ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಂಚಾರ ನಿಯಮ ತಿಳಿಯಿರಿ

Mainashree
Updated On : 21 Jan 2014, 2:51 am

ಯಾರಾದರೂ ನಿಮ್ಮ ವಾಹನದಲ್ಲಿ ಹತ್ತಲು ಮುಂದಾದರೆ ಅಥವಾ ವಾಹನದಿಂದ ಇಳಿಯಬೇಕೆಂದಿದ್ದಲ್ಲಿ ಅವಸರ ಮಾಡಬೇಡಿ. ಇದರಿಂದ ಅವರು ತಪ್ಪು ಮಾಡುವ ಸಾಧ್ಯತೆ ಹೆಚ್ಚಿದೆ ಹಾಗೂ ಇದರಿಂದ ಅನಾಹುತವಾಗುತ್ತದೆ
    ಮಾರ್ಗಮಧ್ಯದಲ್ಲಿ ಅಥವಾ ರಸ್ತೆಮಧ್ಯದಲ್ಲಿ ವಾಹನ ನಿಲ್ಲಿಸಿ ಅಲ್ಲಿ ಪ್ರಯಾಣಿಕರನ್ನು ಅಥವಾ ಹಿಂಬದಿ ಸವಾರರನ್ನು ಕೆಳಗಿಳಿಸುವುದು ಹಾಗೂ ಹತ್ತಿಸಿಕೊಳ್ಳುವುದು ಬೇಡ
    ವಾಹನ ಕೆಟ್ಟು ನಿಂತರೆ ಮಧ್ಯರಸ್ತೆಯಲ್ಲೇ ನಿಲ್ಲಿಸಿ ರಿಪೇರಿ ಮಾಡಬೇಡಿ (ಸಣ್ಣ ವಾಹನಗಳಿಗೆ ಅನ್ವಯವಾಗುತ್ತದೆ). ದೊಡ್ಡ ವಾಹನಗಳು ಈ ರೀತಿ ಕೆಟ್ಟು ನಿಂತರೆ, ಮುಂದೆ ವಾಹನ ನಿಂತಿದೆ ಎಂಬುದನ್ನು ಸೂಚಿಸಲು ವ್ಯವಸ್ಥೆ ಮಾಡಿ
    ವಾಹನ ಚಾಲನೆ ಮಾಡುವ ವೇಳೆ ಸಂಗೀತ ಹಾಕಿಕೊಂಡು ಕೇಳಬೇಡಿ. ಒಂದು ವೇಳೆ ಸಂಗೀತ ಕೇಳುತ್ತಿದ್ದರೂ ಅಬ್ಬರದ ಸೌಂಡ್ ಕೊಟ್ಟು ಇತರರಿಗೆ ತೊಂದರೆ ಕೊಡಬೇಡಿ. ಇದರಿಂದ ಬೇರೆ ವಾಹನ ಸವಾರರಿಗೆ ಮಾತ್ರವಲ್ಲ ಸ್ವತಃ ಚಾಲನಿಗೂ ತೊಂದರೆಯಾಗುತ್ತದೆ
    ಚಾಲನೆ ಮಾಡುವ ವೇಳೆ ಧೂಮಪಾನ ಮಾಡಬೇಡಿ
    ಬೇರೆ ವಾಹನ ಚಾಲಕರು ಕೊಟ್ಟ ಸಜ್ಞೆಗಳನ್ನು ನಿರ್ಲಕ್ಷ್ಯಿಸಬೇಡಿ
    ರಕ್ತದೊತ್ತಡ, ಸಿಹಿ ಮೂತ್ರ, ದೃಷ್ಟಿಮಾಂದ್ಯತೆಯಂತಹ ರೋಗಗಳು ಇದ್ದರೆ ಅದನ್ನು ಉಪೇಕ್ಷಿಸಬೇಡಿ
    ವೇಗಮಿತಿಯನ್ನು ಪಾಲಿಸಿ, ಹೈವೇಗಳಲ್ಲಿ ಜೋರಾಗಿ ಚಾಲನೆ ಮಾಡಿದರೂ ಜನನಿಬಿಡ ಪ್ರದೇಶಗಳಲ್ಲಿ ವೇಗ ಚಾಲನೆ ಬೇಡ
    ರಸ್ತೆ ದಾಟುವ ಪಾದಚಾರಿಗಳಿಗೆ ಅವಕಾಶ ಕಲ್ಪಿಸದೆ ವಾಹನ ಚಾಲನೆ ಮಾಡಬೇಡಿ, ಮೊದಲು ಪಾದಚಾರಿಗಳಿಗೆ ಅವಕಾಶ ಕಲ್ಪಿಸಿ
    ಸಂಚಾರ ನಿಯಮದ ಬಗ್ಗೆ ಗೊತ್ತಿಲ್ಲದಿದ್ದಲ್ಲಿ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಹೋಗಿ ಕೇಳಿ ತಿಳಿದುಕೊಳ್ಳಿ. ಟಿ

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement