ಮಹಾಮಾಯ ಹಬ್ಬ
ನೃತ್ಯ ಶಿಕ್ಷಣ, ಪ್ರದರ್ಶನ, ಜನಸಮೂಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ 'ಮಹಾಮಾಯಾ' ಶಾಲೆ, ಫೆ.2ರಂದು ಭಾರತೀಯ ಸಾಂಪ್ರದಾಯಕ ನೃತ್ಯ ಒಳಗೊಂಡಿರುವ 'ಮಹಾಮಾಯಾ ಹಬ್ಬ' ಆಯೋಜಿಸಿದೆ. ಅಂದು ಸಂಜೆ 6 ಗಂಟೆಗೆ ಮಹಾಮಾಯಾ ಶಾಲೆಯ 'ಬೆಳಕು' ತಂಡದ ಮಕ್ಕಳಿಂದ 'ಪಿಂಗಾರ' ನೃತ್ಯ ಕಾರ್ಯಕ್ರಮ ಜರುಗಲಿದೆ. 6.30ಕ್ಕೆ ಸೂರ್ಯ ಎನ್. ರಾವ್ ಮತ್ತು ಪ್ರಥಮಾ ಪ್ರಸಾದ್ ರಾವ್ ಅವರಿಂದ ಕೂಚುಪುಡಿ ಹಾಗೂ ಕಥಕ್ ಜುಗಲ್ ಬಂಧಿ 'ಸಮ್ಮಿಲನ' ನಡೆಯಲಿದೆ.
7.15ಕ್ಕೆ ಖ್ಯಾತ ಭರತ ನಾಟ್ಯಗಾರರಾದ ಶ್ರೀಧರ್ ಹಾಗೂ ಅನುರಾಧ ಶ್ರೀಧರ್ ಅವರಿಂದ 'ಮಹಾಭಾರತ' ಭರತ ನಾಟ್ಯ ಪ್ರದರ್ಶನ ನಡೆಯಲಿದೆ.
ಸ್ಥಳ: ಸೇವಾ ಸದನ, 14ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ಮಾಹಿತಿಗೆ: 9620202378.
ಸೂರ್ಯನಮಸ್ಕಾರ
ಬೆಂಗಳೂರಿನ ಆಯುಶ್ರೀ ಆಯುರ್ವೇದ ಕೇಂದ್ರವು, ರಥ ಸಪ್ತಮಿ ಅಂಗವಾಗಿ ಫೆ.2ರಂದು 108 ಬಾರಿ ಸಾಮೂಹಿಕ ಉಚಿತ ಸೂರ್ಯ ನಮಸ್ಕಾರ ಕಾರ್ಯಕ್ರಮ ಏರ್ಪಡಿಸಿದೆ. ಸ್ಥಳ: ಸಿಎಂಆರ್ ಮೈದಾನ ಕಮ್ಮನಹಳ್ಳಿ, ಬೆಂಗಳೂರು. ಮಾಹಿತಿಗೆ: ಡಾ. ಆರ್.ಆರ್. ಪ್ರಸಾದ್ ದೂ.9448429858
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.