ಬೆಂಡೆ ಮಸಾಲ
ಬೇಕಾಗುವ ಸಾಮಗ್ರಿಗಳು : ಬೆಂಡೆಕಾಯಿ, ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ , ಕೊತ್ತಂಬರಿ ಪುಡಿ, ಒಂದು ಚಮಚ ಜೀರಿಗೆ, ಒಂದು ಚಮಚ ಅಚ್ಚಖಾರದ ಪುಡಿ , ಒಂದು ಚಮಚ ಗರಂ ಮಸಾಲ ಪುಡಿ, ಚಕ್ಕೆ ಮೊಗ್ಗು, ಹುಣಸೆಹಣ್ಣು ಅಥವಾ ಹುಣಸೆಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎಣ್ಣೆ.
ಮಾಡುವ ವಿಧಾನ: ಬೆಂಡೆಕಾಯಿ ತೊಳೆದು ಕತ್ತರಿಸಿ ಅರ್ಧಭಾಗ ಮಾಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಹಾಕಿ. ಅದು ಕಾದ ನಂತರ, ಈರುಳ್ಳಿ ಸೇರಿಸಿ. ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಮಿಶ್ರಣ ಹಾಕಿ. ಹೊಂಬಣ್ಣ ಬರುವ ತನಕ ಫ್ರೈ ಮಾಡಿ. ಈಗ ಬೆಂಡೆಕಾಯಿ ಸುರಿಯಿರಿ. ಮಿಕ್ಕ ಎಲ್ಲ ಮಸಾಲೆ ಐಟಂಗಳನ್ನೂ ಸೇರಿಸಿ. ಚೆನ್ನಾಗಿ ಸೌಟಿನಿಂದ ತೊಳಸಿ. ತಳಕ್ಕಂಟದಂತೆ ನೋಡಿಕೊಳ್ಳಿ. ತಯಾರಾದ ಬೆಂಡೆ ಮಸಾಲಾವನ್ನು ಚಪಾತಿಯೊಂದಿಗೆ ಸವಿಯಿರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.