ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮತ್ತಷ್ಟು ಸುರಕ್ಷತಾ ಸೂಚನೆ

Rashmi Kasaragodu
Updated On : 14 Jan 2014, 3:39 am

- ರಸ್ತೆ ಮೇಲೆ ಸಾರ್ವಜನಿಕರು ಗುಂಪಾಗಿ ನಿಂತು ಕ್ಷುಲ್ಲಕವಾಗಿ ಮಾತನಾಡುವುದು ಬೇಡ. ಇದರಿಂದ ವಾಹನ ಸಂಚಾರಕ್ಕೆ ಮಾತ್ರ ತೊಂದರೆಯಾಗುವುದಲ್ಲದೆ ಪ್ರಾಣಕ್ಕೂ ಅಪಾಯ.
- ಸಾಕುಪ್ರಾಣಿಗಳನ್ನು ರಸ್ತೆಯಲ್ಲಿ ಬಿಟ್ಟು ಸಂಚಾರಕ್ಕೆ ಅಡ್ಡಿ ಮಾಡಬೇಡಿ
- ನಿಗದಿತ ಸ್ಥಳಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ವಾಹನಗಳಿಗೆ ಹತ್ತುವುದು ಹಾಗೂ ಇಳಿಯುವುದು ಉತ್ತಮ. ವಾಹನ ಹತ್ತಲು ಮನಬಂದಂತೆ ಕೈಚಾಚಬೇಡಿ ಬೈಸಿಕಲ್ ಸವಾರರು 3 ಅಥವಾ 4 ಜನರು ಒಟ್ಟಿಗೆ ಸಾಲಾಗಿ ಹೆಗಲ ಮೇಲೆ ಕೈಹಾಕಿಕೊಂಡು ರಸ್ತೆಯಲ್ಲಿ ಸವಾರಿ ಮಾಡಿದರೆ ಇತರ ವಾಹನಕ್ಕೆ ಅಡ್ಡಿ ಮಾಡಿದಂತಾಗುತ್ತದೆ. ಇದು ಸರಿಯಲ್ಲ.
- ಸೈಕಲ್ಲುಗಳಲ್ಲಿ ರಾತ್ರಿ ವೇಲೆ ಬೆಳಕು ಸುಸ್ಥಿತಿಯಲ್ಲಿ ಅಳವಡಿಸಿಕೊಂಡು ಸವಾರಿ ಮಾಡಿದರೆ ಕ್ಷೇಮ. ರಿಕ್ಷಾ ಚಾಲಕರ ಸೀಟಿನ ಪಕ್ಕದಲ್ಲಿ ಕುಳಿತು ಪ್ರಯಾಣಿಸುವುದು ತುಂಬಾ ಅಪಾಯ.
- ರಸ್ತೆ ಅಪಘಾತಗಳಲ್ಲಿ ಪ್ರತೀ ಬಾರಿಯೂ ಹೆಚ್ಚಾಗಿ ಪ್ರಯಾಣಿಕರ ಹಾಗೂ ಪಾದಚಾರಿಗಳ ಅಜಾಗರೂಕತೆ ಕಂಡುಬರುತ್ತಿದೆ. ಆದ್ದರಿಂದ ನಿಮ್ಮ ಜೀವಕ್ಕೆ ಜಾಗ್ರತೆ ನಿಮ್ಮಿಂದಲೇ ಆಗಬೇಕಾಗಿದೆ.


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement