ಸಾಂಸ್ಕೃತಿಕ ಲೋಕದಲ್ಲಿ ಬರಗೂರು: ಒಂದು ಅವಲೋಕನ
ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆಯು ಡಾ. ಬರಗೂರು ರಾಮಚಂದ್ರಪ್ಪ ಕುರಿತಂತೆ 'ಸಾಂಸ್ಕೃತಿಕ ಲೋಕದಲ್ಲಿ ಬರಗೂರು..
ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆಯು ಡಾ. ಬರಗೂರು ರಾಮಚಂದ್ರಪ್ಪ ಕುರಿತಂತೆ 'ಸಾಂಸ್ಕೃತಿಕ ಲೋಕದಲ್ಲಿ ಬರಗೂರು: ಒಂದು ಅವಲೋಕನ' ಕಾರ್ಯಕ್ರಮವನ್ನು ಜ.19ರಂದು ಏರ್ಪಡಿಸಿದೆ. ಅಂದು ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರಿಗೆ ನಡೆಯುವ ಕಾರ್ಯಕ್ರಮದಲ್ಲಿ ಬರಗೂರರ ಸಿದ್ಧಾಂತ, ಸಾಮಾಜಿಕ ಕಾಳಜಿ, ಹೋರಾಟದ ಹಿನ್ನಲೆ, ಸಿನಿಮಾಭಿವ್ಯಕ್ತಿ ಮುಂತಾದ ವಿಷಯಗಳ ಕುರಿತು ಚರ್ಚೆ, ಅವರ ಗೀತೆಗಳ ಗಾಯನ. ಜೊತೆಗೆ 'ಸೂರ್ಯ ಸಂಸ್ಕೃತಿ' ಸಾಹಿತ್ಯ ವಾಚಿಕೆ ಪುಸ್ತಕ ಬಿಡುಗಡೆ, ಚಲನಚಿತ್ರ ಪ್ರದರ್ಶನವಿದೆ. ಡಾ.ವೀರಪ್ಪಮೊಯಿಲಿ, ಡಾ. ರಾಜಪ್ಪ ದಳವಾಯಿ, ಪ್ರೊ. ಹಿ.ಚಿ.ಬೋರಲಿಂಗಯ್ಯ, ಟಿ.ಎನ್. ಸೀತಾರಾಮ್ ಮುಂತಾದವರು ಭಾಗವಹಿಸಲಿದ್ದಾರೆ. ಸ್ಥಳ: ನಯನ ಸಭಾಂಗಣ, ಬೆಂಗಳೂರು. ವಿವರಕ್ಕೆ: ರೇವಣ್ಣ ದೂ. 9448077292.
ರಂಗಪ್ರವೇಶ
ಜನವರಿ 19ರಂದು ಭಾನುವಾರ ಸಂಜೆ 6 ಗಂಟೆಗೆ ಜಯನಗರ 8ನೇ ಹಂತದಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ಕಿಶೋರಿ ನಯನಾ ರಾವ್ ಭರತನಾಟ್ಯದ 'ರಂಗಪ್ರವೇಶ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ನಯನಾ ನೃತ್ಯ ಕಲಾಪ್ರಿಯರಿಗೆ ಹೆಜ್ಜೆ-ಗೆಜ್ಜೆಯ ಧ್ವನಿಯನ್ನು ಉಣಬಡಿಸಲಿದ್ದಾಳೆ. ದಿನಾಂಕ: 19-01-2014, ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಹಂತ, ಬೆಂಗಳೂರು, ಸಮಯ: ಸಂಜೆ 6 ಗಂಟೆ.