ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದೇವತೆಗಳ ಮತ್ತು ರಾಕ್ಷಸರ ಮೊತ್ತವೇ ಮನುಷ್ಯರು!

ರಾಕ್ಷಸರಿಗೆ, ದೇವತೆಗಳಿಗೆ ತುಂಬಾ ಬಲಹೀನತೆಗಳಿವೆ. ಆ ಮಾತಿಗೆ ಬಂದರೆ ಅವರಿಗೆ...

Mainashree
Updated On : 9 Jul 2014, 11:19 am

ಭಾಗ- 8

ರಾಕ್ಷಸರಿಗೆ, ದೇವತೆಗಳಿಗೆ ತುಂಬಾ ಬಲಹೀನತೆಗಳಿವೆ.  ಆ ಮಾತಿಗೆ ಬಂದರೆ ಅವರಿಗೆ ನಮಗಿಂತ ಹೆಚ್ಚಾಗಿವೆ. ಕೋಪ, ಅಸೂಯೆ, ಸ್ಯಾಡಿಜಂ ವಗೈರೆ ರಾಕ್ಷಸರ ಬಲಹೀನತೆಗಳು. ಕುಂಭಕರ್ಣನಿಗೆ ಅತಿನಿದ್ರೆ. ಮಾರೀಚ ಸುಬಾಹುಗಳದು ಸ್ಯಾಡಿಸಂ. ಹಿರಣ್ಯಕಶಿಪುವಿನದು ಅಹಂ. ಮತ್ತೊಂದೆಡೆ ದೇವತೆಗಳ ಬಲಹೀನತೆಗಳು ಈರ್ಷ್ಯ, ಅಧೈರ್ಯ, ಕಾಮ, ಸೋಮಾರಿತನ, ಕುಡಿತ ಇತ್ಯಾದಿ.
ದೇವತೆಗಳ ಮೊದಲ ಬಲಹೀನತೆ ಭಯ. ರಾಕ್ಷಸರು ದಂಡೆತ್ತಿ ಬಂದೊಡನೆ ಎಲ್ಲಿಯೋ ಹೋಗಿ ಅಡಗಿಕೊಳ್ಳುತ್ತಾರೆ. ವಿಷ್ಣುವಿನ ಹತ್ತಿರಕ್ಕೋ, ಶಿವನ ಹತ್ತಿರಕ್ಕೋ ಓಡಿ ಹೋಗುತ್ತಾರೆ. ಭಯ ಇರುವವನಿಗೆ ಅಧಿಕಾರವಿದ್ದರೆ ಅದು ಕೋಪವಾಗಿ ಬದಲಾಗುತ್ತದೆ. ಅದಕ್ಕೇ ಅವರು ಸದಾ ಶಾಪಗಳನ್ನು
ನೀಡುತ್ತಾ ಇರುತ್ತಾರೆ.
ಎರಡನೆಯದು ಸೋಮಾರಿತನ. ದೇವತೆಗಳು ಕೆಲಸವೇನನ್ನೂ ಮಾಡುವುದಿಲ್ಲ. ಉದ್ಯಾನವನಗಳಲ್ಲಿ ಅಪ್ಸರೆಯರೊಂದಿಗೆ  ಕ್ರೀಡೆಗಳಲ್ಲಿ ತೊಡಗಿರುತ್ತಾರೆ. ಅವರ ಉದ್ಯಾನವನಗಳಲ್ಲಿ ಮರಗಳಿಗೆ ನೀರು ಯಾರು ಉಣಿಸುತ್ತಾರೋ, ಒಣಗಿದ ಎಲೆಗಳನ್ನು ಯಾರು ಸ್ವಚ್ಛ ಮಾಡುತ್ತಾರೋ ತಿಳಿಯದು. `ದೇವಲೋಕದಲ್ಲಿ ಮರಗಳ ಎಲೆಗಳು ಒಣಗುವುದಿಲ್ಲ ಎಂದರೆ ವಾಗ್ವಾದವೇ ಇಲ್ಲ.
ಮೂರನೆಯ ಬಲಹೀನತೆ ಕಾಮ. ಊರ್ವಶಿ, ಮೇನಕ ಇತ್ಯಾದಿ ನಾಟ್ಯಗಾರ್ತಿಯರು ಐಟಂ ಸಾಂಗುಗಳಿಗೆ ಪೌರಾಣಿಕ ಪದ್ಧತಿಯಲ್ಲಿ ನೃತ್ಯ ಮಾಡುತ್ತಾ ಇದ್ದರೆ ಇಂದ್ರ ಮುಂತಾದವರು ಕುಳಿತು ಸುರಾಪಾನ ಮಾಡುತ್ತಾ ವೀಕ್ಷಿಸುತ್ತಾ ಇರುತ್ತಾರೆ. (ಸತ್ತರೆ ಅಲ್ಲಿಗೆ ಹೋಗಿ ಹೊಟ್ಟೆ ತುಂಬ ಸುರಾಪಾನ ಮಾಡುವುದಕ್ಕಾಗಿ, ಜನರು ಇಲ್ಲಿ ಭೂಲೋಕದಲ್ಲಿ ಒಂದು ಹೊತ್ತಿನ ಊಟ, ವ್ರತಗಳು, ಉಪವಾಸಗಳನ್ನು ಮಾಡುತ್ತಾ ಇರುತ್ತಾರೆ) ದೇವರು ಒಂದು ಆತ್ಮದೊಂದಿಗೆ ಭೂಮಿಯ ಮೇಲೆ ನೀನು ಮಾಡಿದ ಉತ್ತಮ ಕೆಲಸ ಯಾವುದು ಹೇಳು. ನಿನ್ನನ್ನು ನರಕಕ್ಕೆ ಕಳಿಸುವುದೋ, ಸ್ವರ್ಗಕ್ಕೆ ಕಳಿಸುವುದೋ ಎಂದು ನಿರ್ಧರಿಸುತ್ತೇನೆ ಎಂದನಂತೆ.
ನನ್ನ ಅಜ್ಞಾನಕ್ಕೆ ಕ್ಷಮಿಸು ದೇವಾ. ಎರಡರ ನಡುವಿನ ವ್ಯತ್ಯಾಸ ಏನು? ಎಂದು ಆತ್ಮ ಕೇಳಿತು.
ಸ್ವರ್ಗದಲ್ಲಿ ಕೇವಲ ಆನಂದ ಇರುತ್ತದೆ. ನರಕದಲ್ಲಾದರೆ ಕೆಲಸ ಮಾಡಬೇಕು ಎಂದು ಉತ್ತರಿಸಿದ ದೇವರು. ಅದಕ್ಕೆ ಆ ಆತ್ಮ ಮತ್ತಷ್ಟು ಗಲಿಬಿಲಿಯಿಂದ ಕೆಲಸ ಮಾಡದೇ ಆನಂದ ಹೇಗೆ ಬರುತ್ತದೆ? ಕೆಲಸವನ್ನು ಬಿಟ್ಟರೆ ಬೇರೆ ಯಾವುದರಲ್ಲಿ ಆನಂದ ಇದೆ? ಎಂದು ಕೇಳಿತಂತೆ.
ಈ ಅದ್ಭುತವಾದ ಸಂದೇಹಕ್ಕೆ ದೇವರು ಸಂತಸಗೊಂಡು, ಇದೇ ಸೂತ್ರವನ್ನು ತನ್ನ ಕಡೆಯಿಂದ ಮಾನವಕುಲಕ್ಕೆ, ಮುಖ್ಯವಾಗಿ ರಾಜಕೀಯ ನಾಯಕರಿಗೆ ಬೋಧಿಸಬೇಕೆಂದು ಆ ಆತ್ಮವನ್ನು ಮತ್ತೆ ಭೂಮಿಗೆ ಕಳಿಸಿದನಂತೆ. (ಈ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಮೇಲಿನ ಉದಾಹರಣೆ ಬರೆದಾಗ, ಒಬ್ಬರು ಓದುಗರು, ನೀವು ಇಂತಹ ಆತ್ಮಗಳನ್ನೂ, ಪ್ರವಾದಿಗಳನ್ನೂ ನಂಬುವುದಿಲ್ಲ ಅಲ್ಲವೇ? ಎಂದು ವಿಮರ್ಶಿಸಿದರು. ಕೆಲಸದಲ್ಲಿ ಮಾತ್ರವೇ ಆನಂದವಿರುವುದೆಂದು ಹೇಳುವುದು ಮಾತ್ರವೇ ಇಲ್ಲಿನ ಉದ್ದೇಶ.)
ಇನ್ನು ಮನುಷ್ಯರ ರೋಗಗಳ ಬಗ್ಗೆ ಹೇಳಬೇಕೆಂದರೆ, ಮೊತ್ತವಾಗಿ ರಾಕ್ಷಸರ + ದೇವತೆಗಳ ರೋಗಗಳೆಲ್ಲವೂ ಅವರಿಗೆ ಇವೆ. ಸ್ಥೂಲವಾಗಿ ಅವು ಎರಡು ವಿಧಗಳು. ಶಾರೀರಿಕ, ಮಾನಸಿಕ...! ಅದರಲ್ಲಿ ಕೆಲವು ವಾಸ್ತವಗಳು, ಮತ್ತೆ ಕೆಲವು ಕಲ್ಪನೆಗಳು (ಇಲ್ಲವೇ ಸ್ವಯಂಕಲ್ಪಿತ). ಶಾರೀರಿಕ ರೋಗಗಳಾದ ಉಬ್ಬಸ, ಕೀಲುನೋವುಗಳು, ಕ್ಯಾನ್ಸರ್ನಂತಹ ಕೆಲವು ವಾಸ್ತವಗಳು. ಸೋಮಾರಿತನ, ಅತಿನಿದ್ರೆ ಇಂತಹವು ಸ್ವಯಂಕಲ್ಪಿತ. ಅದೇ ವಿಧದಲ್ಲಿ, ಮಾನಸಿಕರೋಗಗಳಾದ ಮನೋವ್ಯಾಧಿ (ಸ್ಕೀಜೋಫ್ರೇನಿಯಾ), ಸ್ಮೃತಿನಾಶ (ಅಮ್ನೀಸಿಯಾ) ಮೊದಲಾದವುಗಳು ವಾಸ್ತವಗಳು. ಒತ್ತಡ (ಟೆನ್ಷನ್), ಆತಂಕ (ಆಂಕ್ಜೈಟಿ) ಮುಂತಾದವುಗಳು ಮಾನವನ ಊಹೆಯಿಂದ ಹುಟ್ಟಿದವುಗಳು.
ಈ ನಾಲ್ಕು ವೈವಿಧ್ಯಗಳಲ್ಲದೇ ಮತ್ತೆರಡು ಬಲಹೀನತೆಗಳಿವೆ. ಭಯಗಳು (ಫೋಬಿಯಾ), ದುವ್ರ್ಯಸನಗಳು. ಕತ್ತಲೆ, ನೀರು, ಬೆಂಕಿ, ಎತ್ತರದ ಪ್ರದೇಶ ಮೊದಲಾದುವುಗಳಿಂದ ಉಂಟಾಗುವ ಭಯಗಳನ್ನು ಫೋಬಿಯಾ ಎನ್ನುತ್ತಾರೆ. ಕುಡಿತ, ಇಸ್ಪೀಟಾಟ ಮುಂತಾದವು ವ್ಯಸನಗಳು. ಒಂದು ಮಾತಿನಲ್ಲಿ ಹೇಳಬೇಕೆಂದರೆ ಹಾನಿ ಮಾಡುವ ಭಯಗಳನ್ನು ಫೋಬಿಯಾ ಎನ್ನುತ್ತಾರೆ. ಹಾನಿ ಮಾಡುವ ಕೋರಿಕೆಗಳನ್ನು ದುವ್ರ್ಯಸನಗಳೆನ್ನುತ್ತಾರೆ.
ದೈಹಿಕವಾದ ರೋಗಗಳನ್ನು ಸರಿಸುಮಾರಾಗಿ ಔಷಧಿಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಮಾನಸಿಕವಾದುದನ್ನು ಕಡಿಮೆ ಮಾಡಿಕೊಳ್ಳಲು ದೃಢಚಿತ್ತ ಬೇಕು. ಇವು ವಿಷಜ್ವರದಂತಹವು. ಕ್ರಮೇಣ ಆಕ್ರಮಿಸಿ ಪೂರ್ತಿಯಾಗಿ ಸ್ವಾಧೀನ ಮಾಡಿಕೊಳ್ಳುತ್ತವೆ. ಅವುಗಳಲ್ಲಿ ಭಯ ಒಂದು.
ಕತ್ತಲಿನಲ್ಲಿ ಸ್ಮಶಾನಕ್ಕೆ ಹೋಗುವಷ್ಟು ಧೈರ್ಯ ನಮಗಿಲ್ಲದೇ ಇರಬಹುದು. ಆದರೆ ಅರ್ಧರಾತ್ರಿಯಲ್ಲಿ ಲೈಟ್ ಹಾಕಿಕೊಂಡು ಕೂಡಾ ಕೆಲವರು ತಮ್ಮ ಮನೆಯ ಅಡುಗೆಮನೆಗೇ ಹೋಗಲಾರರು. ಇಂಟರ್ವ್ಯೂನಲ್ಲಿ ಕೆಲವರು ಬೆವರು ಸುರಿಸದೇ ಉತ್ತರ ಹೇಳಲಾರರು. ಕೆಲವರಂತೂ ತಲೆತಿರುಗಿ ಪ್ರಜ್ಞೆ ತಪ್ಪಿ ಬಿಡುತ್ತಾರೆ. ಏಕೆಂದು
ಕೇಳಿದರೆ, ಅನುಭವ ಇಲ್ಲವಲ್ಲ ಎನ್ನುತ್ತಾರೆ. ಮೊದಲ ಮದುವೆಗೆ, ಪ್ರಥಮ ಶೋಭನಕ್ಕೆ ಕೂಡಾ ಅದು ಇರುವುದಿಲ್ಲವೆಂದು ಅಂದುಕೊಳ್ಳುವುದಿಲ್ಲ.
ನಿಮ್ಮ ಬಲಹೀನತೆಗಳನ್ನು ನೀವು ಗುರುತಿಸದಿದ್ದರೆ ಬೇರೆ ಯಾರು ಗುರುತಿಸುತ್ತಾರೆ? ಬಲಹೀನತೆಗಳನ್ನು ಗುರುತಿಸಿ, ಅವನ್ನು ನಿಮರ್ೂಲ ಮಾಡಿದ ಮೇಲೆ ಶಿಖರವನ್ನು ಹತ್ತಲು ಆರಂಭಿಸಬೇಕು. ಯಾವ ಶಿಖರ? ಎವರೆಸ್ಟಾ? ಮೇರು ಪರ್ವತವೇ? ವಿದ್ಯೆಯೇ? ಹಣವೇ? ಮಾನವಸೇವೆಯೇ? ಅದೇ ಗಮ್ಯವೆಂದರೆ. ಗಮ್ಯವನ್ನು ಗುರುತಿಸುವುದರಿಂದ ಗೆಲುವಿನ ಪ್ರಯಾಣ ಪ್ರಾರಂಭವಾಗುತ್ತದೆ. ಯಾವುದು ನಿಮ್ಮ ಗಮ್ಯ?
ನೀವಿರುವ ಆಫೀಸಿಗೆ ಬಾಸ್ ಆಗುವುದಾ? ನಿಮ್ಮ ಅಧಿಕಾರಕ್ಕಾಗಿ ಭಜನೆ ಮಾಡುವ ವಂದಿಮಾಗಧರನ್ನು ನಿಮ್ಮ ಸುತ್ತಲೂ ಸೇರಿಸಿಕೊಳ್ಳುವುದೇ? ಕಣ್ಣುಗಳು ಮಿರಮಿರನೆ ಮಿಂಚುವಷ್ಟು ಹಣವೇ? ದಾನಧರ್ಮವೇ? ಪುರಾಣ ಶ್ರವಣವೇ? ಅನ್ನಮಯ್ಯ, ರಾಮದಾಸರ ಹಾಗೆ ಕೀರ್ತನೆಗಳನ್ನು ಬರೆಯುವುದೇ ಆತ್ಮ ಸಂತೃಪ್ತಿಯೇ?
ಗಮ್ಯ ಸರಿಯಾಗಿ ತಿಳಿಯದಿದ್ದರೆ ಜೀವನ ಅಸ್ತವ್ಯಸ್ತ ಆಗಿಬಿಡುತ್ತದೆ. ರಘುಪತಿ ರಾಘವ ರಾಜಾರಾಂ ಎನ್ನುವ ನನ್ನ ನಾಟಕದಲ್ಲಿ (ಕ್ರಾಂತಿಕಾರರು ಫ್ಯಾಕ್ಟರಿಯನ್ನು ಬಾಂಬುಗಳನ್ನು ಸ್ಫೋಟಿಸಿ ಬುನಾದಿಯ ಸಮೇತ ಕಿತ್ತುಹಾಕಿದಾಗ) ಒಬ್ಬ ಕಾರ್ಮಿಕ ದು:ಖದಿಂದ, ನಡೆಯಿರಿ ಹೋಗೋಣ.... ನಡೆಯಿರಿ ಹೋಗೋಣ ಎಂದು ಬರೆಯುವ ಈ ಕವಿಗಳನ್ನು ಎಲ್ಲಿಗೆ? ಎಂದು ಕೇಳುತ್ತಿದ್ದೇನೆ ಎನ್ನುತ್ತಾನೆ. ಈ ವಾಕ್ಯದಿಂದ ಶ್ರೀಶ್ರೀ (ತೆಲುಗಿನ ಮಹಾನ್ ಲೇಖಕ) ಅವರಿಗೆ ಕೋಪ ಕೂಡಾ ಬಂದಿತ್ತು. ಆವೇಶ ಒಳ್ಳೆಯದೇ. ಆದರೆ ಗಮ್ಯ ಕೂಡಾ ತಿಳಿಯಬೇಕಲ್ಲವೇ?
ಐ.ಸಿ. ವಾರ್ಡನಲ್ಲಿ  ಆಕ್ಸಿಜನ್ ಇಲ್ಲದಿದ್ದರೆ :
ಕೆಲವರಿಗೆ ಗಮ್ಯ ಇರುತ್ತದೆ. ದಾರಿ ತಿಳಿಯದು. ಮತ್ತೆ ಕೆಲವರಿಗೆ ದಾರಿ ತಿಳಿದರೂ ಪ್ರಯಾಣ ಮಾಡಲು ಸರಿಯಾದ ವಾಹನ ಇರುವುದಿಲ್ಲ. ವಾಹನವಿದ್ದರೂ ಅದರಲ್ಲಿ ಇಂಧನವಿಲ್ಲ. ಅಂತಹ ಗಮ್ಯವನ್ನು, ದಾರಿಯನ್ನು, ವಾಹನವನ್ನು, ಇಂಧನವನ್ನು ತೋರಿಸುವುದೇ ವ್ಯಕ್ತಿತ್ವ ವಿಕಾಸವೆಂದರೆ!
ಒಬ್ಬಾತ ಬೋರ್ಡ್ ಬರೆಯುವ ವ್ಯಾಪಾರ ಆರಂಭಿಸುತ್ತಾನೆ. ಒಬ್ಬ ಸೂಪರ್ಮಾರ್ಕೆಟ್ ಮ್ಯಾನೇಜರ್ ಫೋನು ಮಾಡಿ, ನಮ್ಮ ಮೊದಲ ಅಂತಸ್ತಿನ ಟಾಯ್ಲೆಟ್ ಹಾಳಾಗಿದೆಯೆಂದೂ, ಕೆಳಗಿನ ಫ್ಲೋರ್ನಲ್ಲಿರುವ ಟಾಯ್ಲೆಟ್ ಬಳಸಬೇಕೆಂದೂ ಸೂಚಿಸುತ್ತಾ, ಅಲ್ಲಿ ಬೋರ್ಡ್ ಸಿದ್ಧಮಾಡಬೇಕೆಂದು ಕೋರಿದ. ಅದೇ ವಿಧವಾಗಿ ಒಂದು ವಾಷಿಂಗ್ ಮೆಷಿನ್ ಕಂಪೆನಿಯವರೂ, ಮತ್ತೊಂದು ಅಂಗಡಿಯವರೂ ತಮಗೇನು ಬೇಕೆಂದು ಹೇಳಿದರು. ಅವನ ಬರವಣಿಗೆ, ಡಿಜೈನಿಂಗ್ ಅದ್ಭುತವಾಗಿವೆ. ಬೋರ್ಡ್ಗಳನ್ನು ಸುಂದರವಾಗಿ ಸಿದ್ಧಗೊಳಿಸಿ ಕೊಡುತ್ತಾನೆ. ಆದರೆ ಶೀಘ್ರದಲ್ಲಿಯೇ ಬಿಜಿನೆಸ್ ಮುಚ್ಚಬೇಕಾಗಿ ಬಂದಿತು. ಕಾರಣ? ಅವನಿಗೆ ಇಂಗ್ಲೀಷ್ ಸರಿಯಾಗಿ ಬರುತ್ತಿರಲಿಲ್ಲ. ಈ ರೀತಿಯಾಗಿ ಬೋರ್ಡ್ಗಳನ್ನು ಬರೆದಿದ್ದ;
ಅವನ ಗಮ್ಯ ಒಳ್ಳೆಯದೇ. ವಾಹನವೂ ಒಳ್ಳೆಯದೇ. ಇಂಧನ ಮಾತ್ರ ಸರಿಯಾಗಿಲ್ಲ. ಅವರಿಗೆ ಹೇಗೆ ಬೇಕೆಂದು ಅವನು ಗ್ರಾಹಕರನ್ನು ಕೇಳಬೇಕಾಗಿತ್ತು. ಕನಿಷ್ಠಪಕ್ಷ ಕನ್ನಡದಲ್ಲಿ ಹೀಗೆ ಇರುತ್ತದೆ ಎಂದು ಗ್ರಾಹಕರಿಗೆ ಬರೆದು ತೋರಿಸಬೇಕಾಗಿತ್ತು. ತನಗೆ ತಿಳಿಯದೆನ್ನುವ ಸಂಗತಿ ಅವನಿಗೆ ತಿಳಿಯದೇ ಹೋದದ್ದು, ತನ್ನ ಮೇಲೆ ತನಗೆ ಮಿತಿಮೀರಿದ ನಂಬಿಕೆ ಅವನನ್ನು ತಪ್ಪು ದಾರಿಯಲ್ಲಿ ನಡೆಸಿತ್ತು. ಈ ರೀತಿ `ತಪ್ಪು ದಾರಿಯಲ್ಲಿ ಹೋಗುವುದು ಎನ್ನುವುದು ಬಹಳ ಸಂದರ್ಭಗಳಲ್ಲಿ ಜರುಗುತ್ತದೆ. ಬಾಲ್ಯದಿಂದಲೇ ಆರಂಭವಾಗುತ್ತದೆ. ?
(ಮುಂದುವರಿಯುವುದು)

 ಯಂಡಮೂರಿ ವಿರೇಂದ್ರನಾಥ್
ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement