' ನಾಟಕ ಪ್ರದರ್ಶನ ಇದೆ.
ಜ.14ರಂದು ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ವಿನೂತನ ಮಲೆನಾಡ ಸೊಗಡಿನ 'ಗುಡುಗು ಹೇಳಿದ್ದೇನು?' ನಾಟಕ ಪ್ರದರ್ಶನ. ಹಾಗೂ ಶಿಡ್ಲೆ ಶ್ರೀನಿವಾಸ್ ರಾವ್ ಸಂಸ್ಮರಣೆ ಯಲ್ಲಿ ಆರೂರು ಲಕ್ಷ್ಮೀ ನಾರಾಯಣ ರಾವ್ ಸ್ಮಾರಕ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಂದ 'ನೃತ್ಯ ಸಂಭ್ರಮ' ನಡೆಯಲಿದೆ.
ಸ್ಥಳ: ಡಾ. ವಿ.ಆರ್. ಗೌರೀಶಂಕರ್ ಸಭಾಂಗಣ, ಶೃಂಗೇರಿ. ಸಮಯ: ಪ್ರತಿ ದಿನ ಸಂಜೆ 6 ಗಂಟೆ. ಮಾಹಿತಿಗೆ ರಮೇಶ್ ಬೇಗಾರ್ ದೂ. 9448101708.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.