ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೂರು ದುಃಖಗಳು

Mainashree
Updated On : 9 Jun 2014, 2:20 am

ಒಂದು ಮಳೆಗಾಲ. ದೊರೆ ತನ್ನ ವಂದಿಮಾಗಧ ಸೇವಕರ ಸಮೇತ ದೂರದೇಶದ ಪ್ರವಾಸದಲ್ಲಿದ್ದ. ಜತೆಗೆ ರಾಣಿಯರು ಬಂದಿರಲಿಲ್ಲ. ರಾಣಿಯನ್ನು ನೆನೆಯುತ್ತ ಕುಳಿತಿದ್ದ ಸಂದರ್ಭದಲ್ಲೇ ಆತನ ಸೇವಕನೊಬ್ಬ ಎಡವಿ ಬಿದ್ದು ಕೈಯಲ್ಲಿದ್ದ ಮದ್ಯದ ಪಾತ್ರೆಯನ್ನು ಚೆಲ್ಲಿಕೊಂಡು ರಾಜ ಕುಳಿತಿದ್ದ ರತ್ನಗಂಬಳಿಯನ್ನು ತೋಯಿಸಿ ಹಾಕಿದ. ಇದರಿಂದ ರೇಗಿದ ರಾಜ 'ಈತನನ್ನು ಎಳೆದೊಯ್ದು ಸಾಯಿಸಿಬಿಡಿ' ಎಂದು ಅಪ್ಪಣೆ ಮಾಡಿದ. ಭಟರು ಆ ನಿಷ್ಪಾಪಿಯನ್ನು ಎಳೆದೊಯ್ದರು.
ರಾಜನ ಜತೆಗೊಬ್ಬ ಕವಿಯಿದ್ದ. ಅವನಿನ್ನೂ ತರುಣ. ವಧೆಯಾಗಲಿರುವ ಸೇವಕ ಇತ್ತೀಚೆಗಷ್ಟೇ ಮದುವೆಯಾಗಿದ್ದವನು ಎಂಬುದು ಅವನ ಮನಸ್ಸಿಗೆ ಬಂತು. ರಾಜನೂ ವಿರಹದಿಂದ ನವೆಯುತ್ತಿದ್ದಾನೆ ಎಂಬುದು ಅವನಿಗೆ ಗೊತ್ತಿತ್ತು. ಕೂಡಲೇ ರಾಜನ ಬಳಿ ಸಾರಿ ಈ ಶ್ಲೋಕವನ್ನು ಹೇಳಿದ:

ಪ್ರಾವೃತಸಮಯಪ್ರವಾಸೋ ಯೌವನದಿವಸೇ ತಥಾ ಚ ದಾರಿದ್ರ್ಯಮ್
ಪ್ರಥಮಸ್ನೇಹ ವಿಯೋಗ ಸ್ತ್ರೀಣ್ಯಪಿ ಗುರುಕಾಣಿ ದುಃಖಾನಿ

ಮಳೆಗಾಲದಲ್ಲಿ ಮನದನ್ನೆಯಿಂದ ದೂರವಾಗಿ ಪ್ರವಾಸದಲ್ಲಿರುವುದು, ತಾರುಣ್ಯದಲ್ಲಿ ಅದನ್ನು ಸವಿಯಲು ಸೂಕ್ತ ಧನವಿಲ್ಲದಿರುವುದು ಮತ್ತು ಮೊದಲ ಭೇಟಿಯಾದ ಕೂಡಲೇ ಪ್ರಿಯನನ್ನು ಅಗಲುವುದು- ಇವು ಮೂರು ಮಹಾ ದುಃಖಗಳು.
ಶ್ಲೋಕದ ಧ್ವನಿ ರಾಜನನ್ನು ತಟ್ಟಿತು. ಮಲೆಗಾಲದಲ್ಲಿ ರಾಣಿಯಿಂದ ದೂರವಿದ್ದು ಆತ ದುಃಖ ಅನುಭವಿಸಿದ್ದನಷ್ಟೆ. ಸದ್ಯವೇ ಮದುವೆಯಾದ ಸೇವಕನನ್ನು ಸಾಯಿಸಿ ಆತನ ನವಪತ್ನಿಗೆ ವೈಧವ್ಯ ಉಂಟುಮಾಡುವುದು ಸರಿಯೆ ಎಂಬ ಪ್ರಶ್ನೆ ಕಾಡಿತು. ಶಿಕ್ಷೆ ರದ್ದಾಯಿತು. ತರುಣನಾಗಿದ್ದು, ಬಡವನಾಗಿದ್ದ ಕವಿಗೆ ಸೂಕ್ತ ಧನವೂ ಸಂದಿತು.


= ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments