ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಫಿ ಮತ್ತು ಕೆಫಿನ್

Lingaraj Badiger
Updated On : 17 Jun 2014, 1:57 am

ಎಲ್ಲರ ಮನೆಯ ಬೆಳಗಿನ ಸೂರ್ಯನ ಕಿರಣಗಳ ಹಸಿಹಸಿ ಅನುಭವಕ್ಕೆ ಸುವಾಸನೆ ತುಂಬಿ ಬೆಚ್ಚಗೊಳಿಸುವ ಪಾನೀಯ ಕಾಫಿ. ಕೆಫಿನ್ ಬಗ್ಗೆ ಯಾರೇನೇ ಹೇಳಲಿ, ಅದಕ್ಕೂ ಮೊದಲು ಹೊಟ್ಟೆಗೆ ಕಾಫಿ ಸೇರಿ ನೆತ್ತಿಗದರ ಫೀಲ್ ಗುಡ್ ಪರಿಣಾಮ ತಟ್ಟಿರಬೇಕು. ಆನಂತರವೇ ಬೆಳಗಿನ ಉಳಿದ ಕೆಲಸಗಳು ಸರಾಗವಾಗಿ ನಡೆದುಕೊಂಡು ಹೋಗಲು ಸಾಧ್ಯ. ವಿದೇಶದಿಂದ ಆಮದು ಮಾಡಿಕೊಂಡ ಪಾನೀಯವೀಗ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮನೆಗೆ ಯಾರೇ ನೆಂಟರು ಬರಲಿ, ಕಾಫಿ ಕೊಟ್ಟರೇ ಉಪಚಾರ.

ಆಫೀಸ್‌ನಲ್ಲಿ ಕೆಲಸ ಮಾಡಲು ಮೂಡ್ ಸರಿ ಇಲ್ಲ, ಇಲ್ಲವೇ ವಿಪರೀತ ಕೆಲಸ- ನಿಮ್ಮ ಬಾಸ್ ಮೊದಲು ಕಾಫಿ ಕುಡಿದು ಬನ್ನಿ ಎನ್ನುತ್ತಾರೆ. ಕೆಫಿನ್ ಅಡಿಕ್ಟಿವ್ ಇರಬಹುದು, ಆದರೆ ನಮ್ಮನ್ನು ಆ್ಯಕ್ಟಿವ್ ಮಾಡುತ್ತದೆ. ಇನ್‌ಸ್ಟ್ಯಾಂಟ್ ಕಾಫಿಯೊಂದು ಕುಡಿದು ಮುಗಿಸುವ ಹೊತ್ತಿಗೆ ಇನ್‌ಸ್ಟ್ಯಾಂಟ್ ಆಗಿ ಮನಸ್ಸು ಚೇತೋಹಾರಿಯಾಗುತ್ತದೆ. ಕೆಫಿನ್ ನಮ್ಮ ಮೆದುಳು ಮತ್ತು ಕೇಂದ್ರ ನರಮಂಡಲವನ್ನು ಜಾಗೃತಗೊಳಿಸುತ್ತದೆ. ಹೀಗಾಗಿ ಕಾಫಿಯೊಂದು ಏಕಾಗ್ರತೆ ನೀಡುತ್ತದೆ, ಪ್ರತಿಕ್ರಿಯೆ ನೀಡುವ ಸಮಯವನ್ನು ಸ್ಪೀಡ್ ಮಾಡುತ್ತದೆ.

ಇಷ್ಟೇ ಅಲ್ಲ, ಕಾಫಿ ಅದೆಷ್ಟೋ ಮಂದಿಯನ್ನು ಡಿಪ್ರೆಶನ್‌ಗೆ ಹೋಗುವುದರಿಂದ ತಡೆಗಟ್ಟಿದೆ ಎಂದರೆ ನಂಬಲೇಬೇಕು. ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಕೋಶಗಳು ಡ್ಯಾಮೇಜ್ ಆಗುವುದನ್ನು ತಡೆಗಟ್ಟಿ ಕ್ಯಾನ್ಸರ್ ತಡೆಗಟ್ಟುವಲ್ಲಿ, ಹೃದಯ ರೋಗಗಳನ್ನು ತಡೆವಲ್ಲಿ, ಪಾರ್ಕಿನ್‌ಸನ್ಸ್ ರೋಗ ತಡೆವಲ್ಲಿ ಕೂಡಾ ಸಹಾಯಕಾರಿಯಾಗಿವೆ.
ಕೆಫಿನ್ ಕಾಫಿಯಲ್ಲಷ್ಟೇ ಅಲ್ಲ, ಟೀ, ಕೋಕ್, ಪೆಪ್ಸಿಯಲ್ಲಿ, ಕೆಲವು ಪೇನ್ ಕಿಲ್ಲರ್ ಮಾತ್ರೆಗಳಲ್ಲಿ, ತಲೆನೋವಿಗೆ ಹಚ್ಚುವ ಬಾಮ್‌ಗಳಲ್ಲಿ, ಎನರ್ಜಿ ಡ್ರಿಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಚಾಕೋಲೇಟ್‌ನಲ್ಲೂ ಇರುತ್ತದೆ, ಕಡಿಮೆ ಪ್ರಮಾಣದಲ್ಲಿ. ಹೀಗಾಗೇ ಇವುಗಳನ್ನು ಸೇವಿಸಿದಾಗ ನಮಗೆ ಒಂದು ಸ್ಪೆಶಲ್ ಖುಷಿ ಸಿಗುವುದು.

ಆದರೆ, ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ. ಮಲಗುವ ಮುನ್ನ ದೇಹ ಸೇರಿದ 150 ಎಂಜಿಗಿಂತಾ ಹೆಚ್ಚು ಪ್ರಮಾಣದ ಕೆಫಿನ್ ನಿಮ್ಮ ನಿದ್ದೆಗೆಡಿಸಬಲ್ಲದು. 600 ಎಂಜಿಗಿಂತಾ ಹೆಚ್ಚಿನದು ಹೃದಯಬಡಿತ ಜೋರುಗೊಳಿಸಿ, ತಲೆನೋವು, ರೆಸ್ಟ್‌ಲೆಸ್‌ನೆಸ್‌ಗೆ ಕಾರಣವಾಗಬಹುದು. ಒಂದು ಕಪ್ ಕಾಫಿಯಲ್ಲಿ ಸುಮಾರು 150- 200 ಎಂಜಿಯಷ್ಟು ಕೆಫಿನ್ ಇರುತ್ತದೆ ಎಂಬುದು ಗಮನದಲ್ಲಿರಲಿ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement