ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಟಾಣಿ ಚಟ್ನಿ

Mainashree
Updated On : 13 Jul 2014, 1:01 am

ಬೇಕಾಗುವ ಸಾಮಗ್ರಿಗಳು
= ಹಸಿರು ಬಟಾಣಿ 1 ಕಪ್ = ತೆಂಗಿನ ತುರಿ 1 ಕಪ್ ಕತ್ತರಿಸಿದ ಈರುಳ್ಳಿ 1(ಮಧ್ಯಮ ಗಾತ್ರದ್ದು) = ಹಸಿಮೆಣಸು 2 (ಹೆಚ್ಚಿದ್ದು) = ಶುಂಠಿ(ಕತ್ತರಿಸಿದ್ದು) 1 ಚಮಚ = ಬೆಳ್ಳುಳ್ಳಿ (ಹೆಚ್ಚಿದ್ದು) 1 ಚಮಚ = ಎಣ್ಣೆ 2 ಚಮಚ, = ಉಪ್ಪು ರುಚಿಗೆ ತಕ್ಕಷ್ಟು, = ನೀರು (ಬೇಕಿದ್ದಲ್ಲಿ) ಸ್ವಲ್ಪ. = ಕರಿಬೇವು-ಸಾಸಿವೆ (ಒಗ್ಗರಣೆಗೆ).
ಮಾಡುವ ವಿಧಾನ
2 ಚಮಚ ಎಣ್ಣೆ ಬಿಸಿ ಮಾಡಿ ಕತ್ತರಿಸಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಎಲ್ಲವನ್ನೂ ಸೇರಿಸಿ ಮಂದ ಉರಿಯಲ್ಲಿ ಹುರಿಯಿರಿ. ಇದು ಬೆಂದ ನಂತರ ಹಸಿ ಬಟಾಣಿಯನ್ನು ಸೇರಿಸಿ. ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬಟಾಣಿ ಬೇಯುವವರೆಗೆ ಇಟ್ಟು ನಂತರ ಆರಲು ಬಿಡಿ. ಪೂರ್ತಿ ಆರಿದ ನಂತರ ತೆಂಗಿನ ತುರಿಯೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಸೇರಿಸಬಹುದು. ಇದಕ್ಕೆ ಕರಿಬೇವಿನ ಒಗ್ಗರಣೆ ಕೊಡಿ. ಈಗ ಬಟಾಣಿ ಚಟ್ನಿ ಸವಿಯಲು ರೆಡಿ. ಇದನ್ನು ದೋಸೆ ಅಥವಾ ಇಡ್ಲಿಯೊಂದಿಗೆ ಸವಿಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments