ಸುವರ್ಣದಲ್ಲಿ ಹೊಸ ಧಾರಾವಾಹಿ ಸ್ವಾತಿಮುತ್ತು
ಸ್ಟಾರ್ ನೆಟ್ ವರ್ಕ್ಸ್ನ ಸುವರ್ಣ ಮನೋರಂಜನಾ ವಾಹಿನಿಯು ಜ.20ರಿಂದ ಹೊಚ್ಚ ಹೊಸ ಧಾರಾವಾಹಿ 'ಸ್ವಾತಿಮುತ್ತು' ...
ಸ್ಟಾರ್ ನೆಟ್ ವರ್ಕ್ಸ್ನ ಸುವರ್ಣ ಮನೋರಂಜನಾ ವಾಹಿನಿಯು ಜ.20ರಿಂದ ಹೊಚ್ಚ ಹೊಸ ಧಾರಾವಾಹಿ 'ಸ್ವಾತಿಮುತ್ತು' ಅನ್ನು ಪ್ರಾರಂಭಿಸುತ್ತಿದೆ. ಸೋಮವಾರದಿಂದ ಶನಿವಾರ ದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಒಬ್ಬ ಶ್ರೀಮಂತ, ಸುಂದರ ಮತ್ತು ಮುಗ್ಧ ಹುಡುಗ ಮುತ್ತು (ಮೃತ್ಯುಂಜಯ) ಸುತ್ತ ಹೆಣೆದಿರುವ ಕಥೆ ಇದು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ದಿನೇಶ್ ಬಾಬು ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಮುಖ್ಯ ಪಾತ್ರಧಾರಿಯು ವಿಶಿಷ್ಟವಾಗಿದ್ದು ಕಥೆಯಲ್ಲಿ ಇದು ಪ್ರಮುಖವಾಗಿದೆ. ಮುಖ್ಯ ಪಾತ್ರಧಾರಿಯೊಬ್ಬ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡ ಮನೋರಂಜನಾ ವಾಹಿನಿಯಲ್ಲಿಯೇ ಮೊದಲ ಧಾರಾವಾಹಿಯಾಗಿದೆ. ಸುವರ್ಣ ಮನೋರಂಜನೆ ವಾಹಿನಿಯಲ್ಲಿ ಮೂಡಿಬರುತ್ತಿರುವ ಹಲವು ಯಶಸ್ವಿ ಕಾರ್ಯಕ್ರಮಗಳ ಗುಂಪಿಗೆ ಇದು ಹೊಸ ಸೇರ್ಪಡೆ.