ಕಿಚನ್ ಕಾರ್ನರ್
ಕಾಯಿ ಬರ್ಫಿ
ನಾವು ದಕ್ಷಿಣ ಭಾರತೀಯರಿಗೆ ಕಾಯಿಯಿಲ್ಲದೆ ಅಡುಗೆಯೇ ಆಗುವುದಿಲ್ಲ. ಇಂಗುತೆಂಗು ಇದ್ದರೆ ಮಂಗನ ಅಡುಗೆಯೂ ರುಚಿ ಎನ್ನುತ್ತಾರೆ. ಅಂಥದರಲ್ಲಿ ತೆಂಗಿನಕಾಯಿಯಿಂದಲೇ ಸ್ವೀಟ್ ತಯಾರಿಸಿದರೆ ಅದರ ರುಚಿ ಹೇಗಿರಬಹುದು?
ಬೇಕಾಗುವ ಪದಾರ್ಥಗಳು: 225 ಗ್ರಾಂ ಖೋಯಾ, 225 ಗ್ರಾಂ ಕಾಯಿ ತುರಿ, ಒಂದು ಚಮಚ ಏಲಕ್ಕಿ ಪುಡಿ, ಅರ್ಧ ಲೋಟ ಸಕ್ಕರೆ, ಒಂದು ಚಮಚ ತುಪ್ಪ, 2 ಲೋಟ ನೀರು, ಅರ್ಧ ಚಮಚ ಪಿಸ್ತಾ, ಬಾದಾಮಿ.
ಮಾಡುವ ವಿಧಾನ: ಕಾಯಿತುರಿ ಮತ್ತು ಖೋಯಾ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ತುಪ್ಪದಲ್ಲಿ ಹುರಿಯಿರಿ. ಏಲಕ್ಕಿ ಸೇರಿಸಿ. ಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಕಾಯಿತುರಿ- ಕೋಯಾ ಮಿಕ್ಸ್ ಸೇರಿಸಿ ಚೆನ್ನಾಗಿ ಕಲೆಸಿ. ತಟ್ಟೆಯ ಮೇಲೆ ತುಪ್ಪ ಸವರಿ, ಬಾದಾಮಿ ಪಿಸ್ತಾ ಹರಡಿ. ಇದಕ್ಕೆ ಕಾಯಿಪಾಕ ಹಾಕಿ ಸಮನಾಗಿ ಹರಡಿ. ಬಳಿಕ ಚಾಕುವಿನಿಂದ ಚೌಕಾಕಾರದಲ್ಲಿ ಕತ್ತರಿಸಿ ಉಲ್ಟಾ ಇಡಿ. ಇದರಿಂದ ಡ್ರೈಫ್ರೂಟ್ಸ್ ಸ್ವೀಟ್ನ ಮೇಲೆ ಬರುತ್ತದೆ. ಕಾಯಿ ಬರ್ಫಿ ತಿನ್ನಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.