ಅಭಿರುಚಿಯ ವೃತ್ತಿ ಇದ್ದರೆ ಬದುಕು ರುಚಿ
ನಿಮ್ಮನ್ನು ನೀವು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ....
ನಿಮ್ಮನ್ನು ನೀವು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ.
- ನನಗೇನು ಬೇಕು?
- ಅದು ಎಲ್ಲಿದೆ?
- ಅದನ್ನು ಹೇಗೆ ಪಡೆದುಕೊಳ್ಳಬೇಕು?
ಅಭಿರುಚಿಗೆ ತಕ್ಕ ವೃತ್ತಿಯನ್ನು ಆರಿಸಿಕೊಂಡರೆ, ಜೀವನ ಸಂತೋಷಮಯವಾಗುತ್ತದೆ. ಪ್ರಾಣಿಗಳ ಬಗ್ಗೆ ಪ್ರೀತಿ ಇರುವವರು ವೆಟರ್ನರಿ, ಪ್ರಕೃತಿ ಎಂದರೆ ಇಷ್ಟವಿರುವವರು ಅಗ್ರಿಕಲ್ಚರ್, ಅಡುಗೆ ಮೇಲೆ ಮೆಚ್ಚುಗೆ ಇರುವವರು ಹೋಟೆಲ್ ಮ್ಯಾನೇಜ್ಮೆಂಟ್ ಓದಿದರೆ, ಮಾಡುತ್ತಿರುವ ಕೆಲಸವನ್ನು ಆನಂದಿಸಲು ಸುಲಭವಾಗುತ್ತದೆ. ದುರದೃಷ್ಟವಶಾತ್ ಬಹಳ ಜನ ವಿದ್ಯಾಥರ್ಿಗಳು ತಿಂಗಳ ಸಂಬಳ, ಆದಾಯ ನೋಡಿ ವೃತ್ತಿಗಳನ್ನು ಆರಿಸಿಕೊಳ್ಳುವರೇ ಹೊರತು ಅದಕ್ಕೆ ಸರಿಹೊಂದುವ ಅಭಿರುಚಿ ತಮಗಿದೆಯೇ ಇಲ್ಲವೇ ಎಂದು ಆಲೋಚಿಸುವುದಿಲ್ಲ.
ಆನಂದ ನೀಡುವ ಉದ್ಯೋಗದಲ್ಲಿ (ವ್ಯಾಪಾರದಲ್ಲಿ) ಪ್ರವೇಶಿಸಿ ಆ ವೃತ್ತಿಯಲ್ಲಿ ಗೆದ್ದರೆ ನಿಮ್ಮ ಕಣ್ಣುಗಳು ಬೆಳಕಿನಿಂದ ತುಂಬುತ್ತವೆ. ನ್ಯಾನೋ ಕಾರು ಓಪನಿಂಗ್ ಸಮಯದಲ್ಲಿ ರತನ್ಟಾಟಾ ಕಣ್ಗಳ ಹೊಳಪು, ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಾಗ ಟೆನ್ನಿಸ್ ಬ್ಯಾಟ್ ಗಾಳಿಯಲ್ಲಿ ಬಿಸಾಡಿದ ಆಂಡ್ರೂ ಅಗಾಸ್ಸಿಯ ಆನಂದ, ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟಾಗ ಆಮರ್್ಸ್ಟ್ರಾಂಗ್ ನಗೆಯಲ್ಲಿನ ವಿಜಯಗರ್ವ ಸಜೀವ ಉದಾಹರಣೆಗಳು. ತಮಗೆ ಆಸಕ್ತಿ ಉಂಟುಮಾಡಿದ ವೃತ್ತಿಯಲ್ಲಿ ಆಹ್ಲಾದಕರವಾಗಿ ಕೆಲಸ ಮಾಡುತ್ತಿರುವವರಿಗೆ, ಗಾಬರಿಯಿಂದ ಗಡಿಯಾರ ನೋಡಿಕೊಳ್ಳುತ್ತಾ ಕಾಲ್ಸೆಂಟರ್ಗೆ ಓಡುವ ಉದ್ಯೋಗಿಗಳಿಗೆ ಇರುವ ವ್ಯತ್ಯಾಸ ಇದೇ. ಮಾಕರ್ೆಟ್ನಲ್ಲಿ ಕೋಟಿಗಳ ವ್ಯಾಪಾರವಿರಬಹುದು, ಅಡುಗೆಮನೆಯಲ್ಲಿ ಅಡುಗೆ ಮಾಡುವುದಿರಬಹುದು, ಇಲ್ಲವೇ ಮಕ್ಕಳಿಗೆ ಪಾಠ ಹೇಳಿಕೊಡುವುದೂ ಇರಬಹುದು. ಅದೂ ಅಲ್ಲದಿದ್ದರೆ ಆರ್.ಟಿ.ಸಿ. ಬಸ್ ನಡೆಸುವುದೂ ಇರಬಹುದು. ಕೆಲಸದಲ್ಲಿ ಆನಂದ ಹೊಂದದಿದ್ದರೆ ಜೀವನ ಭಾರವಾಗಿ ಕಳೆಯುತ್ತದೆ. ಇಲ್ಲಿ ನಿಮಗೊಂದು ಸಂದೇಹ ಬರಬಹುದು. ಇದು ಎಲ್ಲರಿಗೆ ಹೇಗೆ ಸಾಧ್ಯ? ಎಂದು. ಸಾಧ್ಯ! ಇಂತಹ ತನ್ಮಯತೆ ಬರಬೇಕೆಂದರೆ ಕೆಲವು ಲಕ್ಷಣಗಳಿರಬೇಕು.
ಆಸಕ್ತಿ
ಕರೆಂಟು ಹೋಗಿ ನನ್ನ ಗಂಡನಿಗೆ ನೀನೇ ಹೆಂಡತಿ ಸೀರಿಯಲ್ ಬರದಿದ್ದರೆ ಒಬ್ಬ ಗೃಹಿಣಿಗೆ ದು:ಖವಾಗುತ್ತದೆ. ಅದೇ ಕರೆಂಟು ಹೋಗಿ ಕಂಪ್ಯೂಟರುಗಳು ನಿಂತು ಹೋದರೆ ಉದ್ಯೋಗಿಗಳು ಕೆಲವು ಸಲ ಸಂತೋಷಿಸುತ್ತಾರೆ. ಅದೇ ವ್ಯತ್ಯಾಸ. ಮಾಡುತ್ತಿದ್ದ ಕೆಲಸದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಇಲ್ಲವೇ ಏನೂ ಮಾಡದ ಸಮಯದಲ್ಲಿ ಆಸಕ್ತಿ ಇರುವ ವಿಷಯಗಳಲ್ಲಿ ಕೃಷಿ ಮಾಡಬೇಕು. ಅದರಿಂದ ಜೀವನ ರಿಲಾಕ್ಸಿಂಗ್ ಆಗಿರುತ್ತದೆ. ಸಂಜೆ ಆಫೀಸಿನಿಂದ ಬಂದ ಮೇಲೆ ಕೀಬೋಡರ್್ ಕಲಿತ ಒಬ್ಬ ಗುಮಾಸ್ತೆ, ಈಗ ಪಾಟರ್್ಟೈಮರ್ ಆಗಿ ಒಂದು ಲಕ್ಷ ರುಪಾಯಿಗಳನ್ನು ಸಂಪಾದಿಸುತ್ತಾನೆ.
ಸಾಮಥ್ರ್ಯ
ರಾಜಕೀಯ ನಾಯಕನಾಗಬೇಕೆಂಬ ಬಲವಾದ ಆಸೆ ಒಂದೇ ಇದ್ದರೆ ಸಾಲದು. ಸಂದಭರ್ಾನುಸಾರವಾಗಿ ವ್ಯವಹರಿಸಬಲ್ಲ ಜಾಣತನ, ಹತ್ತು ಜನರೊಂದಿಗೆ ಮಾತಾಡುವ ಸಾಮಥ್ರ್ಯ, ಎಲ್ಲರ ಹೆಸರುಗಳನ್ನೂ ನೆನಪಿಟ್ಟುಕೊಳ್ಳಬಲ್ಲ ಶಕ್ತಿ ಮೊದಲಾದ ಲಕ್ಷಣಗಳಿರಬೇಕು.
ಅಂಕಿತಭಾವ
ಪರ್ವತ ಪ್ರಾಂತ್ಯಗಳಲ್ಲಿ ಕೆಲವು ಕೋಟಿ ಜನರಿದ್ದಾರೆ. ತೇನ್ಸಿಂಗ್ ನಾರ್ಗೇ ಒಬ್ಬನೇ ಎವರೆಸ್ಟ್ ಹತ್ತಿದ. ಬಹಳ ಜನ ಗಾಳಿಪಟವನ್ನು ಹಾರಿಸುತ್ತಾರೆ. ರೈಟ್ ಸೋದರರು ಮಾತ್ರವೇ ವಿಮಾನವನ್ನು ಕಂಡುಕೊಂಡರು. ಎಲ್ಲರೂ ದು:ಖವನ್ನು ನೋಡುತ್ತಾರೆ. ಗೌತಮ ಬುದ್ಧ ಮಾತ್ರವೇ ಪ್ರವಾದಿಯಾದ. ಅಂಕಿತಭಾವದೊಂದಿಗೆ ಮಾಡುವ ಕೆಲಸ ಒಳ್ಳೆಯ ಸಂತೃಪ್ತಿಯನ್ನು ನೀಡುತ್ತದೆ. ಪ್ರಪಂಚವೆಲ್ಲಾ ನಿದ್ರಿಸುತ್ತಿರುವ ಸಮಯದಲ್ಲಿ ರಾತ್ರಿಯೆಲ್ಲಾ ಕೆಲಸ ಮಾಡಿ, ಕೆಲಸ ಸಂಪೂರ್ಣವಾದ ಮೇಲೆ ಮೈಮುರಿದಾಗ ಆಗುವ ಸಂತೋಷ, ಅನುಭವಿಸಿದರೇನೇ ತಿಳಿಯುವುದು. ಪ್ರಸ್ತುತ ನಮ್ಮ ಸಿನಿಮಾ ಹೀರೋಗಳನ್ನೇ ತೆಗೆದುಕೊಳ್ಳಿ. ಹಿಂದಿನವರ ಹಾಗೆ ಇವರಿಗೆ ಆಳವಾದ ಅಭಿನಯ ಕೈಲಾಗದು. ಹಾವಭಾವಗಳನ್ನು ಪ್ರಕಟಿಸಲಾರರು. ಆದರೂ ಕೂಡಾ ಇವರು ಜನರ ಮನ್ನಣೆಯನ್ನು ಹೇಗೆ ಹೊಂದುತ್ತಾರೆ? ಡ್ಯಾನ್ಸ್ಗಳು, ಫೈಟ್ಗಳನ್ನು ಅದ್ಭುತವಾಗಿ ಅಭ್ಯಾಸ ಮಾಡುವುದರಿಂದ ..! ತಮ್ಮ ನಟನಾವೈಫಲ್ಯವನ್ನು ನೃತ್ಯ, ಹೊಡೆದಾಟಗಳಿಂದ ಕವರ್ ಮಾಡುತ್ತಿದ್ದಾರೆಂದಾಯಿತು. ಅದು ಅಂಕಿತಭಾವ. ಈ ಉದಾಹರಣೆ ಬಹಳ ವಿಷಯಗಳಲ್ಲಿ ಅನ್ವಯವಾಗುತ್ತದೆ. ಎಲ್ಲರೂ ದೊಡ್ಡ ಕಾದಂಬರಿಕಾರರಂತೆ ವಿಷಯಪರಿಜ್ಞಾನದೊಂದಿಗೋ, ಸರಳವಾಗಿಯೋ ಬರೆಯಲಾರರು. ಅದರಿಂದಾಗಿಯೇ ಓದುಗರನ್ನು ರಂಜಿಸಲು ಕೆಲವರು ವಚನಕವಿತೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನಂತಹವರು ಸಸ್ಪೆನ್ಸ್, ನಾಟಕೀಯತೆ ಎನ್ನುವ ಪ್ರಕ್ರಿಯೆಯನ್ನೂ ಆರಿಸಿ ಕೊಳ್ಳುತ್ತೇವೆ.
ಸಹನೆ
ಬ್ರೇಕ್-ಥ್ರೂ ಸಿಗುವವರೆಗೂ ಮಾನಸಿಕವಾಗಿ, ಆಥರ್ಿಕವಾಗಿ ಉಂಟಾಗುವ ಒತ್ತಡವನ್ನು ತಡೆದುಕೊಳ್ಳುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಆ ಗ್ರಾಮೀಣ ಪ್ರಾಂತ್ಯದ ಎಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್ಗೆ ಅದೇ ವಿಷಯವನ್ನೇ ಹೇಳಿದೆ ನಿಮ್ಮ ಗಮ್ಯ ಬಿಲ್ಗೇಟ್ಸ್ ಹತ್ತಿರ ಉದ್ಯೋಗ, ಆದರೆ ಈಗ ಮಾಡುತ್ತಿರುವುದು ಒಂದು ಚಿಕ್ಕ ಕಾಲೇಜಿನಲ್ಲಿ ಲೆಕ್ಚರರ್ ಕೆಲಸ. ಅದರ ಕಾರಣದಿಂದ ನಿಮ್ಮ ಬೇಸರ, ಕಿರಿಕಿರಿಗಳನ್ನು ಈ ವಿದ್ಯಾಥರ್ಿಗಳ ಮೇಲೆ ತೋರಿಸಬೇಡಿ. ವರ್ತ ಮಾನವನ್ನು ಪ್ರೀತಿಸಿದರೆ ಭವಿಷ್ಯ ಚೆನ್ನಾಗಿರುತ್ತದೆ. ಮಾಡುತ್ತಿರುವ ಕೆಲಸವನ್ನು ಆನಂದಿಸುತ್ತಾ, ಅದಕ್ಕೆ ನೂರು ಪಸರ್ೆಂಟ್ ನ್ಯಾಯ ನೀಡಿ. ಮತ್ತೊಂದು ಕಡೆ ಸಾಫ್ಟ್ ಸ್ಕಿಲ್ಸ್ ಬೆಳೆಸಿಕೊಳ್ಳಿ. ಜೀವನದಲ್ಲಿ ಮೇಲೆ ಬರಲು ಪ್ರಯತ್ನಿಸಿ ಎಂದು.
ನನ್ನ ಮೊಟ್ಟಮೊದಲ ಕಾದಂಬರಿ ಋಷಿ ಸ್ವಾತಿ ತೆಲುಗು ವಾರಪತ್ರಿಕೆಯಲ್ಲಿ ಪ್ರಕಟವಾದ ನಂತರ ಎರಡನೆಯ ಕಾದಂಬರಿ ಪರ್ಣಶಾಲ ಆಂಧ್ರಪ್ರಭ ವಾರಪತ್ರಿಕೆಯಿಂದ ಮರಳಿ ಬಂದುಬಿಟ್ಟಿತು. ಅದನ್ನು ತೆಗೆದುಕೊಂಡು ಮತ್ತೊಂದು ಪತ್ರಿಕೆಯ ಆಫೀಸಿಗೆ ಹೋದೆ. ಎಡಿಟರ್ ಅವರು ಒಬ್ಬ ಯುವ ಲೇಖಕಿಯೊಂದಿಗೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ರೂಮಿನ ಹೊರಗೆ ಬೆಂಚಿನ ಮೇಲೆ ಕುಳಿತಿದ್ದೆ. ಆಗಲೇ ನಾನು ಆಥರ್ಿಕ ಸಂಸ್ಥೆಯಲ್ಲಿನ ಅಧಿಕಾರಿಯಾಗಿದ್ದೆ ಆದರೂ ಅವಶ್ಯಕತೆ ನನ್ನದು. ಕಾಲು ಗಂಟೆ... ಅರ್ಧಗಂಟೆ..! ಹೊರಟುಹೋಗಲೇ ಎಂದುಕೊಳ್ಳುತ್ತಿದ್ದಾಗ ಒಂದು ಗಂಟೆಯ ನಂತರ ಕರೆ ಬಂದಿತ್ತು. ಇರುವ ವಿಷಯ ಹೇಳಬೇಕು. ಆಕೆ ಬಹಳ ಸುಂದರವಾಗಿದ್ದಳು. ಆತ ಕಾದಂಬರಿಯನ್ನು ಅಲ್ಲಲ್ಲಿ ಓದಿ, ಚೆನ್ನಾಗಿ ಬರೆದಿದ್ದೀರಿ. ತಕ್ಷಣವೇ ಪ್ರಕಟಣೆ ಶುರು ಮಾಡ್ತೀನಿ ಎಂದರು. ಬಹಳ ಕಾಲ ಪ್ರಕಟವಾಗಲಿಲ್ಲ. ಇಷ್ಟರ ನಡುವೆ ತುಳಸೀದಳ, ಬೆಳದಿಂಗಳ ಬಾಲೆ ಜನಪ್ರಿಯವಾದ ಮೇಲೆ, ಆತನೇ ತನ್ನ ಪತ್ರಿಕೆಯ ಧಾರಾವಾಹಿಗೆ ಕಾದಂಬರಿ ಬೇಕೆಂದು ನನ್ನ ಮನೆಗೆ ಬಂದರು. ಗೆಲುವಿನ ಬಾಗಿಲು ತೆರೆದುಕೊಳ್ಳಬೇಕೆಂದರೆ ಸಹನೆ ಅಗತ್ಯ ಎಂದು ಹೇಳಲು ಮಾತ್ರವೇ ಈ ಉದಾಹರಣೆ.
ಬದುಕಿನ ಆರಂಭದ ದಿನಗಳಲ್ಲಿ ನಮಗಿಷ್ಟವಾದ ವೃತ್ತಿಯನ್ನು ಮಾಡುವುದು ಆಗದೇ ಇರಬಹುದು. ನಮ್ಮ ಅಭಿರುಚಿಗೆ ವಿರುದ್ಧವಾಗಿ ಹಣಕ್ಕೋಸ್ಕರ ಇಷ್ಟವಿಲ್ಲದ ವೃತ್ತಿಯನ್ನು ಮಾಡಬೇಕಾಗಿ ಬರಬಹುದು. ಆಗ :
- ಆಥರ್ಿಕವಾಗಿ ಗಟ್ಟಿಯಾಗಿ ನಿಲ್ಲಲು ಒಂದು ಕೆಲಸಕ್ಕೆ ಸೇರಿಕೊಳ್ಳಿ.
- ನಂತರ ನಿಮಗಿಷ್ಟವಾದ ಕೆಲಸಕ್ಕೆ ಸೇರಿರಿ. ಆದರೆ ನಿಮಗಿಷ್ಟವಾದ ವೃತ್ತಿ ನಿಮಗೆ ಜೀವನಾಧಾರ ಕೊಡುವಷ್ಟು ಆಥರ್ಿಕ ಬಲವನ್ನು ನೀಡಬೇಕು.
- ನಿಮಗಿಷ್ಟವಾದ ವೃತ್ತಿ, ಆಥರ್ಿಕ ಬಲವನ್ನು ನೀಡುವಷ್ಟು ಶಕ್ತಿವಂತವಾದದ್ದು ಅಲ್ಲದಿದ್ದರೆ, ಬದುಕುವುದಕ್ಕಾಗಿ ಮೊದಲ ವೃತ್ತಿಯಲ್ಲಿಯೇ ಮುಂದುವರಿದು, ಮತ್ತೊಂದು ಕಡೆ ನಿಮ್ಮ ಅಭಿರುಚಿಯನ್ನು ಮುಂದುವರಿಸಿ. ಆಗ ಜೀವನದಲ್ಲಿನ ನಿರಾಸಕ್ತಿ ಕಡಿಮೆಯಾಗುತ್ತದೆ.
- ಒಂದು ವೇಳೆ ನಿಮ್ಮ ಅಭಿರುಚಿ, ಆಥರ್ಿಕವಾಗಿ ತಡೆದುಕೊಳ್ಳಬಲ್ಲದಾದರೆ ಸ್ವಲ್ಪ ಕಾಲಕ್ಕೆ, ಅದೇ ನಿಮ್ಮ ಉದ್ಯೋಗವಾಗುತ್ತದೆ.
ತಮಗಿಷ್ಟವಾದ ಕ್ಷೇತ್ರದಲ್ಲಿ ಮೇಲೆ ಬರಬೇಕೆಂದುಕೊಂಡಿರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಈ ಉದಾಹರಣೆ ಮೇಲಿನ ನಾಲ್ಕು ವಿಷಯಗಳನ್ನು ಮತ್ತಷ್ಟು ಸ್ಪಷ್ಟವಾಗಿ ವಿಶದೀಕರಿಸುತ್ತದೆ.
- ಒಬ್ಬ ಹುಡುಗನಿಗೆ ಹಾಡುಗಳನ್ನು ಹಾಡುವ ಅಭಿರುಚಿ ಇದೆ. ಆ ವೃತ್ತಿಯಲ್ಲಿ ಸೆಟಲ್ ಆಗೋಣವೆಂದುಕೊಂಡ.
- ಆದರೆ ಒಂದು ಚಿಕ್ಕ ಹಳ್ಳಿಯಲ್ಲಿ ಟೈಪಿಸ್ಟ್ ಉದ್ಯೋಗ ಸಿಕ್ಕಿತು
ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ನಗರಕ್ಕೆ ಬಂದು ಪ್ರಯತ್ನಗಳನ್ನು ಪ್ರಾರಂಭಿಸಿದರೆ ಎರಡರಲ್ಲಿಯೂ ಕೆಟ್ಟ ಹೆಸರು ತೆಗೆದುಕೊಳ್ಳುತ್ತಾನೆ.
- ಕೆಲವು ಕಾಲ ಉದ್ಯೋಗ ಮಾಡಿ, ಸ್ವಲ್ಪ ಹಣ ಸೇರಿಸಿ ಮಧ್ಯೆ ಮಧ್ಯೆ ನಗರಕ್ಕೆ ಬರಬೇಕು. ಅದೃಷ್ಟವನ್ನು ಪರಿಶೀಲಿಸಿಕೊಳ್ಳಬೇಕು. ಸ್ಟೂಡಿಯೋಗಳಿಗೆ ಓಡಾಡಿ ನಿದರ್ೇಶಕರನ್ನು, ನಿಮರ್ಾಪಕರನ್ನು ಭೇಟಿಯಾಗಿ ತನ್ನ ಪ್ರತಿಭೆಯನ್ನು ಪರೀಕ್ಷಿಸಿಕೊಳ್ಳಬಹುದು. ಹಾಡುಗಳನ್ನು ಹಾಡುವ ಟ್ರೂಪ್ಗಳಲ್ಲಿ ಸೇರಿ ಪಾಟರ್್ಟೈಮ್ನಲ್ಲಿ ಹಾಡುಗಳನ್ನು ಹಾಡಬಹುದು. ಡಬ್ಬಿಂಗ್ ಅವಕಾಶಗಳನ್ನು ಕೂಡ ಪರೀಕ್ಷಿಸಿಕೊಳ್ಳಬಹುದು. ನಗರದಲ್ಲಿ ಸೆಟಲ್ ಆಗುವುದು ಮುಖ್ಯ.
- ಶೀಘ್ರದಲ್ಲಿಯೇ ಆತನಿಗೆ ತನ್ನಲ್ಲಿರುವ ವಿದ್ಯೆ, ಒಂದು ಪ್ರೊಫೆಷನಲ್ ಆಗಿ ಬದಲಾಯಿಸಲು ಸರಿಹೋಗುತ್ತದೆಯಾ, ಇಲ್ಲ ಅದು ತನ್ನ ಭ್ರಾಂತಿಯಾ, ತನ್ನ ಬಗ್ಗೆ ತಾನು ಹೆಚ್ಚಾಗಿ ಅಂದಾಜು ಮಾಡಿಕೊಂಡಿರುವನಾ ಎನ್ನುವ ವಿಷಯ ತಿಳಿದುಹೋಗುತ್ತದೆ.
- ಪ್ರೊಫೆಷನಲ್ ಆಗಲು ಬೇಕಾದ ಪ್ರತಿಭೆ ತನ್ನ ಬಳಿ ಇಲ್ಲದ ಪಕ್ಷದಲ್ಲಿ ಅವನು ಮತ್ತಷ್ಟು ಸಾಧನೆ ಮಾಡಬೇಕಾಗಿ ಬರುತ್ತದೆ. ಒಂದು ಸಲ ಬ್ರೇಕ್-ಥ್ರೂ ಸಿಕ್ಕಿದ ಮೇಲೆ ಅವನ ಅದೃಷ್ಟಕ್ಕೆ ಆಕಾಶವೇ ಮಿತಿಯಾಗುತ್ತದೆ. ಬ್ರೇಕ್-ಥ್ರೂ ಸಿಗುವವರೆಗೂ ಗೆಲುವಿನ ಕೊಠಡಿಯ ಹೊರಗೆ ಕಾಯುವುದು ತಪ್ಪುವುದಿಲ್ಲ.
(ಮುಂದುವರಿಯುವುದು )
ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ : ಯತಿರಾಜ್ ವೀರಾಂಬುಧಿ