ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪತ್ರ ಬರೆವ ಅಭ್ಯಾಸ

Lingaraj Badiger
Updated On : 30 Jul 2014, 3:58 am

ಖಂಡಿತ ಹೌದು. ವಿನೂತನ ಸಮಾರಂಭಗಳು ನಡೆದಾಗ, ಪತ್ರಿಕೆಗಳಲ್ಲಿ ಬಂದ ವಿಚಾರಗಳಿಗೆ ಸ್ಪಂದಿಸುವಾಗ ಕೈ ಬರಹದಲ್ಲಿ ಪತ್ರ ಬರೆದೇ ನಮ್ಮ ಸ್ಪಂದನೆಗಳನ್ನು ತಿಳಿಸುತ್ತೇವೆ. ಅದೇ ಸರಿಯಾದ ಸಂವಹನೆ. ಇ-ಮೈಲ್, ಫೋನ್, ಎಸ್ಸೆಮ್ಮೆಸ್‌ಗಳು ದಿಟವಾದ ಮನುಷ್ಯ ಸಂಪರ್ಕದ ಹಸಿವನ್ನು ತೀರಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಮೊದಲಿನಿಂದಲೂ ನಮ್ಮ ಪೈಕಿಯವರಲ್ಲಿ ಸಾವು ಸಂಭವಿಸಿದಾಗ ಅವರ ಬಗ್ಗೆ ವಿಷಾದನೀಯ ಪತ್ರದಲ್ಲಿ ಅವರ ಗುಣ-ಸಾಧನೆ ವ್ಯಕ್ತಪಡಿಸಿ ಸಂಬಂಧ ಪಟ್ಟವರಿಗೆ ಬರೆಯುತ್ತೇನೆ. ಅದನ್ನು ಬಹಳ ವಿನಮ್ರತೆಯಿಂದ ಸ್ವೀಕರಿಸುತ್ತಾರೆ.
= ಬೆಳವಾಡಿ ಜಗದೀಶ್, ಬೆಂಗಳೂರು

ಕಾಗದ ಕಣ್ಮನ ತಣಿಸುತ್ತದೆ
ಕೈ ಬರಹದಲ್ಲಿ ಕಾಗದ ಬರೆಯುವುದು ಒಳ್ಳೆಯ ಹವ್ಯಾಸ, ಆದರೆ ಈಗ ಕಾಗದ ಬರೆಯುವುದು ವಿರಳವಾಗಿದೆ. ಯಾರಿಂದಲಾದರೂ ಪತ್ರ ಬಂದರೆ ಮತ್ತೆ ಮತ್ತೆ ನೋಡುತ್ತಿರಬಹುದು. ನಾವು ದೂರದ ಊರಿನಲ್ಲಿರುವಾಗ ಪತ್ರ ಬಂದಾಗ ಅಥವಾ ನಾವು ಅವರಿಗೆ ಪತ್ರ ಬರೆದಾಗ ಅದನ್ನು ಮತ್ತೆ ಮತ್ತೆ ಓದುತ್ತಿರುತ್ತೇವೆ. ಇದೆಲ್ಲ ಮೊಬೈಲ್‌ನಲ್ಲಾದರೆ ಆಗುವುದಿಲ್ಲ. ಅದು ಡಿಲೀಟ್ ಆಗಿಬಿಡುತ್ತದೆ. ಮೊಬೈಲೀಕರಣಗಳಿಂದ ಮನುಷ್ಯನಿಗೆ ಹಾನಿಯಾಗುತ್ತದೆ. ಆದರೆ ಪತ್ರಗಳಿಂದ ಪರಿಸರಕ್ಕೆ ಹಾಗೂ ಮಾನವನಿಗೆ ಯಾವುದೇ ಹಾನಿಯಾಗುವುದಿಲ್ಲ.
=  ವಸುಧಾ ನಾಯ್ಕ್, ಹರಿಹರ

ಜೀವನ ರೂಪಿಸುವ ಕೈಬರಹ
'ಬರವಣಿಗೆಯಿಲ್ಲದ ಬದುಕು ಮೆರವಣಿಗೆಯಿಲ್ಲದ ಜಾತ್ರೆಯಂತೆ' ಎನ್ನುವಂಥದ್ದು ಈ ಬರವಣಿಗೆ. ಇತ್ತೀಚಿನ ದಿನಗಳಲ್ಲಿ ಕೈಬರಹ ತುಂಬಾ ಕಡಿಮೆಯಾಗಿದೆ. ಯಾಕೆಂದರೆ ಇದು ಕಂಪ್ಯೂಟರ್ ಯುಗ. ಸಣ್ಣ ಮಕ್ಕಳ ಕೈಯಲ್ಲೂ ಈಗ ಮೊಬೈಲ್. ಇದರಿಂದಾಗಿ ಜನರು ತಮ್ಮ ಕೆಲಸವನ್ನು ಬೇಗನೆ ಮುಗಿಸಿಕೊಳ್ಳುವ ಹಂಬಲದಿಂದ ಟೈಪಿಂಗ್ ಮೂಲಕ ಮುಗಿಸಿಬಿಡುತ್ತಾರೆ. ನಾನಂತೂ ದಿನವಲ್ಲದಿದ್ದರೂ ಮೂರು ದಿನಕ್ಕೆ ಒಮ್ಮೆಯಾದರೂ ನನ್ನ ಕೈ ಬರಹದಿಂದ ಸಂಪಾದಕರಿಗೆ ಪತ್ರ ಬರೆಯುತ್ತೇನೆ ಅಥವಾ ಲೇಖನಗಳನ್ನು ಬರೆದು ಕಳಿಸುತ್ತೇನೆ ಎನ್ನುವ ತೃಪ್ತಿ ನನಗಂತೂ ಇದೆ. ಟಿ
= ಅಂಜಲಿ. ಕೆ. ಎಂ, ಬೈಂದೂರು

ಫೋನ್ ಮತ್ತು ಈಮೇಲ್‌ಗಳ ಭರಾಟೆಯ ನಡುವೆ ಕೈಬರಹದ ಪತ್ರ ಸಂಸ್ಕೃತಿ ಕಳೆದು ಹೋಗುತ್ತಿದೆಯೆಂಬ ವಿಷಾದವಿದೆ. ಈ ಸಲದ ವಿಷಯ 'ನೀವು ಈಗಲೂ ಕೈಬರಹದಲ್ಲಿ ಪತ್ರ ಬರೆಯುತ್ತಿದ್ದೀರಾ?' ಬರವಣಿಗೆ 100 ಪದಗಳ ಮಿತಿ. ಜತೆಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ. ಕೈ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು-1, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement