ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗರಿಗರಿ ಹಾಗಲಕಾಯಿ

Lingaraj Badiger
Updated On : 17 Jun 2014, 2:02 am

ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ-6 (ದಪ್ಪನೆಯ ಸುರುಳಿ ಆಕಾರದಲ್ಲಿ ಕತ್ತರಿಸಿದ್ದು), ಚನ್ನಾ ದಾಲ್ 1 ಸ್ಪೂನ್, ಜೀರಿಗೆ ಅರ್ಧ ಸ್ಪೂನ್, ಸಾಸಿವೆ ಅರ್ಧ ಸ್ಪೂನ್, ಕರಿಬೇವಿನೆಲೆ 7-8, ಕೆಂಪು ಮೆಣಸು-3, ಬೆಳ್ಳುಳ್ಳಿ 5, ತೆಂಗಿನ ಕಾಯಿ ಅರ್ಧ ಕಪ್ (ತುರಿದದ್ದು), ಅರಶಿನ ಪುಡಿ ಅರ್ಧ ಸ್ಪೂನ್, ಮೆಣಸಿನ ಪುಡಿ 1 ಸ್ಪೂನ್,ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ 2 ಸ್ಪೂನ್.

ಮಾಡುವ ವಿಧಾನ:
ಕತ್ತರಿಸಿದ ಹಾಗಲಕಾಯಿಗಳನ್ನು ಉಪ್ಪು ಮತ್ತು ಅರಶಿನ ಪುಡಿ ಹಾಕಿ 10 -15 ನಿಮಿಷಗಳ ಕಾಲ ಮುಳುಗಿಸಿಡಿ.

ಹಾಗಲಕಾಯಿ ಕಹಿ ರಸವನ್ನು ಹಿಂಡಿ ತೆಗೆದು ಪಕ್ಕದಲ್ಲಿಡಿ. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಹಾಗಲಕಾಯಿಯನ್ನು ಕಂದು ಬಣ್ಣ ಮತ್ತು ಗರಿಗರಿಯಾಗಿರುವಂತೆ ನೋಡಿಕೊಳ್ಳಿ. ನಂತರ ತೆಂಗಿನ ಕಾಯಿ, ಬೆಳ್ಳುಳ್ಳಿ ಮತ್ತು ಮೆನಸಿನ ಪುಡಿಯನ್ನು ಸೇರಿಸಿ ಪೌಡರ್‌ನಂತೆ ರುಬ್ಬಿಕೊಳ್ಳಿ. ಪ್ಯಾನ್‌ನಲ್ಲಿ ಎರಡು ಸ್ಪೂನ್‌ಎಣ್ಣೆ ಹಾಕಿ ಜೀರಿಗೆ, ಚನ್ನಾ ದಾಲ್, ಸಾಸಿವೆ, ಕೆಂಪು ಮೆಣಸು, ಕರಿಬೇವನ್ನು ಹಾಕಿ ಹುರಿಯಿರಿ. ಹುಡಿ ಮಾಡಿದ ತೆಂಗಿನ ಕಾಯಿ ಮಿಶ್ರಣವನ್ನು ಹಾಕಿ ಮತ್ತು 3-4 ನಿಮಿಷಗಳ ಕಾಲ ಬೇಯಿಸಿ. ಇದೀಗ ಚೆನ್ನಾಗಿ ಹುರಿದ ಹಾಗಲಕಾಯಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಉಪ್ಪು ಸೇರಿಸಿ ಸ್ವಲ್ಪ ಫ್ರೈ ಮಾಡಿ. ಗರಿಯಾದ ಹಾಗಲಕಾಯಿ ಫ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement