ಯಾವ ಕುದುರೆಯೂ ಹುರುಳಿಯನ್ನು ಬೇಡ ಅನ್ನೋಲ್ಲ
ಹಸಿವಾದಾಗ ತಿನ್ನುವುದು ಎಲ್ಲಾ ಜೀವಿಗಳ ಗುಣ. ಹಸಿವಿಲ್ಲದಿದ್ದಾಗ ತಿನ್ನುವುದು ಚಪಲ. ತಿನ್ನುವ ಪದಾರ್ಥದ ರುಚಿ ಹತ್ತಿದಾಗ, ಹಲ್ಲಿಗೆ, ಮೈಗೆ ಆಗದಿದ್ದರೂ ತಿನ್ನುತ್ತೇವೆ. ಇದನ್ನೇ ಈ ಗಾದೆ ಸೂಚ್ಯವಾಗಿ ಹೇಳುತ್ತದೆ. ಬದುಕಿರುವುದಕ್ಕೆ ತಿನ್ನಬೇಕೆ ಹೊರತು, ತಿನ್ನುವುದಕ್ಕಾಗಿ ಬದುಕಿರಬಾರದು.