ಎಳ್ಳು-ಕೊಬ್ಬರಿ ಲಾಡು
ಬೇಕಾಗುವ ಸಾಮಗ್ರಿಗಳು: = ಕಡಲೆಹಿಟ್ಟು 3 ಕಪ್ = ಎಳ್ಳು 4-5 ಚಮಚ = ತೆಂಗಿನತುರಿ 1 ಕಪ್ = ಬೆಲ್ಲ ಒಂದೂವರೆ ಕಪ್ = 8-9 ಟೇಬಲ್ಸ್ಪೂನ್ ತುಪ್ಪ = ಸ್ವಲ್ಪ ಗೋಡಂಬಿ.
ಮಾಡುವ ವಿಧಾನ: ಕಡಲೆಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಕಲೆಸಿ (ಮಿಶ್ರಣ ತರಿತರಿಯಾಗಿರಲಿ). ಎರಡು ಸ್ಪೂನ್ ತುಪ್ಪವನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಕಡಲೆಹಿಟ್ಟು ಹಾಕಿ ಫ್ರೈ ಮಾಡಿ ತೆಗೆದಿಡಿ. ಅದೇ ಪ್ಯಾನ್ಗೆ 1 ಚಮಚ ತುಪ್ಪ ಹಾಕಿ ಎಳ್ಳು, ತೆಂಗಿನ ತುರಿ ಹಾಕಿ ಕಡಿಮೆ ಉರಿಯಲ್ಲಿ 4-5 ನಿಮಿಷ ಫ್ರೈ ಮಾಡಿಡಿ. ಉಳಿದ ತುಪ್ಪವನ್ನು ಪ್ಯಾನ್ಗೆ ಹಾಕಿ ಅದಕ್ಕೆ ಬೆಲ್ಲ ಸೇರಿಸಿ, ಸ್ವಲ್ಪ ನೀರು ಹಾಕಿ 2 ನಿಮಿಷ (ಬೆಲ್ಲ ಕರಗುವಷ್ಟು) ಬಿಸಿ ಮಾಡಿ. ಈಗ ಫ್ರೈ ಮಾಡಿಟ್ಟ ಹಿಟ್ಟು, ಎಳ್ಳು, ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಲಾಡು ಕಟ್ಟಿ, ಗೋಡಂಬಿಯಿಂದ ಅಲಂಕರಿಸಿ.