ಮಾನಸ ಸರೋವರ ಯಾತ್ರೆಗೆ ರಿಯಾಯಿತಿ
ಪವಿತ್ರ ಧಾರ್ಮಿಕ ಸ್ಥಳವಾದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ನೇಪಾಳ ಸರ್ಕಾರದ ಪ್ರವಾಸೋದ್ಯಮ ...
ಪವಿತ್ರ ಧಾರ್ಮಿಕ ಸ್ಥಳವಾದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ನೇಪಾಳ ಸರ್ಕಾರದ ಪ್ರವಾಸೋದ್ಯಮ ಮಂಡಳಿಯ ನಾರಾಯಣಿ ಹಾಲಿಡೇಸ್ ಸಂಸ್ಥೆ ಸಂಘಟಿಸಿದೆ. ಈ ಪ್ರವಾಸದಲ್ಲಿ ಭಾಗವಹಿಸುವವರಿಗೆ ಶುಲ್ಕದಲ್ಲಿ ರಿಯಾಯಿತಿ ಘೋಷಿಸಿದೆ.
ರಿಯಾಯಿತಿ ಜೊತೆಗೆ 3500 ರೂ.ಗಳ ಪ್ರವಾಸಿ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತದೆ. ಕರ್ನಾಟಕ ಸರ್ಕಾರದ ವತಿಯಿಂದ ಯಾತ್ರೆಗೆ ತೆರಳುವವರಿಗೆ 30,000 ರೂ. ನೀಡಲಾಗುತ್ತದೆ. ಈ ಪ್ರವಾಸವನ್ನು ಬೆಂಗಳೂರಿನಿಂದ ಬೇರೆ ಬೇರೆ ಗುಂಪುಗಳಲ್ಲಿ ಏರ್ಪಡಿಸಲಾಗುತ್ತಿದ್ದು, ನೇಪಾಳ, ಟಿಬೆಟ್ ಮಾರ್ಗವಾಗಿ ಏರ್ಪಡಿಸಿರುವ ಯಾತ್ರೆಯ ಅವಧಿ 14 ದಿನಗಳು. ಈ ಅವಧಿಯಲ್ಲಿ ಯಾತ್ರಾರ್ಥಿಗಳಿಗೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.
ಮಾಹಿತಿಗೆ: ನಂ.24, ಬಾಲಾಜಿ ಪ್ಲಾಜಾ, 2ನೇ ಮಹಡಿ, 2ನೇ ಕ್ರಾಸ್, ಕಿರ್ಲೋಸ್ಕರ್ ಎಚ್.ಬಿ.ಸಿ.ಎಸ್, 2ನೇ ಹಂತ, ಶಂಕರಮಠ ಸರ್ಕಲ್ ಹತ್ತಿರ, ಬಸವೇಶ್ವರ ನಗರ, ಬೆಂಗಳೂರು. ದೂ. 9845608096 ಅಥವಾ 080-42151225. ಇಮೇಲ್- info@visitsouthindia.biz ಸಂಪರ್ಕಿಸ ಬಹುದು.
ಪ್ರಾಜೆಕ್ಟ್ 560: ಅರ್ಜಿ ಆಹ್ವಾನ
ಕಲಾವಿದರೇ ಆರಿಸಿದ ಜಾಗಗಳಲ್ಲಿ ಕಲಾ ಪ್ರದರ್ಶನ ನೀಡಲು ಐಎಫ್ಎ ವೇದಿಕೆ ಒದಗಿಸಿದೆ. ಕಲಾವಿದರ ಏಳಿಗೆಗೆ ಕೈ ಜೋಡಿಸುತ್ತಿರುವುದು 'ಪ್ರಾಜೆಕ್ಟ್ 560'.
ಬೆಂಗಳೂರು ನಗರದಲ್ಲಿ ಯಾವುದೇ ಜಾಗದಲ್ಲಿ ಪ್ರದರ್ಶನ ನೀಡಲು ಬಯಸುವ ಕಲಾವಿದರು ಹಾಗೂ ಕಲಾ ತಂಡದಿಂದ ಐಎಫ್ಎ ಅರ್ಜಿ ಆಹ್ವಾನಿಸುತ್ತಿದೆ. ಪ್ರಾಜೆಕ್ಟ್ ಪ್ರಸ್ತಾವನೆ ಕಳುಹಿಸಲು ಜ.21 ಅಂತಿಮ ದಿನ. ಬರುವ ಅರ್ಜಿಗಳಲ್ಲಿ 6 ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿ, ಪ್ರತಿ ಪ್ರಾಜೆಕ್ಟ್ಗೆ ಎಲ್ಲಾ ವೆಚ್ಚಗಳು ಸೇರಿ ಗರಿಷ್ಠ 2.50 ಲಕ್ಷ ರುಪಾಯಿ ನೀಡಲಾಗುತ್ತದೆ.
ಕಲಾವಿದರಿಗೆ ಪ್ರೇರಣೆ ಅಥವಾ ಸ್ಫೂರ್ತಿಯಾದ ಯಾವುದೇ ಜಾಗ ಆಯ್ಕೆ ಮಾಡಬಹುದಾಗಿದೆ. ಆಯ್ಕೆಯಾದ ಕಲಾವಿದ ಅಥವಾ ಕಲಾತಂಡಗಳು ಪ್ರದರ್ಶನ ನೀಡಲು ಅಭ್ಯಾಸಕ್ಕಾಗಿ ಮಾರ್ಚ್ನಿಂದ ಮೇ ವರೆಗೆ 3 ತಿಂಗಳ ಅವಧಿ ಲಭ್ಯ. ಮುಂದಿನ ವರ್ಷ ಜೂನ್ ತಿಂಗಳಲ್ಲಿ ಐಎಫ್ಎ ಆಯೋಜಿಸಿರುವ ಒಂದು ವಾರ ಕಾಲ ನಡೆಯುವ 'ಪ್ರಾಜೆಕ್ಟ್ 560' ಉತ್ಸವದಲ್ಲಿ ಆಯ್ಕೆಯಾದವರು ತಮ್ಮ ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ.