ಆಲೂ-ಬೆಳ್ಳುಳ್ಳಿ ಸಲಾಡ್
ಬೇಕಾಗುವ ಸಾಮಗ್ರಿಗಳು
= ಬೆಳ್ಳುಳ್ಳಿ (ಲಸ್ಸೂನ್) 1 ಚಮಚ = ಲಿಂಬೆ ರಸ 1 ಚಮಚ = ಮೊಸರು 2 ಚಮಚ = ಮಿಲ್ಕ್ ಪೌಡರ್ 1ಚಮಚ = ಮಸ್ಟರ್ಡ್ ಪೌಡರ್ ಅರ್ಧ ಚಮಚ = ಕರಿಮೆಣಸಿನ ಪುಡಿ ಸ್ವಲ್ಪ = ಪಾಲಾಕ್ 1 ಕಪ್ (ಕತ್ತರಿಸಿದ್ದು) = ಆಲೂಗಡ್ಡೆ 2 ಕಪ್ (ಸಿಪ್ಪೆಯೊಂದಿಗೆ ಬೇಯಿಸಿದ್ದು) = ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಎಲ್ಲ ಪದಾರ್ಥಗಳನ್ನು ಪಾತ್ರೆಯಲ್ಲಿ ಮಿಶ್ರ ಮಾಡಿ ಫ್ರಿಜ್ನಲ್ಲಿಡಿ. ಆಲೂಗಡ್ಡೆಯನ್ನು ಹಿಸುಕಿ ಫ್ರಿಜ್ನಲ್ಲಿಡಿ. ಪಾಲಾಕ್ ಅನ್ನು ಐಸ್ ವಾಟರ್ನಲ್ಲಿ 15 ನಿಮಿಷ ನೆನೆಸಿಟ್ಟು ಹೆಚ್ಚಿಟ್ಟುಕೊಳ್ಳಿ. 15 ನಿಮಿಷಗಳ ನಂತರ, ಆಲೂಗಡ್ಡೆಯನ್ನು ಪಾಲಾಕ್ನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ. ನಂತರ ಮಿಶ್ರ ಮಾಡಿಕೊಂಡ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಆಲೂ-ಬೆಳ್ಳುಳ್ಳಿ ಸಲಾಡ್ ಸವಿಯಲು ಸಿದ್ಧ. ಇದು ದೇಹದ ತೂಕ ಇಳಿಸಲು ಹೆಚ್ಚು ಸಹಕಾರಿ.