ಬಾಯಿ ಬಿಡುವ ಮೊದಲು
ನೀವು ಮಾತನಾಡತೊಡಗಿದರೆ ಎದುರಿರುವವರು ದೂರ ಓಡುತ್ತಾರಾ? ಕೊರೆತವೊಂದೇ ಕಾರಣವಿದ್ದಿರಲಾರದು. ಬಾಯಿವಾಸನೆ ಬರುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಈ ವಾಸನೆಗೆ ಕಾರಣ. ಪ್ರತಿನಿತ್ಯ ಬೆಳಗ್ಗೆ, ರಾತ್ರಿ ಮಲಗುವಾಗ ಎರಡು ಬಾರಿ ಹಲ್ಲುಜ್ಜಿ. ಈ ಸಮಯದಲ್ಲಿ ನಾಲಿಗೆ ಕ್ಲೀನ್ ಮಾಡಿಕೊಳ್ಳಲು ಮರೆಯದಿರಿ. ಮೌತ್ ವಾಶ್ನರ್ ಜೊತೆಗಿಟ್ಟುಕೊಂಡು ಆಹಾರ ಸೇವಿಸಿದ ಬಳಿಕ ಮುಕ್ಕಳಿಸಿ. ಎಲ್ಲದಕ್ಕಿಂತ ಮೊದಲು ಹಲ್ಲುಗಳು ಹುಳ ಹಿಡಿದಿವೆಯೇ ಎಂದು ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಿ.