ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಕ್ಕಳನ್ನು ಪ್ರೇರಿಪಿಸಬೇಕು

Mainashree
Updated On : 3 Jun 2014, 12:59 pm

ಮಕ್ಕಳು ರಜೆಯಲ್ಲಿ ಆಟದ ಸಂತೋಷದಲ್ಲಿರುತ್ತಾರೆ. ಅವರಿಗೆ ಒಮ್ಮೆಲೇ ಮುಂದಿನ ತರಗತಿಯ ಬಗ್ಗೆ ಅಲ್ಲಿನ ಪಠ್ಯಕ್ರಮದ ಬಗ್ಗೆ ಹೇಳಿ ಹೆದರಿಸುವ ಬದಲು ಹಂತಹಂತವಾಗಿ ಪರಿವರ್ತಿಸಬೇಕು. ಭಯ ಪಡುವಂಥದ್ದೇನು ಇಲ್ಲವೆಂದೂ ಹಿಂದಿನ ತರಗತಿಯ ವಿಷಯಗಳ ಮುಂದಿನ ಭಾಗವಷ್ಟೇ ಎಂದು ಮನನ ಮಾಡಿಸಬೇಕು. ಇದರಿಂದ ಅವರಿಗೆ ಧೈರ್ಯ ಬರುತ್ತದೆ. ಅಲ್ಲದೇ ತುಂಬಾ ಆಸಕ್ತಿಯಿಂದ ಓದಿ ಉತ್ತಮ ಅಂಕಗಳಿಸಿದರೆ ಭವಿಷ್ಯದಲ್ಲಿ ಆಗುವ ಪ್ರಯೋಜನಗಳನ್ನು ಸವಿಸ್ತಾರವಾಗಿ ತಿಳಿಸಿ ಹೇಳುವುದರಿಂದ ಕೂಡಾ ಮಕ್ಕಳು ಮುಂದಿನ ತರಗತಿಗೆ ಹೋಗಲು ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ತಯಾರಾಗುತ್ತಾರೆ.ಟಿ
= ಪ್ರತಿಭಾ ವಿಶ್ವನಾಥ್, ದಾವಣಗೆರೆ
ಓದಿನ ಮಹತ್ವ ತಿಳಿಸುವ ಸಮಯ
ವರ್ಷವಿಡೀ ಶಾಲಾ ಪುಸ್ತಕಗಳ ಭಾರವನ್ನು ಹೊತ್ತೂ, ಹೋಂವರ್ಕ್‌ಗಳೂ, ಟೆಸ್ಟ್‌ಗಳೂ ಎಂದು ಒತ್ತಡದಲ್ಲೇ ಮುಳುಗಿರುವ ಮಕ್ಕಳು ರಜೆಯನ್ನು ನಿರೀಕ್ಷಿಸುತ್ತಿರುತ್ತಾರೆ. ಇದು ಸಹಜವೂ ಸರಿ. ಇಡೀ ವರ್ಷವೂ ಓದು-ಬರಹದಲ್ಲಿ ಮುಳುಗಿರುವ ಮಕ್ಕಳು ರಜೆಯಲ್ಲೂ ಪುಸ್ತಕದ ಸಹವಾಸವನ್ನು ಮಾಡಲು ನಿರಾಕರಿಸುತ್ತಾರೆ. ಇಂತಹ ಸಮಯದಲ್ಲಿ ಪೋಷಕರು ಓದಿನ ಮಹತ್ವವನ್ನು ತಿಳಿಸಿ ಹೇಳಬೇಕಾದ ಅವಶ್ಯವಿದೆ. ದಿನಂಪೂರ್ತಿಯಲ್ಲದಿದ್ದರೂ ದಿನಕ್ಕೆ ಒಂದೆರಡು ಗಂಟೆಗಳು ಮುಂದಿನ ತರಗತಿ ಸಂಬಂಧಿಸಿದ ಪುಸ್ತಕಗಳನ್ನು ಅಭ್ಯಾಸ ಮಾಡುವಂತೆ ಉತ್ತೇಜಿಸಬೇಕು. ಅಲ್ಲದೇ ದಿನಕ್ಕೆ ಒಂದು ಪುಟದಷ್ಟು ಬರವಣಿಯಲ್ಲೂ ಕೂಡ ತೊಡಗಲು ತಿಳಿಸಬೇಕು. ಇದರಿಂದ ಬರವಣಿಯಲ್ಲಿ ಸುಧಾರಣೆ ಉಂಟಾಗುತ್ತದೆ ಎಂದು ಮನದಟ್ಟು ಮಾಡಬೇಕು.ಟಿ
= ವಿಜಯಭಾರತೀ ಎ. ಎಸ್, ಮೈಸೂರು
ಜೀವನಾನುಭವದ ಕೊರತೆ
ಇತ್ತೀಚಿನ ವರ್ಷಗಳಲ್ಲಿ ರಜೆಯು ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡಿದೆ. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಮುಂದಿನ ತರಗತಿಗಾಗಿ ಟ್ಯೂಷನ್ ಮಾಸ್ಟರ್‌ಗಳ ಹುಡುಕಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ತಮ್ಮ ಮಕ್ಕಳು ಎಲ್ಲ ವಿಷಯಗಳಲ್ಲೂ 'ಔಟ್ ಆಫ್ ಔಟ್‌' ತೆಗೆಯಬೇಕೆಂಬ ಚಪಲದಲ್ಲಿ ಮಕ್ಕಳ ಮನಸ್ಸನ್ನು ಅರಿಯುವುದಿಲ್ಲ. ಇನ್ನು ಕೆಲವು ಕುಟುಂಬದಲ್ಲಿ ಅಪ್ಪಾ-ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರಾಗಿದ್ದರೆ ರಜೆ ಪ್ರಾರಂಭವಾಗುತ್ತಿದ್ದಂತೆ ತಮ್ಮ ಮಕ್ಕಳನ್ನು ಶಿಬಿರಗಳಿಗೆ ತಾವು ತಮ್ಮ ಕಾರ್ಯದಲ್ಲಿ ತೊಡಗುತ್ತಾರೆ. ಹೀಗಿರುವಾಗ ನಮ್ಮ ಸಂಸ್ಕೃತಿಯ ಮಹಾಗ್ರಂಥಗಳನ್ನು ಪರಿಚಯಿಸಲು ಸಮಯವೆಲ್ಲಿರುತ್ತದೆ. ಹಳ್ಳಿಗಾಡಿನ ಬದುಕು, ಅಜ್ಜ-ಅಜ್ಜಿಯರ ಒಡನಾಟಗಳು ಇಲ್ಲವಾಗಿ ಜೀವನಾನುಭವದ ಕೊರತೆ ಕಾಣುತ್ತಿದೆ.ಟಿ
= ನವಿಲೂರು ಪ್ರಕಾಶ್, ನಂಜನಗೂಡು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement