ಗಮನ ಬೇರೆಡೆ ಸೆಳೆದು ಕಳವು ಮಾಡುವ ಸಂದರ್ಭಗಳು
* ಹಣವನ್ನು ತೆಗೆದುಕೊಂಡು ಮತ್ತು ಆಭರಣವನ್ನು ಹಾಕಿಕೊಂಡು ಹೋಗುವಾಗ ಒಬ್ಬರೇ ಹೋಗುವುದು ಮತ್ತು ಅಪರಿಚಿತರ ಬಳಿ ಮಾತನಾಡುವುದು ಬೇಡ. ಅವರು ಹೇಳುವ ಮಾತಿಗೆ ಕಿವಿಗೊಡುವುದು ಬೇಡ.
* ಬ್ಯಾಂಕ್‌ನಿಂದ ಹಣವನ್ನು ತೆಗೆದುಕೊಂಡು ಒಬ್ಬರೇ ಹೋಗುವ ಸಂದರ್ಭಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ನಡೆಯುತ್ತವೆ.
* ವಾಹನಗಳಲ್ಲಿ ಹಣವನ್ನು ಅಥವಾ ಬೆಲೆಬಾಳು ವಸ್ತುಗಳನ್ನು ಇಟ್ಟು ಬೀಗ ಹಾಕದೆ ಅಥವಾ ಅದು ಬೇರೆಯವರಿಗೆ ತಿಳಿಯುವಂತೆ ಇಟ್ಟುಹೋದ ಸಮಯದಲ್ಲಿ.
* ಬಸ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ತಮ್ಮ ವಸ್ತುಗಳ ಬಗ್ಗೆ ಗಮನಕೊಡದೇ ಇದ್ದಾಗ ಅಪರಿಚಿತರು ಕುಂಟು ನೆಪಗಳನ್ನು ಹೇಳಿಕೊಂಡು ಅನುಮಾನಾಸ್ಪದವಾಗಿ ನಿಮ್ಮ ಸಹಾಯ ಪಡೆಯಲು ಬಂದಾಗ, ಇಂತಹ ಘಟನೆಗಳು ಹೆಚ್ಚು ನಡೆಯುತ್ತವೆ.
* ಅಪರಿಚಿತರು ಪರಿಚಯ ಮಾಡಿಕೊಂಡು ತಿಂಡಿತಿನಿಸುಗಳನ್ನು ನೀಡುವುದು, ಅದರಲ್ಲಿ ಮತ್ತಿನ ಔಷಧಿ ಬೆರೆಸೆ ಮತ್ತು ಬಂದ ನಂತರ ತಮ್ಮ ಕೈಚಳಕ ತೋರಿಸುತ್ತಾರೆ. ಹಾಗಾಗಿ ಅಂತಹವರು ಮತ್ತು ಅವರು ನೀಡುವ ತಿಂಡಿತಿನಿಸುಗಳ ಬಗ್ಗೆ ಎಚ್ಚರದಿಂದಿರಬೇಕು.
* ಅತಿಆಸೆ ಗತಿಗೇಡು ಎಂಬಂತೆ ಕೆಲವರು ತಮ್ಮದಲ್ಲದ ವಸ್ತುವನ್ನು ಕಂಡಾಗ ಉದಾಹರಣೆಗೆ ಹಣ ಅಥವಾ ಆಭರಣ ಕಂಡಾಗ ಅದಕ್ಕೆ ಆಸೆಪಟ್ಟು ತೆಗೆದುಕೊಳ್ಳಳು ಹೋಗುತ್ತಾರೆ. ಈ ರೀತಿ ಬೇರೆ ಕಡೆ ಆಕರ್ಷಿಸಿ, ತಮ್ಮ ಬಳಿ ಇರುವ ವಸ್ತುಗಳನ್ನು ದೋಚಲು ಯತ್ನಿಸುತ್ತಾರೆ.