ಏಸಿ ಸಿಟಿ
ಜಗತ್ತಿನ ಅತ್ಯಂತ ಎತ್ತರದ ಕಟ್ಟಡವನ್ನು ಹೊಂದಿರುವ ಹೆಗ್ಗಳಿಕೆ ಈಗಾಗಲೇ ದುಬೈ ಹೆಸರಿನಲ್ಲಿದೆ. ಇದನ್ನು ಮೀರಿಸುವ ಇನ್ನೊಂದು ರಚನೆ ಸದ್ಯದಲ್ಲಂತೂ ಬರಲಾರದು. ಆದರೆ ದುಬೈ ದೊರೆಗಳಿಗೆ ಜಾಗತಿಕ ಆಕರ್ಷಣೆಗಳನ್ನು ನಿರ್ಮಿಸುವ ಹುಚ್ಚು. ಅದಕ್ಕೇ ಸಂಪೂರ್ಣ ಹವಾನಿಯಂತ್ರಿತ ನಗರವೊಂದನ್ನು ಕಟ್ಟಲು ಮುಂದಾಗಿದ್ದಾರೆ.
ಹೇಳಿಕೇಳಿ ದುಬೈ ಮರಳುಗಾಡಿನ ನಗರ. ಹುಡುಕಿದರೂ ಮರಗಳು ಅಲ್ಲಿ ಅಪರೂಪ. ಹಗಲಲ್ಲಿ 50 ಡಿಗ್ರಿ ಸೆಂಟಿಗ್ರೇಡ್ನ ಉರಿ. ರಾತ್ರಿ ಮೈ ಕೊರೆಯುವ ಚಳಿ. ಭವನಗಳ ಒಳಗೆ ಹವಾನಿಯಂತ್ರಣಗಳಿವೆಯಾದರೂ, ಅದುಸಾಲದು. ಅದಕ್ಕೇ ಎಸಿ ನಗರದ ಕನಸು.
ಬುರ್ಜ್ ಖಲೀಫಾಕ್ಕೆ ಹತ್ತಿರದಲ್ಲೇ ಏಸಿ ಸಿಟಿ ಬರಲಿದೆ. ಇದು ಜಗತ್ತಿನ ಅತಿ ದೊಡ್ಡ ಶಾಪಿಂಗ್ ಮಾಲ್. ಇಡೀ ನಗರವನ್ನು ಬೃಹತ್ ಗಾಜಿನ ಗೋಪುರ ಸುತ್ತುವರಿದು ಬೀದಿಗಳನ್ನೂ ತಂಪಾಗಿರಿಸುತ್ತದೆ. ನಗರದ ವಿಸ್ತೀರ್ಣ 48 ದಶಲಕ್ಷ ಚದರಡಿ. ಬೀದಿಗಳ ಉದ್ದ ನಾಲ್ಕೂವರೆ ಮೈಲು. ತಂಪಾದ ಥಿಯೇಟರ್ಗಳೂ, ಬಿಸಿಬಿಸಿ ಆಹಾರ ದೊರೆಯುವ 100 ರೆಸ್ಟೋರೆಂಟ್ಗಳು ಮತ್ತು ಅಪಾರ್ಟ್ಮೆಂಟ್ಗಳಿರಲಿವೆ. ಈ ಪ್ರಾಜೆಕ್ಟ್, ದುಬೈಯನ್ನು ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಇನ್ನಷ್ಟು ಶ್ರೀಮಂತಗೊಳಿಸಲಿದೆ ಅನ್ನುವ ಹಾರೈಕೆ ಅಲ್ಲಿನ ದೊರೆಮಗ ಶೇಖ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.