ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜಗುಲಿ

Mainashree
Updated On : 9 Jun 2014, 2:21 am

ಅಬ್ಬೆಪಾರಿತನ ಕಾಡುವ ವಯಸ್ಸು
ಇಂದಿನ ಬಹುತೇಕ ಮಕ್ಕಳು ಎಳವೆಯಲ್ಲಿಯೇ ಮೊಬೈಲ್‌ನ ಮಾಯಾಜಾಲಕ್ಕೆ ಆಕರ್ಷಿತರಾಗಿರುತ್ತಾರೆ. ಯಾರ ಕೈಯಲ್ಲಿ ನೋಡಿದರೂ 'ಹಲೋ' ನಾದ. ತಮಗೂ ಏನೋ ತಹ ತಹ. ಮೊಬೈಲ್ ಕೈ ಸೇರಿದ ಮೊದಮೊದಲು ಮಾತು, ಎಸ್‌ಎಂಎಸ್ ಗಳು ನಂತರ ಇಂಟರ್‌ನೆಟ್, ಗೂಗಲ್, ಫೇಸ್‌ಬುಕ್, ನಂತರ ಪ್ರೀತಿ ಪ್ರೇಮ, ಆಮೇಲೆ ಪ್ರಚೋದಕ ದೃಶ್ಯಗಳು, ಕೊನೆ ಕೊನೆಗೆ ಏನೋ ವಿಷಣ್ಣತೆ, ಅಬ್ಬೆಪಾರಿತನ. ಇದು ಇಂದಿನ ಬಹುತೇಕ ಎಳೆಯರ ಹಾಡು ಪಾಡಾಗಿದೆ. ನನ್ನ ಅಭಿಪ್ರಾಯದಂತೆ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರ ಮೊಬೈಲ್ ಕೊಡಿಸುವುದು ಸೂಕ್ತ. ಅಲ್ಲದೆ ಆ ಮಕ್ಕಳೆಡೆಗೆ ನಮ್ಮ ಮೂರನೇ ಕಣ್ಣಿಟ್ಟು ಕಾಯಬೇಕಾದ್ದು ಪೋಷಕರ ಕರ್ತವ್ಯ. ಕೆಡುತ್ತಾರೆಂಬ ವಾದವಲ್ಲ ಕೇಡದಂತೆ ನೋಡಿಕೊಂಡರೆ ಕ್ಷೇಮ.
-ಕೆ. ಶ್ರೀನಿವಾಸ ರಾವ್, ಹರಪನಹಳ್ಳಿ

ಮೊಬೈಲ್ ಅವಶ್ಯಕತೆಯೇ ಇಲ್ಲ
ಮಕ್ಕಳಿಗೆ ಮೊಬೈಲ್ ಫೋನ್ ಕೊಡಿಸುವುದೆ ಒಂದು ಹುಚ್ಚುತನ. ಅಂತಹುದರಲ್ಲಿ ಎಷ್ಟನೇ ವಯಸ್ಸಿನ ಮಕ್ಕಳಿಗೆ ಅನ್ನುವ ವಿಚಾರ ಇನ್ನೂ ಬಾಲೀಶವಾದದ್ದು. ಯಾರಿಗೆ ಆಗಲಿ ಏನನ್ನೆ ಆಗಲಿ ಕೊಳ್ಳುವ ಅಥವಾ ಕೊಡಿಸುವ ವಿಚಾರ ಬಂದಾಗ ಆ ವಸ್ತುವಿನ ಉಪಯೋಗ, ಸಾದಕ, ಬಾದಕ ಹಾಗು ಅರ್ಹತೆ ತಿಳಿದುಕೊಳ್ಳುವ ವಿಚಾರ ಮಾಡಬೇಕು. ಇಲ್ಲದಿದ್ದರೆ ಆ ವಸ್ತುವಿನ ಸಧ್ಬಳಕೆಗಿಂತ ದುರ್ಬಳಕೆ ಹೆಚ್ಚಾಗುತ್ತದೆ. ಇದರಿಂದ ಕುಟುಂಬದ ಹಾಗೂ ಸಮಾಜದ ಪರಿಸರ ಹಾಳಾಗುತ್ತದೆ. ಬಹಳಷ್ಟು ಹಿರಿಯರಿಗೆ ಮೊಬೈಲ್ ಅವಶ್ಯಕತೆಯೇ ಇಲ್ಲದಿರುವಾಗ ಮಕ್ಕಳಿಗೇಕೆ ಮೊಬೈಲ್ ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ಪಠ್ಯ ಪುಸ್ತಕದ ಜೊತೆಗೆ ಸಾಮಾನ್ಯ ಜ್ಞಾನದ ಪುಸ್ತಕಗಳನ್ನೂ, ಅಭ್ಯಾಸದ ಪರಿಕರಗಳನ್ನೂ ಕೊಡಿಸಿ ಅವರ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸುವುದು ಒಳಿತು.
-ಶಶಿಕಾಂತ ಕೊರ್ಲಹಳ್ಳಿ


ವಯಸ್ಸಿಗಿಂತ ತಿಳಿವಳಿಕೆ ಮುಖ್ಯ!
ಆಧುನಿಕ ಯುಗ ಜಗತ್ತು ಹೆಚ್ಚು ಹೆಚ್ಚು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹ ವಿಚಾರದಲ್ಲಿ ಮೊಬೈಲ್ ಫೋನ್ ಕೂಡ ಒಂದಾಗಿದೆ. ಇಂದು ಜಾಗತೀಕರಣದ ಫಲವಾಗಿ ಯಾರೊಬ್ಬರೂ ಮೊಬೈಲ್ ಇಲ್ಲದೆ ಇರುವಂತಿಲ್ಲ. ಅದರಲ್ಲೂ ದೊಡ್ಡವರಿಗಿಂತ, ಚಿಕ್ಕವರಿಗೆ ಮೊಬೈಲ್ ಮೇಲೆ ಹೆಚ್ಚಿನ ಒಲವು. ಹೀಗಾಗಿ ಅವರಿಗೆ ಯಾವ ವಯಸ್ಸಿಗೆ ಮೊಬೈಲ್ ಕೊಡಿಸಬೇಕು ಎನ್ನುವುದಕ್ಕಿಂತ, ಯಾಕೆ ಕೊಡಿಸಬೇಕು ಎನ್ನುವುದು ಮುಖ್ಯ! ಇದಲ್ಲದೆ  ಮೊಬೈಲ್‌ನಿಂದಾಗುವ ಹಾನಿ, ಉಪಯೋಗ ಕುರಿತು ಮಾಹಿತಿ ನೀಡಬೇಕು. ಅಗತ್ಯ ಬಿದ್ದರೆ ಹೈಸ್ಕೂಲಿಗಿಂತ, ಕಾಲೇಜು ಹಂತದಲ್ಲಿ ಮೊಬೈಲ್ ಕೊಡಿಸುವುದು ಸೂಕ್ತ.
-ಸಿದ್ದಾರ್ಥ ಪಿ. ವರ್ಮಾ. ಬೀದರ್

'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments