ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಾಯಾಮೃಗ ಹುಡುಕಿ ಕೊಡಿ ಪ್ಲೀಸ್

Mainashree
Updated On : 6 Jun 2014, 1:40 am

ಕನ್ನಡ ಪ್ರಭಕ್ಕೆ ವಂದನೆಗಳು. ಒಂದು ಅಕ್ಷರ ತೋರಣ ಕಟ್ಟಲು ಕೊಟ್ಟ ಅವಕಾಶಕ್ಕೆ ಬಹಳ ಧನ್ಯವಾದಗಳು. ಮನಸ್ಸಿನ ಮೂಲೆಯೊಂದರಲ್ಲಿ ನಿರಾಸೆಯ ಭಾವನೆ ಅಡಗಿ ಕುಳಿತಿತ್ತು. ಶನಿವಾರದ ಪತ್ರಿಕೆ ನೋಡಿದಾಗ ಒಂದು ಆಶಾಕಿರಣ ಮೂಡುವ ಭಾವನೆಯು ಮೂಡಿದಂತಾಗಿದೆ. ಏಕೆಂದರೆ, ವೀಕ್ಷಕರ ಕೋರಿಕೆಯ ಮೇರೆಗೆ ಝೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರಗೊಳ್ಳುತ್ತಿದ್ದ ಮಾಯಾಮೃಗ ಧಾರಾವಾಹಿ ಕೆಲವು ದಿನಗಳಿಂದ ಪ್ರಸಾರವಾಗದೆ ಇರುವುದು ಬಹಳ ನಿರಾಸೆಯನ್ನುಂಟು ಮಾಡಿದೆ. ದಯಮಾಡಿ ಈ ಧಾರಾವಾಹಿಯ ಪ್ರಸಾರದ ವೇಳೆಯಲ್ಲಿ ಏನಾದರೂ ಬದಲಾವಣೆಯಾಗಿದೆಯಾ ಅಥವಾ ಬೇರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆಯಾ ತಿಳಿಸಿ. ಹೌದಾಗಿದ್ದರೆ, ಯಾವ ವಾಹಿನಿ ಮತ್ತು ವೇಳೆಯ ವಿವರಗಳನ್ನೂ ದಯಮಾಡಿ ತಿಳಿಸತಕ್ಕದ್ದು. ನಾವು ಮತ್ತು ನಮ್ಮ ಸುತ್ತಮುತ್ತಲಿನ ವಾಸಿಗಳೆಲ್ಲರೂ  ಟಿ.ಎನ್.ಸೀತಾರಾಮ್‌ರವರ ಅಭಿಮಾನಿಗಳು.
= ಶ್ರೀಮತಿ ಸರಳಾ. ಊರು ಬೇಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement