ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಮಕ್ಕೆ ಧಿಕ್ಕಾರ!

ತಮಾಷೆ ಇಲ್ಲಿಗೇ ಮುಗಿಯಲಿಲ್ಲ. ಸೇನಾಧಿಕಾರಿ ಪರಮ ರಸಿಕನಾಗಿದ್ದ. ಆತನಿಗಿದ್ದ ನಲ್ಲೆ ಇವಳೊಬ್ಬಳೇ ಆಗಿರಲಿಲ್ಲ. ರಾಜನರ್ತಕಿಯನ್ನೂ...

Rashmi Kasaragodu
Updated On : 14 Jan 2014, 3:35 am

ತಮಾಷೆ ಇಲ್ಲಿಗೇ ಮುಗಿಯಲಿಲ್ಲ. ಸೇನಾಧಿಕಾರಿ ಪರಮ ರಸಿಕನಾಗಿದ್ದ. ಆತನಿಗಿದ್ದ ನಲ್ಲೆ ಇವಳೊಬ್ಬಳೇ ಆಗಿರಲಿಲ್ಲ. ರಾಜನರ್ತಕಿಯನ್ನೂ ಅವನು ವಶೀಕರಿಸಿಕೊಂಡಿದ್ದ. ರಾಣಿಯನ್ನೂ ರಾಜನರ್ತಕಿಯನ್ನೂ ತನ್ನ ಮದನಕಲೆಯಲ್ಲಿ ಮಣಿಸುವುದರಲ್ಲಿ ಆತ ರಾಜನನ್ನೇ ಮಣಿಸಿದ ಸಂತೃಪ್ತಿಯನ್ನು ಕಾಣುತ್ತಿದ್ದಿರಬೇಕು. ಯಾಕೋ, ಆತನಿಗೆ ರಾಜನರ್ತಕಿಯ ಮೇಲೆ ಎಲ್ಲರಿಗಿಂತಲೂ ಅಧಿಕ ಪ್ರೇಮ ಉಕ್ಕಿ ಬಂತು. ಮರುದಿನ ರಾತ್ರಿ ಆ ಫಲವನ್ನು ಆತ ಆಕೆಗೆ ಕೊಟ್ಟ.  ಆದರೆ ರಾಜನೇನೂ ಬರಿಯ ಪಿಂಗಳೆಯಲ್ಲಿ ಏಕವ್ರತಸ್ಥನಾಗಿದ್ದವನಲ್ಲ. ಆತನೂ ಆಗಾಗ ನರ್ತಕಿಯಲ್ಲಿ ರಮಿಸುವವನೇ. ಅಂದೂ ಆತ ನರ್ತಕಿಯನ್ನು ತನ್ನ ಬಳಿಗೆ ಕರೆಸಿಕೊಂಡ. ನರ್ತಕಿ ಫಲವನ್ನು ಕೈಯಲ್ಲಿ ಹಿಡಿದುಕೊಂಡೇ ಬಂದಳು. ಪಾಪ, ಅದು ರಾಜನಿಂದಲೇ ಹೊರಟದ್ದು ಎಂಬ ಅರಿವಿಲ್ಲ ಅವಳಿಗೆ! ರಾಜನಿಗೆ ಅದನ್ನು ಅರ್ಪಿಸಿ ಅದರ ಗುಣವರ್ಣನೆ ಮಾಡಿದಳು. ಅದನ್ನು ಕೇಳಿ, ಫಲವನ್ನು ನೋಡಿದ ಕೂಡಲೇ ಭರ್ತೃಹರಿಗೆ ಗಿರ್ರನೆ ತಲೆ ತಿರುಗಿದಂತಾಯ್ತು. ತಾನು ಪಿಂಗಳೆಗೆ ಕೊಟ್ಟ ಫಲ! ನರ್ತಕಿಯ ಕೈಗೆ ಹೇಗೆ ಬಂತು? ವಿಚಾರಿಸಿದ. ಸೇನಾಧಿಪತಿ ಕೊಟ್ಟದ್ದು ಗೊತ್ತಾಯಿತು. ಸೇನಾಧಿಪತಿಗೆ ರಾಣಿಯ ಕೈಯಿಂದಲೇ ಹೋಗಿರಬೇಕು! ಅಯ್ಯೋ, ನನ್ನ ಪ್ರೇಮದ ಕುರುಡೇ!
ಭರ್ತೃಹರಿಯ ಬಾಯಿಂದ ಉದ್ಗಾರ ಹೊರಟಿತು:
ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಮಾನ್ಯಮಿಚ್ಛತಿ ಜನಂ ಸ ಜನೋನ್ಯಸಕ್ತಃ
ಅಸ್ಮತ್ಕೃತೇ ಚ ಪರಿತುಷ್ಯತಿ ಕಾಚಿದನ್ಯಾ
ಧಿಕ್ ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ
ನಾನು ಯಾರಲ್ಲಿ ಸತತವಾಗಿ ಮನಸ್ಸು ನೆಟ್ಟಿದ್ದೆನೋ ಅವಳಿಗೆ ನನ್ನಲ್ಲಿ ಅನುರಾಗವಿಲ್ಲ. ಆಕೆ ಇನ್ನೊಬ್ಬ ಸಾಮಾನ್ಯನನ್ನು ಪ್ರೀತಿಸುತ್ತಿದ್ದಾಳೆ. ಆ ಸಾಮಾನ್ಯನಿಗೋ ಇನ್ನೊಬ್ಬಳ ಮೇಲೆ ಮೋಹ. ಆ ಇನ್ನೊಬ್ಬಳು ನನ್ನ ಮೇಲೆ ಪ್ರಾಣವಿರಿಸಿದ್ದಾಳೆ. ನನಗೂ, ನನ್ನ ಪ್ರೇಯಸಿಗೂ, ಈ ನರ್ತಕಿಗೂ, ಆ ಸೇನಾಪತಿಗೂ ಧಿಕ್ಕಾರವಿರಲಿ! ಈ  ಪ್ರಣಯವ್ಯಾಪಾರಕ್ಕೆ ಕಾರಣನಾದ ಮನ್ಮಥನಿಗೂ ಧಿಕ್ಕಾರವಿರಲಿ!
ಆ ಮೇಲೆ ಭರ್ತೃಹರಿಯ ಜಗತ್ತೇ ಬದಲಾಯಿತು.


-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement