ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಲನವಲನಗಳ ಬಗ್ಗೆ ಆಸ್ಥೆ ಇರಲಿ

Vishwanath S
Updated On : 11 Jun 2014, 1:33 am

ತಂದೆ ತಾಯಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ತಾವು ಬಳಸುವ ಮೊಬೈಲನ್ನೂ ಕೊಡಬಾರದು. ಏಕೆಂದರೆ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಗುರಿ ವಿದ್ಯಾಭ್ಯಾಸದ ಕಡೆಗೆ ಇರಬೇಕಲ್ಲದೇ ಬೇರೆ ಕಡೆಯಲ್ಲ. ಮಕ್ಕಳು ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡುವ ಹುಚ್ಚು ಹಿಡಿಸಿಕೊಂಡರೆ ಅವರಲ್ಲಿ ಹಠ ಹೆಚ್ಚುತ್ತದೆ. ಪರಿಣಾಮ ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳು ತಮಗೇ ತಿಳಿಯದೇ ತಪ್ಪುದಾರಿ ಹಿಡಿಯುತ್ತಾರೆ. ಮಕ್ಕಳ ಚಲನವಲನಗಳ ಬಗ್ಗೆ ಆಸ್ಥೆ ವಹಿಸಬೇಕು. ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಶಿಕ್ಷಕರು ಸೂಕ್ತ ತಿಳಿವಳಿಕೆ ನೀಡಬೇಕು
- ನಾಗವೈಷ್ಣವಿ ಎಂ, ವಿಜಯ ಶಾಲೆ, ಹಾಸನ

ಭವಿಷ್ಯವೇ ಮಂಕಾಗುತ್ತದೆ
ಹದಿನೈದು-ಹದಿನಾರು ವರ್ಷ ದಾಟಿದವರಿಗೆ ಮೊಬೈಲ್ ಅನಿವಾರ್ಯವಾಗುತ್ತದೆ. ಆದರೆ ಮಕ್ಕಳಿಗಲ್ಲ. ಮಕ್ಕಳನ್ನು ಪೋಷಕರೇ ಜಾಗರೂಕತೆಯಿಂದ ನೋಡಿಕೊಳ್ಳುವಾಗ ಮೊಬೈಲ್ ಏಕೆ ಬೇಕು? ಇಂದಿನ ಮಕ್ಕಳಿಗೆ ಗೇಮ್ಸ್ ಹುಚ್ಚು ಹೆಚ್ಚು. ಸಮಯದ ಅರಿವು ಇರುವುದಿಲ್ಲ. ಅಲ್ಲದೆ ಈ ಮಕ್ಕಳಿಗೆ ತಮ್ಮ ಬುದ್ಧಿ ತಮ್ಮ ಕೈಯಲ್ಲಿ ಇರಿಸಿಕೊಳ್ಳುವ ಶಕ್ತಿಯು ಇರುವುದಿಲ್ಲ. ಹಾಗಾಗಿ ಹಾಳಾಗುವ ಪ್ರಮೇಯವೇ ಹೆಚ್ಚು. ಅನಿವಾರ್ಯವಿದ್ದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವುದು ಬಹಳ ಮುಖ್ಯ. ಅನಗತ್ಯ ಕಾಲ್, ಮೆಸೇಜ್ ಕಳಿಸಿ ಭವಿಷ್ಯವನ್ನೇ ಮಂಕಾಗಿಸಿಕೊಂಡವರಿದ್ದಾರೆ. ಮಕ್ಕಳು ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡದೆ ಜವಾವ್ದಾರಿಯಿಂದ, ಬುದ್ಧಿವಂತಿಕೆಯಿಂದ ಬಳಸಿದಾಗ ಮಾತ್ರ ಮೊಬೈಲ್ ಒಳ್ಳೆಯ ಸ್ನೇಹಿತನಂತಿರುವುದು ಸತ್ಯ ತಾನೆ?
-ಪದ್ಮಾಕೃಷ್ಣಮೂರ್ತಿ, ತುಮಕೂರು

ಚಿಕ್ಕ ವಯಸ್ಸಿನಲ್ಲಿ ಮೊಬೈಲ್ ಬೇಡ
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ 'ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ' ಆಗುತ್ತದೆ. ಓದುವ ಮಕ್ಕಳು ಮೊಬೈಲ್‌ನಿಂದಾಗಿ ಆಟ-ಪಾಠಗಳಲ್ಲಿ ಆಸಕ್ತಿ ಕಳೆದುಕೊಂಡು ನಿರುತ್ಸಾಹದಿಂದ ಬಳಲುತ್ತಾರೆ. ಪ್ರೌಢಶಾಲೆ ಮತ್ತು ಕಾಲೇಜು ಮಕ್ಕಳಿಗೆ ಮೊಬೈಲ್ ಕೊಟ್ಟರೆ ದೇವರೇ ಗತಿ. ಮೊಬೈಲ್‌ನಿಂದ ಚಿಕ್ಕ ವಯಸ್ಸಿನಲ್ಲೇ ಲವ್ವು, ಡವ್ವು ದೊಡ್ಡ ದೊಡ್ಡ ಮಾತುಗಳು ಅನಾಹುತಕ್ಕೆಡೆ  ಮಾಡುತ್ತವೆ.  ಅವರು ದಿನವಿಡಿ ಫೇಸ್‌ಬುಕ್,ಇಂಟರ್‌ನೆಟ್‌ನಿಂದ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಅವರ ವಿದ್ಯಾಭ್ಯಾಸದಲ್ಸಿ ಸಪೋರ್ಟ್ ಮಾಡಲಿ. ಆದರೆ ಮೊಬೈಲ್ ಸಲ್ಲ.
 ದಂಡಿನಶಿವರ ಮಂಜುನಾಥ್, ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement