ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಾನಸಪುತ್ರಿ ನಿವೇದಿತಾ

ಸ್ವಾಮಿ ವಿವೇಕಾನಂದರಿಂದ ಪ್ರಭಾವಿತಳಾಗಿ ಅವರ ಕಾರ್ಯದಲ್ಲಿ ನೆರವಾಗಲೆಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ ಮಿಸ್ ಮಾರ್ಗರೆಟ್...

Rashmi Kasaragodu
Updated On : 12 Jan 2014, 4:07 am

ಸ್ವಾಮಿ ವಿವೇಕಾನಂದರಿಂದ ಪ್ರಭಾವಿತಳಾಗಿ ಅವರ ಕಾರ್ಯದಲ್ಲಿ ನೆರವಾಗಲೆಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದ ಮಿಸ್ ಮಾರ್ಗರೆಟ್ ನೊಬೆಲ್‌ಳಿಗೆ ಸ್ವಾಮೀಜಿ ದೀಕ್ಷೆ ನೀಡಲು ನಿರ್ಧರಿಸಿದರು. ಅದಕ್ಕೂ ಮೊದಲು ಮಾತೆ ಶಾರದಾದೇವಿಯ ಭೇಟಿಗಾಗಿ ಕರೆದೊಯ್ದರು.
ಮಾತೆ ಶಾರದಾದೇವಿ ನೊಬೆಲ್‌ಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಆದರಿಸಿದರು. ಅವಳ ಜತೆಯಲ್ಲೇ ಉಪಹಾರವನ್ನೂ ಸ್ವೀಕರಿಸಿದರು. ನೊಬೆಲ್ ಆಧುನಿಕ ಪಾಶ್ಚಾತ್ಯ ಜಗತ್ತಿನ ಪ್ರತಿನಿಧಿಯಾದರೆ, ಸಂಪ್ರದಾಯಸ್ಥ ಕುಟುಂಬದ ಶ್ರೀಮಾತೆಯವರು ಪುರಾತನ ಭಾರತದ ಪ್ರತಿನಿಧಿಯಾಗಿದ್ದರು.
ಸ್ವಾಮೀಜಿ 1898ರ ಮಾರ್ಚ್ 25ರಂದು ಮಾರ್ಗರೆಟ್‌ಳಿಗೆ ವಿಧಿ ಬದ್ಧವಾಗಿ ದೀಕ್ಷೆ ನೀಡಿದರು. ಆಕೆಯ ಪಾಲಿಗೆ ಇದೊಂದು ಅವಿಸ್ಮರಣೀಯ ಘಟನೆಯಾಯಿತು. ಅಂದು ಅವಳಿಗೆ 'ನಿವೇದಿತಾ' ಎಂಬ ನೂತನ ನಾಮಧೇಯವನ್ನು ದಯಪಾಲಿಸಿದರು. ನಿವೇದಿತಾ, ಭಾರತದ ಸೇವೆಗಾಗಿ ಸಮರ್ಪಿತಳಾದವಳು! ನಂತರ ಸ್ವಾಮೀಜಿ, 'ಮುನ್ನಡೆ, ಬುದ್ಧತ್ವವನ್ನು ಹೊಂದುವ ಮುನ್ನ ಇತರರ ಹಿತಕ್ಕಾಗಿ ಐದುನೂರು ಸಲ ಜನ್ಮವೆತ್ತಿ ತನ್ನ ಜೀವನವನ್ನು ಸಮರ್ಪಿಸಿದ ಬುದ್ಧ ಭಗವಂತನ ಹೆಜ್ಜೆಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆ!' ಎಂದು ನುಡಿದರು.
ಹೀಗೆ ಮಿಸ್ ಮಾರ್ಗರೆಟ್ ನೊಬೆಲ್ ಸ್ವಾಮೀಜಿಯಿಂದ ದೀಕ್ಷೆ ಪಡೆದು 'ಸಿಸ್ಟರ್ ನಿವೇದಿತಾ' ಆದರು. ಭಾರತಕ್ಕಾಗಿ ಹಾಗೂ ಸ್ವಾಮೀಜಿಯ ಕಾರ್ಯಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳಲು ಮುಂದಾದ ಸೋದರಿ ನಿವೇದಿತಾ ಸ್ವಾಮಿ ವಿವೇಕಾನಂದರ 'ಅಧ್ಯಾತ್ಮಿಕ ಪುತ್ರಿ' ಎಂದೇ ಹೆಸರಾದರು.

-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement