ದುಂಡಿಭೋಜನ ಪರಿಷತ್
ಈ ಹಿಂದೆ ಬೊಂಬಾಟ್ ಭೋಜನವೆಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದ ಅಡುಗೆ ಕಾರ್ಯಕ್ರಮದ ಯಥಾ ನಕಲು ಈಗ ಈಟಿವಿ ವಾಹಿನಿಯಲ್ಲಿ ಮಧ್ಯಾಹ್ನ 1ಗಂಟೆಗೆ ಭೋಜನಪ್ರಿಯವೆಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಈ ಹಿಂದೆ ಸಿಹಿಕಹಿ ಚಂದ್ರುರವರು ಮಾಡುತ್ತಿದ್ದ ತಪ್ಪನ್ನೇ ಇಲ್ಲಿ ಪುನಾರವರ್ತಿಸಿದ್ದಾರೆ. ವರು ಈ ಕಾರ್ಯಕ್ರಮದ ಕೊನೆಯಲ್ಲಿ ಹನಿಗವನವೊಂದನ್ನು ಹೇಳುತ್ತಾರೆ. ದರೆ ಸೌಜನ್ಯಕ್ಕಾದರೂ ಈ ಹನಿಗವನದ ಕರ್ತೃ ಯಾರೆಂಬುದನ್ನು ಅವರು ಒಮ್ಮೆಯೂ ಹೇಳುವುದಿಲ್ಲ. ಈ ಬಹುತೇಕ ಹನಿಗವನಗಳೆಲ್ಲವೂ ಹನಿಗವನದ ಪಿತಾಮಹರೆಂದೇ ಖ್ಯಾತಿ ಹೊಂದಿರುವ ದುಂಡಿರಾಜ್ರವರದ್ದು. ಆ ಹನಿಗವನಗಳ ಹೆಗ್ಗಳಿಕೆ ದುಂಡಿರಾಜ್ರವರಿಗೇ ಸಲ್ಲಬೇಕು. ಚಂದ್ರುರವರೇ ಈಗಲಾದರೂ ಅವರ ಹೆಸರನ್ನು ಹೇಳಿ ಹನಿಗವನ ಓದಿದರೆ ಅವರಿಗೂ ನಮಗೂ ಖುಷಿಯಾಗುತ್ತದೆ. <
= ಎಲ್.ವಿ. ಕುಮಾರಸ್ವಾಮಿ, ಹಿರಿಯೂರು