ಹೂವುಗಳನ್ನು ಕಾಪಾಡುವುದು ಹೇಗೆ?
ಡ್ಹೇಲಿಯಾ ಮತ್ತಿತರ ಹೂಗಳನ್ನು ಇಡುವಾಗ ನೀರಿನಲ್ಲಿ ಇದ್ದಲ್ಲಿನ ತುಂಡು ಹಾಕಿದರೆ ನೀರಿನಲ್ಲಿ ದುರ್ಗುಣದ ವಾಸನೆ ಇರದು.
ಹೂದಾನಿಯಲ್ಲಿರುವ ಹೂಗಳ ದಂಟಿನ ಭಾಗವನ್ನು ಪ್ರತಿದಿನವೂ ಚಿಕ್ಕದಾಗಿ ಕತ್ತರಿಸುತ್ತಿದ್ದರೆ ಹೂಗಳು ಕೆಡುವುದಿಲ್ಲ.
ಪುಷ್ಪ ಕಲಶದಲ್ಲಿ ಹೂಗಳನ್ನು ಇಡುವಾಗ ಎಲೆಗಳು ಇರಬಾರದು. ಏಕೆಂದರೆ ಎಲೆಗಳು ಬೇಗನೆ ಕೊಳೆತು ಬಹುಕಾಲ ಉಳಿಯಲಾರವು.
ಹೂವಿನ ಪಾತ್ರೆಗೆ ಸ್ವಲ್ಪ ಸಕ್ಕರೆ ಸೇರಿಸುವುದರಿಂದ ಪುಷ್ಪಗಳು ಹಾಳಾಗುವುದಿಲ್ಲ.
ಹೂದಾನಿಗಳ ಹೂಗಳು ಬಾಡದಂತೆ ಉಳಿಯಲು ಹೂಗಳ ಮೇಲೆ ಬೆಚ್ಚಗಿನ ನೀರನ್ನು ಚಿಮುಕಿಸಬೇಕು.
-ಮಾಲಾ ಹುನಗುಂದ,
ಗಂಗಾವತಿ.