ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ಮಾರ್ಟ್ ಸ್ಟಾರ್ಸ್

Mainashree
Updated On : 2 Jun 2014, 1:47 am

ಬೀದಿ ಗುಡಿಸುವವನೂ ತನ್ನ ಕೆಲಸ ಮುಗಿದ ಕೂಡಲೇ ಕಿಸೆಯಿಂದ ಟಚ್‌ಸ್ಕ್ರೀನ್ ಮೊಬೈಲ್ ತೆಗೆದು ಹೆಂಡತಿ ನಂಬರ್ ಟಕಟಕಾಯಿಸುತ್ತಾನೆ. ಸದಾ ಶ್ರೀಮಂತಿಕೆ ಕನಸು ಕಾಣುವ ಮಧ್ಯಮವರ್ಗದ ಕೈಯಲ್ಲಿ ಥರಾವರಿ ಬಜೆಟ್ ಸ್ಮಾರ್ಟ್‌ಫೋನ್‌ಗಳು ರಾರಾಜಿಸುತ್ತವೆ. ಈಗಿನ ಪುಟ್ಟ ಮಕ್ಕಳ ಕೈಗೆ ಆಟದ ಗೊಂಬೆ ಕೊಡುವ ಬದಲು ಮೊಬೈಲ್ ಕೊಟ್ಟರೆ ಸುಮ್ಮನಾಗುತ್ತಾರೆ. ಅವುಗಳಿಗೂ ದೊಡ್ಡ ತೆರೆಯ ಬ್ರಾಂಡೆಡ್ ಮೊಬೈಲ್‌ಗಳೇ ಆಗಬೇಕು! ಇದು ಸ್ಮಾರ್ಟ್‌ಫೋನ್ ಮೇನಿಯಾ ಅಲ್ಲ, ದುನಿಯಾ.
ಇನ್ನು ಹೈಎಂಡ್ ಮಂದಿಯ ಬಗ್ಗೆ ಹೇಳುವುದೇನಿದೆ? ತೆರೆಯ ಮೇಲೆ ನಾವು ನೋಡುವ ಹೀರೋ, ಹೀರೋಯಿನ್‌ಗಳು ನೋಡೋದಕ್ಕೂ ಸ್ಮಾರ್ಟ್, ಅವರು ಬಳಸೋದೂ  ಸ್ಮಾರ್ಟ್. ಇಂಥ ಸ್ಮಾರ್ಟ್ ಮಂದಿ ಬಳಸುವ ಸ್ಮಾರ್ಟ್ ಫೋನ್‌ಗಳು ಯಾವುವು ಅಂತ ತಿಳಿಯುವ ಕುತೂಹಲ ನಿಮಗಿದ್ದಷ್ಟೇ ನಮಗೂ ಇದೆ. ಬನ್ನಿ, ಅವರ ಬ್ರಾಂಡ್, ಕಲರ್, ಲೈಕ್‌ಗಳ ಕಡೆ ಒಂದು ದೃಷ್ಟಿ ಹಾಯಿಸೋಣ.

ನಾವು ಕೇಳಿದ ಪ್ರಶ್ನೆಗಳಿಗೆ
1. ನೀವು ಬಳಸುವ ಮೊಬೈಲ್ ಯಾವುದು?
2. ಯಾಕೆ ಆ ಮೊಬೈಲ್ ಇಷ್ಟವಾಯಿತು?
3. ಅದರಲ್ಲಿ ತುಂಬಾ ಇಷ್ಟದ ಆ್ಯಪ್ಸ್ ಯಾವುದು?
4. ಮುಂದೆ ಯಾವ ಮೊಬೈಲ್ ಬಳಸುತ್ತೀರಾ?

ಶ್ರೀಮಯ್ಯ (ಕಿರುತೆರೆ)
= ನಾನು ಬಳಸುತ್ತಿರುವ ಮೊಬೈಲ್ ಸ್ಯಾಮ್‌ಸಂಗ್ ಗ್ರ್ಯಾಂಡ್. ಮಾಡೆಲ್ ಐ9082. ಜೊತೆ ಒಂದು ಟ್ಯಾಬ್ ಇದೆ.
= ದೊಡ್ಡ ಸ್ಕ್ರೀನ್, ಆಯ್ಕೆಗಳ ಬಗ್ಗೆ ಗೊಂದಲ ಇಲ್ಲ. ರಿಪೇರಿ ಆಗಲ್ಲ.
= ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ನೆಟ್‌ವರ್ಕ್ ತುಂಬಾ ಸುಲಭವಾಗಿ ಬಳಸಬಹುದು.
= ನನ್ನ ಮುಂದಿನ ಆಯ್ಕೆ ನೋಕಿಯಾದಲ್ಲಿ ಯಾವುದಾದರೂ ಹೊಸ ಮಾಡೆಲ್ ಇದ್ದರೆ ನೋಡುತ್ತೇನೆ.

ಹರ್ಷಿಕಾ ಪೂಣಚ್ಚ (ಬಿತ್ರಿ)
    ನನಗೆ ಮೊಬೈಲ್ ಕ್ರೇಜ್ ಇಲ್ಲ. ಆದರೆ, ಬಿಗ್ ಸ್ಕ್ರೀನ್ ಇರುವ ಮೊಬೈಲ್ ಅಂದ್ರೆ ಇಷ್ಟ. ಹೀಗಾಗಿ ಸ್ಯಾಮ್‌ಸಂಗ್ ಟ್ಯಾಬ್ ಜೊತೆಗೆ ಐಫೋನ್-5ಎಸ್ ಬಳಸುತ್ತಿದ್ದೇನೆ.
    ಸಾಮ್‌ಸಂಗ್‌ನಲ್ಲಿ ಸಿನಿಮಾ ನೋಡುತ್ತೇನೆ. ಐಫೋನ್ ಅನ್ನು ಹೆಚ್ಚು ಬಳಸುತ್ತೇನೆ. ತುಂಬಾ ಅಪ್‌ಡೇಟ್ ಅಪ್ಲಿಕೇಷನ್‌ಗಳು ಐಫೋನ್‌ನಲ್ಲಿ ಸಿಗುತ್ತವೆ.
    ಸೌಂಡ್ ತುಂಬಾ ಕ್ಲ್ಯಾರಿಟಿ ಇದೆ.
    ಸೋನಿ ಕಂಪನಿಯಿಂದ ಹೊಸ ಮೊಬೈಲ್ ಬರುತ್ತದೆ ಅಂತ ಕೇಳಿದೆ. ಅದು ತುಂಬಾ ಚೆನ್ನಾಗಿದೆ. ಬಹುಶಃ ಮುಂದೆ ಅದನ್ನೇ ತೆಗೆದುಕೊಳ್ಳುತ್ತೇನೆ.

ಶ್ವೇತಾಪಂಡಿತ್ (ಬಿಗ್‌ಬಾಸ್)
= ನಾನು ಬಳಸುತ್ತಿರುವ ಮೊಬೈಲ್ ಐಫೋನ್. ಮಾಡೆಲ್ 5ಎಸ್.
= ತುಂಬಾ ಸುಲಭವಾಗಿ ಬಳಸಬಹುದು. ಆ್ಯಪ್ಸ್‌ಗಳ ಬಗ್ಗೆ ಗೊಂದಲ ಇರಲ್ಲ.
= ಸಾಕಷ್ಟು ಆ್ಯಪ್‌ಗಳಿವೆ. ಬುಕ್ಸ್ ಓದುವುದು, ಸಿನಿಮಾ ನೋಡುವುದು, ಸಂಗೀತ ಕೇಳುವುದು. ಇವುಗಳನ್ನು ಸರಳವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
= ನನ್ನ ಮುಂದಿನ ಆಯ್ಕೆ ಕೂಡ ಐಫೋನ್ ಆಗಿರುತ್ತದೆ. ಅದರಲ್ಲಿ ಮಾಡೆಲ್ ಬದಲಾಗಬಹುದು. ಆದರೆ, ಬ್ರಾಂಡ್ ಬದಲಾಯಿಸಲ್ಲ.

ವಿದ್ಯಾ (ಭಜರಂಗಿ)
=     ಈಗ ಬ್ಲಾಕ್‌ಬೆರಿ ಬಳಸುತ್ತಿದ್ದೇನೆ. ಆದರೆ, ಹೊಸ ಹೊಸ ಮೊಬೈಲ್ ನೋಡಿ ಬ್ಲಾಕ್‌ಬೆರಿ ಬೋರ್ ಅನಿಸಿದೆ.
=     ಇಂಟರ್‌ನೆಟ್ ಸೇರಿದಂತೆ ಆನ್‌ಲೈನ್ ಸಂಪರ್ಕ ಮಾಡಲು ಸುಲಭ ಅಂತ ತೆಗೆದುಕೊಂಡೆ.
=     ಬ್ಲಾಕ್‌ಬೆರಿಯಲ್ಲಿ ತುಂಬಾ ಆ್ಯಪ್‌ಗಳಿಲ್ಲ. ಇದ್ದರೂ ಆ ಬಗ್ಗೆ ನಾನು ಹೆಚ್ಚು ಗಮನ ಕೊಟ್ಟಿಲ್ಲ.
=     ಮುಂದೆ ಐಫೋನ್ ತೆಗೆದುಕೊಳ್ಳೋಣ ಅಂತಿದ್ದೀನಿ.
ಭಾವನಾ ರಾವ್  (ಗಾಳಿಪಟ)
    ಬ್ಲಾಕ್‌ಬೆರಿ ಹಾಗೂ ಐಫೋನ್-4ಎಸ್ ಬಳಸುತ್ತಿದ್ದೇನೆ. ಬ್ಲಾಕ್‌ಬೆರಿ ಸುಮ್ಮನೆ ಇಟ್ಟುಕೊಂಡಿದ್ದೇನೆ.
    ನನ್ನ ಫೋಟೋನಾ ನಾನೇ ತೆಗೆದುಕೊಳ್ಳುವುದು ಸುಲಭ. ಜೊತೆ ನೋಡಕ್ಕೆ ಕ್ಲಾಸಿಕ್ ಆಗಿರುತ್ತದೆ.
    ಹೇಗೆ ಫೋಟೋ ತೆಗೆದರೂ ತುಂಬಾ ಕ್ವಾಲಿಟಿ ಮತ್ತು ಕ್ಲ್ಯಾರಿಟಿ ಇರುತ್ತದೆ.
    ಮುಂದೆ ಐಫೋನ್-ಎಸ್‌ಸಿ ಮಾಡೆಲ್ ಕೊಳ್ಳುವ ಯೋಚನೆ ಇದೆ.

ಮಮತಾ ರಾಹುತ್ (ಕರೋಡ್‌ಪತಿ)
=     ಸದ್ಯಕ್ಕೆ ಐಫೋನ್ ಬಳಸುತ್ತಿದ್ದೇನೆ. ಮಾಡೆಲ್ 5ಎಸ್.
=     ಫೋಟೋ ಕ್ವಾಲಿಟಿ, ಸುಲಭವಾಗಿ ನೆಟ್ ಬಳಸಬಹುದು.
=     ತುಂಬಾ ಆ್ಯಪ್‌ಗಳಿವೆ. ನಾವು ಯಾವುದನ್ನು ಬೇಕಾದರು ಆಯ್ಕೆ ಮಾಡಿಕೊಳ್ಳಬಹುದು. ಡೌನ್‌ಲೋಡ್ ಮಾಡುವಾಗ ಹೆಚ್ಚು ಕಿರಿಕಿರಿ ಇರಲ್ಲ.
=     ಮುಂದೆ ನನ್ನ ಅಯ್ಕೆ ಬಗ್ಗೆ ಗೊತ್ತಿಲ್ಲ. ಇದಕ್ಕಿಂತ ಅತ್ಯುತ್ತಮ ಮೊಬೈಲ್ ಬಂದರೆ ಯಾವುದೇ ಕಂಪನಿಯ ಬ್ರಾಂಡ್ ಆಗಲಿ ತೆಗೆದುಕೊಳ್ಳುತ್ತೇನೆ.

ಪ್ರೇಮ್ (ನೆನಪಿರಲಿ)
=     ಬಳಸುತ್ತಿರುವ ಮೊಬೈಲ್ ಸ್ಯಾಮ್‌ಸಂಗ್ ನೋಟ್ 3.
=     ನನಗೆ ಅವಶ್ಯಕವಾಗಿ ಬೇಕಿರುವ ಆ್ಯಪ್‌ಗಳು ಇದರಲ್ಲಿವೆ.
=     ಇಂಥದ್ದೇ ಆ್ಯಪ್ಸ್ ಅಂಥ ಏನೂ ಇಲ್ಲ. ಎಲ್ಲವೂ ಇಷ್ಟ.
=     ಗೊತ್ತಿಲ್ಲ. ಯಾಕೆಂದರೆ ಮೊಬೈಲ್ ಜಗತ್ತು ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಇಂಥದ್ದೇ ಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡು ತೆಗೆದುಕೊಳ್ಳುವ ಆಯ್ಕೆ ಗ್ರಾಹಕನಿಗಿಲ್ಲ.

= ಆರ್.ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement