ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬದುಕೆಂಬ ಬಾಣ

Mainashree
Updated On : 9 Jun 2014, 2:34 am

ಬದುಕೆಂಬುದು ಬಿಲ್ಲನಿಂದ ಬಿಟ್ಟ ಬಾಣದಂತೆ. ನೀವು ಎಷ್ಟೇ ಒಳ್ಳೆಯ ಬಿಲ್ವಿದ್ಯಾ ಪರಿಣಿತರಾಗಿರಿ. ನಿಮ್ಮ ಗುರಿ ಅದೆಷ್ಟೇ ಹತ್ತಿರದಲ್ಲಿಯೇ ಇರಲಿ. ನಿಮ್ಮಲ್ಲಿ ತಾಂತ್ರಿಕವಾಗಿ ಅತ್ಯಂತ ಉತ್ತಮ ಬಿಲ್ಲು, ಬಾಣವೇ ಇರಲಿ. ಇವಿಷ್ಟೇ ಪಂದ್ಯದ ಪಲಿತಾಂಶ ನಿರ್ಧರಿಸಿಬಿಡಲು ಸಾಧ್ಯವಿಲ್ಲ. ನೀವು ಬಿಟ್ಟ ಬಾಣ ನಿಖರವಾಗಿ ಗುರಿಯನ್ನೇ ತಲುಪಬೇಕಾದರೆ ಮುಖ್ಯವಾದುದು ನಿಮ್ಮ ಏಕಾಗ್ರತೆ. ಎಲ್ಲವೂ ಇದ್ದು ನೀವು ಏಕಾಗ್ರಚಿತ್ತರಾಗಿರಲು ಸಾಧ್ಯವಾಗದೇ ಹೋದರೆ, ಬೇರಿನ್ಯಾವುವೋ ಸಂಗತಿಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದಾದರೆ ಖಂಡಿತಾ ನೀವು ಹೂಡಿದ ಬಾಣ ಗುರಿ ತಲುಪಲು ಸಾಧ್ಯವೇ ಇಲ್ಲ. ಎಷ್ಟೋ ಸಂಗತಿಗಳು ಜೀವನದಲ್ಲಿ ದಿನನಿತ್ಯ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಬೇಕಾದದ್ದು ಬೇಡದ್ದು ಹೀಗೆ ಎಲ್ಲವೂ. ಹಾಗೆಂದು ಅದೆಲ್ಲವನ್ನೂ ಬಿಟ್ಟು ಏನೂ ಇಲ್ಲದ, ಅತ್ಯಂತ ಪ್ರಶಾಂತ ತಾಣದಲ್ಲಿ ಹೋಗಿ ಕುಳಿತು ಇದ್ದುಬಿಡುತ್ತೇನೆ ಎಂಬುದು ಸಾಧ್ಯವಾಗುವುದಿಲ್ಲ. ಅಭ್ಯಾಸ ಸಂದರ್ಭದಲ್ಲಿ, ಏಕಾಗ್ರತೆ ಸಾಧನೆಗಾಗಿ ಹೇಗೆ ನೀವು ಪ್ರಶಾಂತ ಸ್ಥಳದಲ್ಲಿ ಹೋಗಿ ಬಾಣ ಪ್ರಯೋಗವನ್ನು ಮಾಡುತ್ತೀರೋ ಹಾಗೆಯೇ ಬದುಕು ಸಹ. ಪ್ರದರ್ಶನವೇನಿದ್ದರೂ ತುಂಬಿದ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ, ಅವರ ಕೇಕೆ, ಕೂಗಾಟದ ಮಧ್ಯೆ, ತೀವ್ರ ಪೈಪೋಟಿಯೊಂದಿಗೇ ಆಗಬೇಕು. ಜೀವನದಲ್ಲೂ ಎಲ್ಲ ರೀತಿಯ ಅಡೆ ತಡೆಗಳನ್ನೂ ಮೀರಿಯೇ ನೀವು ನಿಮ್ಮ ಗುರಿಯೆಡೆಗೆ ಏಕಾಗ್ರತೆ ಸಾಧಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments