ಬೈಟುಕಾಫಿ

ಕಣ್ಣಲ್ಲೊಬ್ಬ, ಮನದಲ್ಲೊಬ್ಬ

ಭರ್ತೃಹರಿಗೆ ಆ ಕ್ಷಣವೇ ಅನುರಾಗವೆಂಬ ಮನೋವ್ಯಾಪಾರದ ಸಂಪೂರ್ಣ ದರ್ಶನವಾಗಿರಬೇಕು. ಅದು ಹೆಣ್ಣಿನ ಹಾಗೂ ಗಂಡಿನ ಪ್ರಾಯದಿಂದ...

ಭರ್ತೃಹರಿಗೆ ಆ ಕ್ಷಣವೇ ಅನುರಾಗವೆಂಬ ಮನೋವ್ಯಾಪಾರದ ಸಂಪೂರ್ಣ ದರ್ಶನವಾಗಿರಬೇಕು. ಅದು ಹೆಣ್ಣಿನ ಹಾಗೂ ಗಂಡಿನ ಪ್ರಾಯದಿಂದ, ಅಂಗಸೌಷ್ಟವದಿಂದ ಜೀವ ಪಡೆದು, ಭೋಗೇಚ್ಛೆಯಲ್ಲಿ ಉಜ್ಜೀವಿಸಿ, ಅತೃಪ್ತಿಯಲ್ಲೂ ಕ್ರೋಧದಲ್ಲೂ ಮುಗಿಯುವುದರ ಸಾಕ್ಷಾತ್ಕಾರವಾಯ್ತು. ಕ್ರೋಧದಿಂದ ಕಂಪಿಸಬೇಕಾಗಿದ್ದ ಭರ್ತೃಹರಿ, ತನ್ನ ಲಾಲಸೆಯ ವ್ಯರ್ಥತೆಯನ್ನು ಮನಗಂಡು ಜಿಗುಪ್ಸಿತನಾದ. ಆಗಲೇ ಆತನಿಂದ ಹೊರಹೊಮ್ಮಿದ ವಾಕ್ಯ:
ಜಲ್ಪಂತಿ ಸಾರ್ಧಮನ್ಯೇನ ಪಶ್ಯಂತ್ಯನ್ಯಂ ಸವಿಭ್ರಮಾಃ
ಹೃದ್ಗತಂ ಚಿಂತಯಂತ್ಯನ್ಯಂ ಪ್ರಿಯಃ ಕೋ ನಾಮ ಯೋಷಿತಾವ್
ಈ ಕಾಮಿನಿಯರ ಮನಸ್ಸನ್ನು ಏನೆಂದು ಹೇಳೋಣ! ಇವರು ಒಬ್ಬ ಪುರುಷನೊಡನೆ ಮಾತನಾಡುತ್ತಿರುತ್ತಾರೆ. ಅದೇ ವೇಳೆಗೆ ಅವರ ಕಣ್ಣುಗಳು ಇನ್ಯಾರನ್ನೋ ಆಸೆಯಿಂದ ನೋಡುತ್ತಿರುತ್ತವೆ. ಅದೇ ವೇಳೆಗೆ ಅವರ ಹೃದಯದಲ್ಲಿ ಇನ್ಯಾರೋ ಸುಂದರಾಂಗ ರಾರಾಜಿಸಿರುತ್ತಾನೆ. ಇಂಥ ಲಲನೆಯರ ನಿಜವಾದ ಪ್ರಿಯಕರ ಯಾರೆಂದು ಹೇಗೆ ಹೇಳಲಿ?
ಇದು ಸಾರ್ವತ್ರಿಕವಾದ ಸತ್ಯವಲ್ಲವೆಂದೂ, ಆತನ ಅನುಭವಕ್ಕೇ ನಿಷ್ಠವಾದ ಪದ್ಯವೆಂದೂ ಬೇರೆ ಹೇಳಬೇಕಿಲ್ಲ. ಆದರೆ ಭರ್ತೃಹರಿ ತನಗೆ ಅನ್ನಿಸಿದ್ದನ್ನೇ ಆಡಿದ. ಕ್ಷಣದ ಹಿಂದೆ ಪ್ರಣಯಪರವಶನಾಗಿದ್ದವನನ್ನು ಈಗ ವೈರಾಗ್ಯವು ಆವರಿಸಿಕೊಂಡುಬಿಟ್ಟಿತ್ತು. ಮುಂದೆ ಆತ ತನ್ನ ರಾಜ್ಯಭಾರದ ಹೊಣೆಯನ್ನೆಲ್ಲ ಸಹೋದರ ವಿಕ್ರಮಾದಿತ್ಯನಿಗೆ ವಹಿಸಿ, ಕಾಡು ಸೇರಿದ.
ವಿಚಿತ್ರ ಆಂದರೆ, ಅದೇ ಸಮಯದಲ್ಲೇ ರಾಣಿ ಪಿಂಗಳೆ ಕೂಡ ಭೋಗಭಾಗ್ಯ ತೊರೆದು ಸನ್ಯಾಸಿನಿಯಾಗಿದ್ದಳು!


-ಹರಿಹರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್