ಮಕ್ಕಳಿಗೆ ಜಾಸ್ತಿ ನೀರು ಕುಡಿಸಿ
ನೀರು ಮೆದುಳಿಗೆ ವಿದ್ಯುಚ್ಶಕ್ತಿ ಇದ್ದಂತೆ. ಅಂದರೆ ಅಷ್ಟು ಶಕ್ತಿಯನ್ನು ಮೆದುಳಿಗೆ ಕೊಡುತ್ತದೆ ಎಂದರ್ಥ. ಡಾ. ಕೊರಿನ್ ಅಲೆನ್ ಎನ್ನುವ ಸಂಶೋಧಕರ ಪ್ರಕಾರ, ಶರಿರದಲ್ಲಿನ ಬೇರೆ ಕೋಶಗಳಿಗಿಂತ ಹೆಚ್ಚಿನ ಶಕ್ತಿ ಮೆದುಳಿನ ಕೋಶಗಳಿಗೆ ಬೇಕು. ಈ ಶಕ್ತಿಯನ್ನು ಒದಗಿಸುವುದು ನೀರು ಮಾತ್ರ. ಮೆದುಳಿನ ಹಲವು ಬಗೆಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಅದಕ್ಕೆ ಅಗತ್ಯವಿರುವುದು ನೀರು. ನರವ್ಯೂಹಗಳಿಗೆ ಸಂಕೇತ ರವಾನಿಸಿ, ಅದರ ಕಾರ್ಯನಿರ್ವಹಣೆಗಳನ್ನು ನಿಯಂತ್ರಿಸಲು ನೀರು ಬೇಕು. ಮೆದುಳಿನಲ್ಲಿ ಅಗತ್ಯ ಪ್ರಮಾಣದ ನೀರು ಇದ್ದಾಗಷ್ಟೆ ನಾವು ತ್ವರಿತವಾಗಿ ಪ್ರತಿಕ್ರಿಯಿಸಲು, ವೇಗವಾಗಿ ಅಲೋಚಿಸಲು, ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಶಕ್ತಿ ಗಳಿಸಿಕೊಳ್ಳಲು ಸಾಧ್ಯವಾಗುವುದು. ಮೆದುಳಿನಲ್ಲಿ ತುಂಬಿಕೊಂಡಿದ್ದಾಗಲೇ ನಮ್ಮಲ್ಲಿನ ಕತೃತ್ವ ಶಕ್ತಿ, ಕ್ರೀಯಾಶೀಲತೆಗಳು ಹೊರಹೊಮ್ಮುವುದು. ಬಾಲ್ಯ ಮತ್ತು ಯೌವನದಲ್ಲಿ ಅಧಿಕ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ಮೆದುಳಿನ ಸಾಮರ್ಥ್ಯ ಹೆಚ್ಚುವುದು ಮಾತ್ರವಲ್ಲ, ಮೆದುಳು ಸಂಬಂಧಿತವಾದ ಸಮಸ್ಯೆಗಳು ಎದುರಾಗುವುದನ್ನು ತಡೆಯುತ್ತದೆ. ವಿಷೇಷವಾಗಿ ಶಿಕ್ಷಕ, ಶಿಕ್ಷಕಿಯರು ಈ ಕುರಿತು ನಿಗಾ ವಹಿಸುವುದು ಅಗತ್ಯ. ಏಕೆಂದರೆ ಎಷ್ಟೋ ಶಾಲೆಗಳಲ್ಲಿ ಮಕ್ಕಳು ಆಗಾಗ ನೀರು ಕುಡಿಯುವುದನ್ನು ಶಿಕ್ಷಕ, ಶಿಕ್ಷಕಿಯರು ವಿರೋಧಿಸುತ್ತಾರೆ ಎಂದು ಕೇಳಿದ್ದೇನೆ.
ಕುತೂಹಲದ ಸಂಗತಿ ಏನು ಗೊತ್ತಾ? ಮೆದುಳಿನ ಶೇ.90 ಭಾಗ ನೀರಿನಿಂದ ಕೂಡಿರುತ್ತದೆ. ಆದರೆ ಮೆದುಳಿನಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸ್ಟೋರೇಜ್ ವ್ಯವಸ್ಥೆ ಇಲ್ಲ. ನಾವು ಆಗಾಗ ನೀರು ಕುಡಿಯುತಿದ್ದರೆ ಅದೇ ಶಕ್ತಿಗೆ ವ್ಯಯವಾಗುತ್ತದೆ. ನಾವು ಜಾಸ್ತಿ ಆಲೋಚಿಸುತ್ತ, ಮೆದುಳಿಗೆ ಅಧಿಕ ಶ್ರಮ ನೀಡುತ್ತ, ಕಡಿಮೆ ನೀರು ಕುಡಿಯುತಿದ್ದರೆ ಆಗ ಸ್ವಭಾವಿಕವಾಗಿಯೇ ಮೆದುಳಿನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ. ಹೀಗೆ ನೀರು ವಿಪರೀತ ಕಡಿಮೆ ಆಗುವುದನ್ನೇ ನಾವು ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಎಂದು ಕರೆಯುವುದು. ನಿಮ್ಮ ವಾಹನದಲ್ಲಿ ಇಂಧನ ಕಡಿಮೆಯಾದ ತಕ್ಷಣ ಏನಾಗುತ್ತದೆ? ಗಾಡಿ ಮುಂದೆ ಓಡದೆ ನಿಂತು ಬಿಡುವುದಲ್ಲವೆ? ಮೆದುಳಿನ ವಿಚಾರದಲ್ಲಿಯೂ ಹಾಗೇಯೇ ಆಗುತ್ತದೆ. ಡಿಹೈಡ್ರೇಶನ್ ಆಗುತ್ತದೆ. ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಹಾಗಾದಲ್ಲಿ ಯೋಚಿಸುವ ವೇಗವನ್ನು ಕಡಿಮೆ ಮಾಡುತ್ತ, ಕೊನೆಗೆ ತನ್ನ ಕಾರ್ಯವನ್ನೇ ನಿಲ್ಲಿಸಿಬಿಡುತ್ತದೆ. ಯೋಚನಾ ವಿಧಾನ ಪದೇಪದೆ ಬದಲಾಗುವುದು, ದ್ವಂದ್ವ, ಸಣ್ಣಪುಟ್ಟ ವಿಚಾರಗಳಲ್ಲಿ ಗೊಂದಲ, ಒಂದು ಹಂತದಲ್ಲಿ ಇನ್ನು ನನ್ನಿಂದ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಅನಿಸುವುದು ಇವೆಲ್ಲವೂ ನಿರ್ಜಲೀಕರಣದ ಮುನ್ಸೂಚನೆಗಳೇ ಆಗಿರಬಹುದು. ಇಂಥ ಸೂಚನೆಗಳು ಸಿಕ್ಕ ತಕ್ಷಣ ನೀವು ಮಾಡಬೇಕಾದದ್ದು ಎಂದರೆ ನೀರು ಕುಡಿಯುವುದು. ಅಧ್ಯಯನಗಳ ಪ್ರಕಾರ ಶೇ.1ರಷ್ಟು ನೀರಿನ ಕೊರತೆ ಕಾಣಿಸಿಕೊಂಡರೆ ಮೆದುಳಿನ ಸಾಮರ್ಥ್ಯ ಶೇ.5ರಷ್ಟು ಕಡಿಮೆ ಆಗುತ್ತದೆ.ಟಿ
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com