ಅವಲಕ್ಕಿ ಫ್ರೈ(ಪೋಹಾ)
ಬೇಕಾಗುವ ಸಾಮಗ್ರಿಗಳು: ಅವಲಕ್ಕಿ ಅರ್ಧ ಕಿಲೋ, ಬೆಲ್ಲ - ಸಣ್ಣ ತುಂಡು, ಹುಳಿ - ಒಂದು ಸಣ್ಣ ತುಂಡು, ತೆಂಗಿನ ತುರಿ - ಒಂದು ಕಪ್, ಎಣ್ಣೆ - 2 ಸ್ಪೂನ್, ಉಪ್ಪು - ರುಚಿಗೆ ತಕ್ಕಷ್ಟು, ಕರಿಬೇವಿನೆಲೆ - ಮುಷ್ಟಿಯಷ್ಟು, ಹಸಿ ಮೆಣಸು - 3 (ಸಣ್ಣಗೆ ಕತ್ತರಿಸಲಾರುವ), ಟೊಮೇಟೊ -1 (ಸಣ್ಣಗೆ ಕತ್ತರಿಸಿದ್ದು)
ಮಾಡುವ ವಿಧಾನ: ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬೆಲ್ಲ, ಹುಳಿ, ತೆಂಗಿನ ಕಾಯಿ, ಟೊಮೇಟೊ ಹಾಗೂ ಹಸಿಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಿ. ತದನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದೇ ಮಿಶ್ರಣಕ್ಕೆ ಅವಲಕ್ಕಿ ಸೇರಿಸಿ. ಬೇಕಿದ್ದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅವಲಕ್ಕಿಯನ್ನು ಚೆನ್ನಾಗಿ ಮಸಾಲೆಯೊಂದಿಗೆ ಬೆರೆಸಿ. ಉಪ್ಪು ಟೇಸ್ಟ್ ಮಾಡಿಕೊಳ್ಳಿ. ಬೇಕಿದ್ದಲ್ಲಿ ಸ್ವಲ್ಪ ಸೇರಿಸಿ. ನಂತರ 5 ನಿಮಿಷಗಳಷ್ಟು ಕಾಲ ಹಾಗೆಯೇ ಬಿಡಿ. ಪೂರ್ತಿ ಆದ ನಂತರ ಕರಿಬೇವಿನ ಒಗ್ಗರಣೆಯನ್ನು ಅವಲಕ್ಕಿ ಫ್ರೈಗೆ ಕೊಡಿ. ಟೇಸ್ಟೀ ಅವಲಕ್ಕಿ ಫ್ರೈ ಸವಿಯಲು ಸಿದ್ಧ. ಸಂಜೆಯ ಚಹಾದೊಂದಿಗೆ ಸವಿಯಲು ಬಲು ರುಚಿ. ಟಿ