ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೊಬೈಲ್ ಬಗ್ಗೆ ಆಸಕ್ತಿ ಬೇಡ

Lingaraj Badiger
Updated On : 17 Jun 2014, 2:00 am

ಮಕ್ಕಳಿಗೆ ಮೊಬೈಲ್ ಕೊಡಿಸುವುದು ಯಾವ ವಯಸ್ಸಿಗೂ ಸೂಕ್ತವಲ್ಲ. ಅವರು ಸ್ವಾವಲಂಬಿಗಳಾದಾಗ ತಾವೇ ಕೊಳ್ಳುತ್ತಾರೆ. ಅನೇಕ ಪೋಷಕರು ಮೊಬೈಲ್ ಕೊಡಿಸುವ ಆಸೆ ತೋರಿಸಿ ಓದಲು ಪ್ರೇರೇಪಿಸುತ್ತಾರೆ. ಅಂತಹ ಪ್ರೇರಣೆ ಮಕ್ಕಳಲ್ಲಿ ಮೊಬೈಲ್ ಪಡೆಯುವವರೆಗೆ ಮಾತ್ರ, ನಂತರ ಮೊಬೈಲ್‌ನ್ನು ಬಳಸುವುದರಲ್ಲೇ ಸಮಯ ಹಾಳಾಗಿ ಹೋಗುತ್ತದೆ. ತಮ್ಮ ಓದು-ಬರಹಕ್ಕಿಂತ ಮೊಬೈಲ್ ಮೇಲೆಯೇ ಆಕರ್ಷಣೆ ಹೆಚ್ಚಾಗುತ್ತದೆ. ಹಾಗಾಗಿ ಅವರಿಗೆ ಹೊಸ ಮೊಬೈಲ್ ಕೊಡಿಸುವುದು ಹಾಗಿರಲಿ ಮನೆಯಲ್ಲಿನ ಮೊಬೈಲ್‌ಗಳಿಂದ ಕೂಡ ದೂರವಿರುವಂತೆ ನೋಡಿಕೊಳ್ಳಿ. ಮೊಬೈಲ್ ಸೃಷ್ಟಿಸಿದ ಅವಾಂತರಗಳು ಅಷ್ಟಿಷ್ಟಲ್ಲ.
ಟಯಶೋಧಾ ಇಂಗಳಕಿ, ಹಾವೇರಿ

ಬಾಲ್ಯದಲ್ಲಿ ಮೊಬೈಲ್ ಬೇಡ
ಮಕ್ಕಳಿಗೆ ಮೊಬೈಲ್‌ನ ಅಡ್ಡ ಪರಿಣಾಮಗಳನ್ನು ತಿಳಿಸಿ ಈಗ ವಿದ್ಯಾಭ್ಯಾಸದ ಕಡೆ ಆಸಕ್ತಿ ವಹಿಸಲು ಹೇಳಿ. ಮುಂದೆ ದುಡಿಯುವ ವಯಸ್ಸಿಗೆ ಬಂದ ನಂತರ ಕೊಂಡು ಬಳಸಬಹುದು ಎಂದು ಕೂಡ ಅರ್ಥ ಮಾಡಿಸಿ. ಅಲ್ಲದೇ ಪೋಷಕರು ಕೂಡ ಬೇಸಿಕ್ ಮಾಡೆಲ್‌ಗಳನ್ನೆ ಕೊಂಡರೆ ಮಕ್ಕಳು ಹಾಳಾಗುವ ಸಾಧ್ಯತೆಗಳು ಕಡಿಮೆ. ಫೋನ್ ಮಾಡಲು ಅನುಕೂಲವಾದರೆ ಸಾಕು, ಅದಲ್ಲದೇ ಕ್ಯಾಮೆರಾ, ರೇಡಿಯೋ, ಇಂಟರ್‌ನೆಟ್ ಇರುವ ಮೊಬೈಲ್‌ಗಳು ಪೋಷಕರ ಬಳಿ ಇದ್ದರೆ ಅದನ್ನು ಕಂಡೂ ಕಾಣದಂತೆ ಬಳಸುವ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಕಳೆದುಕೊಂಡು ಹಾಳಾಗುವ ಸಂಭವವೇ ಹೆಚ್ಚು. ಆದ್ದರಿಂದ ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಸ್ವಲ್ಪ ತ್ಯಾಗ ಮಾಡಬೇಕು.
ಟಕೆ. ಜೆ ರಾಮಪ್ರಸಾದ್, ಕಡೂರು

ಓದಿಗೆ ತಿಲಾಂಜಲಿ ನೀಡಬೇಕಾದೀತು
ಈ ಮೊಬೈಲ್ ಎನ್ನುವ ಸಂಚಾರವಾಣಿ ಪ್ರಪಂಚದಲ್ಲಿ ಎಷ್ಟು ಸಂಚಾರ ಮೂಡಿಸಿದೆ ಎಂದರೆ 'ಮೊಬೈಲ್ ಮುಟ್ಟದ ಮಕ್ಕಳಿಲ್ಲ' ಎಂಬಂತಾಗಿದೆ. ಇದು ತಪ್ಪಬೇಕು. ಈ ಗೂಗಲ್ ಯುಗದಲ್ಲಿ ಮೊಬೈಲ್ ಒಂದು ರೀತಿಯಲ್ಲಿ ಫ್ಯಾಷನ್ ವಸ್ತುವಾಗಿದೆ. ಪೋಷಕರು ತಮಗೆ ಮೊಬೈಲ್‌ನಲ್ಲಿ ಗೊತ್ತಿಲ್ಲದ ಯಾವ ವಿಷಯವನ್ನಾದರೂ ಮಕ್ಕಳಲ್ಲಿ ಕೇಳಿದರೆ ಸುಲಲಿತವಾಗಿ ಹೇಳಬಲ್ಲರು ಅಷ್ಟು ಅಪಡೇಟ್ ಆಗಿರುತ್ತಾರೆ. ಇದು ಪೋಷಕರಿಗೆ ಹೆಮ್ಮೆಯ ಸಂಗತಿ ಕೂಡ. ಆದರೆ ಇದೇ ನಿರಂತರ ನಡೆದರೆ ಓದಿಗೆ ತಿಲಾಂಜಲಿ ನೀಡಬೇಕಾದೀತು ಎಂದು ಅರಿತಿಲ್ಲ. ಅಲ್ಲದೇ ಮೊಬೈಲ್‌ನಿಂದ ಹೊರಬರುವ ಕಾರ್ಬನ್ಸ್ ಅಲೆಗಳು ಮಕ್ಕಳ ಮೆದುಳಿಗೆ, ಕಿವಿಗಳಿಗೆ ಹಾನಿಯುಂಟು ಮಾಡುವ ಅಪಾಯವಿದೆ.
-ಎಂ. ಜಿ. ಸುರೇಶ್, ಭದ್ರಾವತಿ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಮಕ್ಕಳಿಗೆ ಯಾವ ವಯಸ್ಸಿನಿಂದ ಮೊಬೈಲ್ ಕೊಡಿಸುವುದು ಸೂಕ್ತ.' ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement