ನ್ಯಾನೋಕಥೆ
ಹಗಲಿನಲ್ಲಿ ಕಳ್ಳರು ಕದ್ದ ಮಾಲನ್ನು ರಾತ್ರಿ ಪೊಲೀಸರು ಹಂಚಿಕೊಳ್ಳುತ್ತಾ ಇದ್ದರು.
=
'ಕಿರಾಣಿ ಅಂಗಡಿ' ಎಂದು ಬರೆಯಲ್ಪಟ್ಟ ಬೋರ್ಡಿನ ಪಕ್ಕದಲ್ಲಿ ಇನ್ನೊಂದು ಬೋರ್ಡ್ ತೂಗು ಹಾಕತಾಗಿತ್ತು 'ಇಲ್ಲಿ ಕೀಟನಾಶಕ ಮಾರಲಾಗುವುದು.'
=
'ಅಧಿಕ ಜನರನ್ನು ಸಾಗಿಸುವುದು ಅಪರಾಧ' ಎಂದು ಬರೆಯಲಾಗಿದ್ದ ಟೆಂಪೋದಲ್ಲಿ ಬಾಗಿಲು ಹಾಕಲು ಬಾರದಷ್ಟು ಜನರನ್ನು ತುಂಬಲಾಗಿತ್ತು.
=
ದಾರಿಯ ಮೇಲೆ ಬಿದ್ದಿರುವ ಕುಡುಕನನ್ನು ಗೇಲಿ ಮಾಡಿದವ, ಬಾರ್ನಲ್ಲಿ ಕೂತು ಫುಲ್ ಬಾಟಲ್ ಆರ್ಡರ್ ಮಾಡಿದ.
=
ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಣಕಾಸಿನ ವಿಚಾರದಲ್ಲಿ ಅಮಾನತಿನಲ್ಲಿದ್ದ ಶಿಕ್ಷಕ, ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಆಗಿ ಪ್ರಮೋಷನ್ ಪಡೆದ.
=
ವರ್ಷವಿಡೀ ಗುಂಡಿರಸ್ತೆಯಲ್ಲಿ ಓಡಾಡುವ ಬಸ್ಸಿನ ಹಿಂದುಗಡೆ 'ಇಂಧನ ಉಳಿತಾಯ ಸಪ್ತಾಹ, ಇಂಧನ ಉಳಿಸಿ' ಎಂಬ ಫಲಕ ರಾರಾಜಿಸುತ್ತಿತ್ತು.
=
ವಿರೋಧಪಕ್ಷದ ಸದಸ್ಯರೊಬ್ಬರು ಪೆಟ್ರೋಲ್ದರ ಏರಿಕೆಯ ಪ್ರತಿಭಟನೆಯಲ್ಲಿ ಭಾಗವಹಿಸಿ, ಹೊಸ ಪೆಟ್ರೋಲ್ ಕಾರ್ಗೆ ಬುಕ್ ಮಾಡಿಸಿದ.
= ಗಣೇಶ್ ಹೆಗಡೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.