ಪೆನ್ ಪಾಯಿಂಟ್
ಮಾತು ಆಡಿದರೆ ಹೋಯ್ತು
ಕಚೇರಿಯಲ್ಲಿ ಉನ್ನತ ಹುದ್ದೆ ಸಾಧಿಸಬೇಕಾದರೆ ನೀವು ಒಳ್ಳೆಯ ಕೆಲಸಗಾರರಾಗಿರಬೇಕು. ಚೆನ್ನಾಗಿ ಮಾತನಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಕೆಳಗಿನ ಮಾತುಗಳನ್ನು ಹೇಳಬಾರದು!
- ಬಾಸ್ ಯಾವುದಾದರೂ ಕೆಲಸ ಹೇಳಿದಾಗ 'ಅದು ಪೆದ್ದು ಕೆಲಸ ಅಲ್ವಾ?' ಅಂತ ಕೇಳಬಾರದು.
- 'ಇದು ಸರಿಯಲ್ಲ' ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಬಾರದು.
- 'ನನಗೆ ಸಮಯವಿಲ್ಲ' ಎಂದರೆ ಬಾಸ್ ನಿಮ್ಮನ್ನು ಕೆಲಸವಿಲ್ಲದೆ ಕೂರಿಸುವುದು ಖಂಡಿತ.
- 'ಆಗುತ್ತಾ ನೋಡ್ತೀನಿ' 'ಪ್ರಯತ್ನ ಮಾಡ್ತೀನಿ' ಅನ್ನುವುದು ದುರ್ಬಲನ ಲಕ್ಷಣಗಳು.
- 'ಅದು ನನ್ನ ಹೊಣೆ ಅಲ್ಲ' ಅಂತ ಹೇಳಿದರೆ ಕೆಲಸ ಬಿಡಲು ರೆಡಿಯಾಗಿರಿ.
- 'ನನ್ನ ತಪ್ಪಿರಬಹುದು, ಆದ್ರೆ...' ಅನ್ನೋದು ಉದ್ಧಟತನ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.