ಪ್ರೈಡ್ ಪರೇಡ್
ಸೀಗ್ರಾಮ್ ಬ್ಲೆಂಡರ್ಸ್ ಪ್ರೈಡ್ ಬೆಂಗಳೂರು ಫ್ಯಾಶನ್ ವೀಕ್ನ ಹತ್ತನೇ ಆವೃತ್ತಿ ಮೊನ್ನೆ ಮೊನ್ನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕ್ರೌನ್ ಪ್ಲಾಜಾದಲ್ಲಿ ನಡೆಯಿತು. ಫ್ಯಾಶನ್ ಲೋಕದ ಮುಂಚೂಣಿ ತಾರೆಗಳಾದ ಡಿಸೈನರ್ಸ್ರಮೇಶ್ ಡೆಂಬ್ಲಾ, ಕೃಷ್ಣ ಡೆಂಬ್ಲಾ, ಅಭಿಷೇಕ್ ದತ್ತಾ, ತಾನಿಯಾ ಸಾಗ್ವಾನ್, ಶ್ಲೋಕಾ ಸುಧಾಕರ್, ಮನೋವಿರಾಜ್ ಖೋಸ್ಲಾ, ರ್ವಿತಿ ರಾಯ್, ರೂಹ್ ಅಫ್ಜಾ, ಅಸ್ಲಂ ಖಾನ್ ಅವರ ನೇತೃತ್ವದಲ್ಲಿ ಹಲವು ಬಾಲೆಯರು ಕ್ಯಾಟ್ವಾಕ್ ಮಾಡಿದರು. ಕನ್ನಡ ನಟಿಯರಾದ ಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆ, ನೈನಾ ಮುಂತಾದವರೂ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಸ್ಥಳೀಯ ಪ್ರೇಕ್ಷಕರನ್ನು ರಂಜಿಸಿದರು. ಪಾಶ್ಚಾತ್ಯ ಉಡುಪುಗಳ ಜೊತೆಗೆ, ಯಕ್ಷಗಾನದ ದಿರಿಸುಗಳನ್ನೂ ಹಾಕಿದ ಮಾಡೆಲ್ಗಳು ಫ್ಯಾಶನ್ ಶೋಗೆ ಇನ್ನಷ್ಟು ಮೆರುಗು ಕೊಟ್ಟರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.