ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಿನ್ಮಯ ಶಾಲೆ ಜ್ಞಾನಮಯ

Vishwanath S
Updated On : 29 Jan 2014, 1:43 am

ಚಿನ್ಮಯ ಮಿಷನ್ ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ಅಧ್ಯಾತ್ಮ, ಜತೆಗೇ ಜನಸೇವೆ. 1953ರಲ್ಲಿ ಹುಟ್ಟಿದ ಚಿನ್ಮಯ ಮಿಷನ್ ವೇದಾಂತದ ಮೂಲಕ ಜನರಿಗೆ ತಮ್ಮ ತಮ್ಮ ಧರ್ಮಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಪ್ರಯತ್ನದಲ್ಲಿ ತೊಡಗಿದೆ. ಸ್ವಾಮಿ ತಪೋವನಂ ಅವರಿಂದ ವೇದಾಂತದ ದಿವ್ಯ ದೀಕ್ಷೆ ಪಡೆದ ಸ್ವಾಮಿ ಚಿನ್ಮಯಾನಂದರು ತಮ್ಮ ಜ್ಞಾನ ಹಾಗೂ ಸೇವೆಯ ವಿಸ್ತರಣೆಗೆ ಸ್ಥಾಪಿಸಿದ ಸಂಸ್ಥೆ ಇದು.
ದೇಶಾದ್ಯಂತ ಹಬ್ಬಿರುವ ಮಿಷನ್‌ನ ಜ್ಞಾನಸತ್ರದ ಅಂಗವಾಗಿ, ಅದರ 7ನೇ ವಿದ್ಯಾಸಂಸ್ಥೆ ಬೆಂಗಳೂರಿನ ಬನಶಂಕರಿಯ 6ನೇ ಫೇಸ್, 7ನೇ ಬ್ಲಾಕ್‌ನಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಈಗಾಗಲೇ 6 ಚಿನ್ಮಯ ವಿದ್ಯಾಸಂಸ್ಥೆಗಳಿವೆ. ದೇಶದಲ್ಲಿ ಇವುಗಳ ಸಂಖ್ಯೆ 80. ಕಾಲೇಜುಗಳು 8. ಜ್ಞಾನಯಜ್ಞ, ಅಧ್ಯಾತ್ಮ ಕ್ಯಾಂಪ್‌ಗಳು, ಧರ್ಮಸೇವಕ ಕೋರ್ಸ್‌ಗಳು, ವೇದಾಂತ ಕೋರ್ಸ್‌ಗಳು, ವಿಭಿನ್ನ ವಯೋವಾನದವರಿಗೆ ಫೋರಂಗಳು, ವಾನಪ್ರಸ್ಥ ಸಂಸ್ಥಾನಂ, ಹಳ್ಳಿಗಳ ಪುನಶ್ಚೇತನ ಕಾರ್ಯಕ್ರಮ, ವೈದ್ಯಕೀಯ ಸವಲತ್ತುಗಳು ಇವೆಲ್ಲವುಗಳ ಮೂಲಕ ಮಿಷನ್‌ನ ಸೇವೆ ಹರಡಿಕೊಂಡಿದೆ.  1.5 ಎಕರೆಯಲ್ಲಿ ಹರಡಿರುವ ಈ ಸಂಸ್ಥೆ ರಮಣೀಯ ವಾತಾವರಣದಲ್ಲಿದೆ. ವಿಶಾಲ ಇಂಟರ್ಯಾಕ್ಟಿವ್ ತರಗತಿಗಳು, ಕಂಪ್ಯೂಟರ್ ಲ್ಯಾಬ್, ಲೈಬ್ರರಿ, ಪ್ಲೇ ಏರಿಯಾ, ಉದ್ಯಾನ ಇಲ್ಲಿನ ವೈಶಿಷ್ಟ್ಯ. ಮಕ್ಕಳು ಸ್ವಾವಲಂಬಿಗಳಾಗಿ ಬದುಕಲು ಏನೆಲ್ಲ ಬೇಕೋ ಅದನ್ನು ನಮ್ಮ ವಿದ್ಯಾಶಾಲೆಗಳು ನೀಡುತ್ತಿವೆ. ಮಕ್ಕಳು, ಪೋಷಕರು ಅದರ ಉಪಯೋಗ ಪಡೆಯಬೇಕೆಂಬುದು ನಮ್ಮ ಆಶಯ ಎನ್ನುತ್ತಾರೆ ಸಂಸ್ಥೆಯ ಪ್ರಾಂಶುಪಾಲರಾದ ಯಮುನಾ ಸೂರ್ಯಪ್ರಕಾಶ್. (ಸಂಪರ್ಕ: 080 22728604)


-ಗೀತಾ ಶ್ರೀನಿವಾಸನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement