ಐಯ್ಯೋ ಫೋನ್!
ಉತ್ತಮ ವಂಶದಲ್ಲಿ ಹುಟ್ಟಿ, ಚೆನ್ನಾಗಿ ಕಲಿತು, ರಾಜಧಾನಿಯಲ್ಲಿ ಉದ್ಯೋ ಗಕ್ಕೆ ಸೇರುತ್ತಾನೆ. ಆಮೇಲೇನು ಮಾಡುತ್ತಾನೆ? ಐಫೋನ್ ಖರೀದಿಸುತ್ತಾನೆ!
ಉತ್ತಮ ವಂಶದಲ್ಲಿ ಹುಟ್ಟಿ, ಚೆನ್ನಾಗಿ ಕಲಿತು, ರಾಜಧಾನಿಯಲ್ಲಿ ಉದ್ಯೋ ಗಕ್ಕೆ ಸೇರುತ್ತಾನೆ. ಆಮೇಲೇನು ಮಾಡುತ್ತಾನೆ? ಐಫೋನ್ ಖರೀದಿಸುತ್ತಾನೆ!
ಭಾರತೀಯ ಯುವಕ/ಯುವತಿಯರ ಕ್ರೇಜಿನೆಸ್ ಅನ್ನು ಹೀಗೆ ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದು. ಇಂಥ ಹೆಚ್ಚಿನವರಿಗೆ ಜೀವಮಾನದಲ್ಲಿ ಒಂದು ಐಫೋನ್ ಹೊಂದುವುದೇ ದೊಡ್ಡ ಸಾಧನೆ ಎಂಬ ಭಾವನೆ. ಐಫೋನ್ ಖರೀದಿಸಿದ ಮೇಲಂತೂ ಮೂರೂ ಹೊತ್ತು ಅದರದೇ ಗುಣಗಾನ. ಇದಕ್ಕಿಂತ ಶ್ರೇಷ್ಠವಾದದ್ದು ಇನ್ನಿಲ್ಲ ಎಂಬ ಪ್ರದರ್ಶನರತಿ. ಅಂಥವರ ಕೆಲ ಗುಣಲಕ್ಷಣಗಳು ಇಲ್ಲಿವೆ.
- ಅವರು ಉಪಯೋಗಿಸುತ್ತಿರುವುದು ಐಫೋನ್ ಮಾತ್ರ. ಆದರೆ ಎಲ್ಲ ಆಪಲ್ ಉತ್ಪನ್ನಗಳೂ ಎಂಥ ಸೂಪರ್ ಗೊತ್ತಾ ಎಂದು ಲೆಕ್ಚರ್ ಕೊಡುತ್ತಿರುತ್ತಾರೆ.
- ನೋಕಿಯಾ, ಸ್ಯಾಮ್ಸಂಗ್ಗಳೆಲ್ಲ ಕ್ರಾಪ್, ಸಿಲ್ಲಿ ಚೀನೀ ಪ್ರಾಡಕ್ಟ್ಗಳು ಎಂದು ಬಯ್ಯುತ್ತಿರುತ್ತಾರೆ.
- ಪ್ರತಿ ಸಲದ ಸಂಭಾಷಣೆಯಲ್ಲೂ 'ನಿಮ್ಮತ್ರ ಐಫೋನ್ ಇಲ್ದಿದ್ರೆ, ಐಫೋನ್ ಇಲ್ಲ ಅಷ್ಟೇ' ಎಂದು ಉಲಿಸುತ್ತಿರುತ್ತಾರೆ.
- ಸ್ಟೀವ್ ಜಾಬ್ ಕೂಡ ಪತ್ತೆ ಹಚ್ಚಲಾಗದಂತೆ, ಜಗಮಗಿಸುವ ಕವರ್ಗಳಲ್ಲಿ ಸುತ್ತಿ ಸಂರಕ್ಷಿಸುತ್ತಿರುತ್ತಾರೆ.
- ಆಂಡ್ರಾಯ್ಡ್ ಬಳಕೆದಾರರನ್ನೆಲ್ಲ ಅದ್ಯಾವುದೋ ಮುಟ್ಟಿಸಿಕೊಳ್ಳಲಾಗದ ರೋಗ ಹತ್ತಿದವರಂತೆ ಕಾಣುತ್ತಾರೆ.
- ಐಪೋನ್ ಕೊಂಡರೆ ಪ್ರೊಡಕ್ಟಿವಿಟಿ ಎಷ್ಟು ಹೆಚ್ಚಾಗುತ್ತೆ ಎಂದು ಭಾಷಣ ಬಿಗಿಯುತ್ತಾರೆ. ನಿಜವಾಗಿಯೂ ಅವರು ಅದರಲ್ಲಿ ಕ್ಯಾಂಡಿ ಕ್ರಶ್ ಆಡುತ್ತಿರುತ್ತಾರೆ.
- ಜಾಗತಿಕ ತಾಪಮಾನ ಬಗ್ಗೆ, ಭಯೋತ್ಪಾದನೆ ಬಗ್ಗೆ ಚರ್ಚೆಯಾಗುತ್ತಿದ್ದರೂ ಅದನ್ನು ಕಡೆಗೆ ಒಯ್ದು ತಂದು ಐಫೋನ್ನಲ್ಲಿ ನಿಲ್ಲಿಸುತ್ತಾರೆ.
- ಸೆಲ್ಫಿ ತೆಗೆಯುವ ಹುಚ್ಚು ಭಯಂಕರವಾಗಿರುತ್ತದೆ.
- ಬೇರೆ ಐಫೋನ್ ಬಳಕೆದಾರರು ಸಿಕ್ಕಿದರೆ ಚಡ್ಡಿ ದೋಸ್ತ್ ಸಿಕ್ಕಂತೆ ಖುಷಿಯಾಗಿಬಿಡುತ್ತಾರೆ.
- ಬೇರೆ ಫೋನ್ ಯೂಸರ್ ಏನಾದರೂ ಒಂದ್ಸಲ ತಪ್ಪಿ ಚಾರ್ಜರ್ ಕೇಳಿಬಿಟ್ಟರಂತೂ, 'ಹಲೋ, ನಂದು ಐಫೋನ್ ಗೊತ್ತಾ?' ಎಂದು ಕುಟುಕುತ್ತಾರೆ.
ವನಮಾಲಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.