ಸಪ್ತಕದಿಂದ 'ಸಂಗೀತ ಸಂಜೆ'
ಬೆಂಗಳೂರಿನ 'ಸಪ್ತಕ' ಸಂಗೀತ ಸಂಸ್ಥೆ ಕಳೆದ ಏಳು ವರ್ಷಗಳಿಂದ ಸಂಗೀತಾರಾಧನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ...
ಬನ್ನಿಮಂಟಪ
ಬೆಂಗಳೂರಿನ 'ಸಪ್ತಕ' ಸಂಗೀತ ಸಂಸ್ಥೆ ಕಳೆದ ಏಳು ವರ್ಷಗಳಿಂದ ಸಂಗೀತಾರಾಧನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದೀಗ ತನ್ನ ಕಾರ್ಯಕ್ಷೇತ್ರವನ್ನು ಬೆಂಗಳೂರಿನಿಂದಾಚೆಗೂ ವಿಸ್ತರಿಸುತ್ತಿದೆ. ಈ ಸಂಗೀತ ಸಂಸ್ಥೆಯ ಸ್ಥಾಪಕರಾದ ಜಿ.ಎಸ್. ಹೆಗಡೆ, ಗೀತಾ ಹೆಗಡೆ ಹಾಗೂ ಧನಂಜಯ ಹೆಗಡೆ ಸಂಗೀತಾಸಕ್ತರಿಗೆ, ಸಂಗೀತಾಭ್ಯಾಸಿಗಳಿಗೆ, ಸಂಗೀತ ಕಾರ್ಯಕ್ರಮ ಸಂಘಟಕರಿಗೆ, ಸಂಗೀತ ಶಾಲೆಗಳಿಗೆ, ಸಂಗೀತ ಕಲಾವಿದರಿಗೆ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಸಪ್ತಕ ಸಂಸ್ಥೆ 19-01-2014 ಭಾನುವಾರದಂದು 'ಸಂಗೀತ ಸಂಜೆ' ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಯಲ್ಲಾಪುರದ (ಉತ್ತರ ಕನ್ನಡ) ಅಡಕೆ ಸಭಾಭವನದಲ್ಲಿ ಆಯೋಜಿಸಿದೆ. ಪದ್ಮಶ್ರೀ ಪಂ. ಸತೀಶ್ ವ್ಯಾಸ್ರಿಂದ ಸಂತೂರ್ವಾದನ, ಉಸ್ತಾದ್ ಫಜಲ್ ಖುರೇಶಿ ಮುಂಬೈ ಅವರಿಂದ ತಬಲಾವಾದನ, ಧನಂಜಯ್ ಹೆಗಡೆಯವರಿಂದ ಶಾಸ್ತ್ರೀಯ ಗಾಯನ. ಇವರಿಗೆ ತಬಲಾ ಸಾತ್ ನೀಡುವವರು ಗುರುಮೂರ್ತಿ ವೈದ್ಯ, ಹಾರ್ಮೋನಿಯಂ ಭರತ್ ಹೆಗಡೆ. ಇದೇ ಸಂದರ್ಭದಲ್ಲಿ ಖ್ಯಾತ ಚಿತ್ರಕಲಾವಿದ ನೀರ್ನಳ್ಳಿ ಗಣಪತಿಯವರನ್ನು ಸನ್ಮಾನಿಸಲಾಗುವುದು.
ದಿನಾಂಕ: 19-01-2014, ಸ್ಥಳ: ಅಡಕೆ ಸಭಾಭವನ, ಎಪಿಎಂಸಿ ಯಾರ್ಡ್, ಯಲ್ಲಾಪುರ (ಉತ್ತರಕನ್ನಡ),
ಸಮಯ: ಸಂಜೆ 5.30